ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೭೦

ನೋವು

ಅಷ್ಟರಲ್ಲಿ ಶ್ರೀನಿವಾಸಯ್ಯ ಪಡಸಾಲೆಯಿಂದ, "ಅಮ್ಮ ಸ್ವಲ್ಪ ಇಲ್ಲಿ ಬಾ,” ಎಂದು
ಕರೆದುದು, ಕೇಳಿಸಿತು.
ಅಲ್ಲಿಗೆ ಹೋದ ತಾಯಿಗೆ ಶ್ರೀನಿವಾಸಯ್ಯ, "ಮಾತಾಡ್ಬೇಕು. ಕೂತ್ಕೊ,”
ಎಂದರು.
ಆಗಲೆ ಮಿಂದು ಮಡಿಯುಟ್ಟಿದ್ದ ದೊಡ್ಡಮ್ಮ ನಿಂತುಕೊಂಡೇ," ಏನು ಶೀನ ?"
ಎಂದು ಕೇಳಿದರು.
ಗೋಡೆಗಾಗಲೀಬಾಗಿಲ ಚೌಕಟ್ಟಿಗಾಗಲೀ ಆಧರಿಸದೆ ನೆಟ್ಟಗೆ ನಿಂತಿದ್ದ ತಾಯಿಯನ್ನು
ಕಂಡು ಶ್ರೀನಿವಾಸಯ್ಯನಿಗೆ, ಇವಳೀಗ ಈ ಸಂಸಾರದ ಆಧಾರ ಸ್ತಂಭ ಎನಿಸಿತು.
ಶ್ರೀನಿವಾಸಯ್ಯ ಆರಂಭಿಸಿದರು:
"ನಗರದಿಂದ ಬಂದಿದಾರಲ್ಲ ಆತ ನೆಂಟಸ್ತನದ ಪ್ರಸಾಪ ಮಾಡಿದಾರೆ.
"ದೊಡ್ಡಮ್ಮನ ಮುಖದ ಮೇಲಿನ ಜೀವನಾನುಭವದ ಗೆರೆಗಳು ಮಿಸುಕಿದುವು. ಒಣಗಿದ್ದ
ಅವರ ತುಟಿಗಳು ಮುಗುಳುನಗೆಯನ್ನು ಸೂಸಿ ಸಜೀವವಾದುವು.
"ಹೌದೆ? ಅಷ್ಟಲ್ವೆ ಇಷ್ಟು ದೂರ ಯಾರಾದರೂ ಬರಾರೆಯೇ ?"
"ಮನೆುಷ್ಯನೇನೋ ಅನುಕೂಲಸ್ಥ. ಇಬ್ಬರು ಹುಡುಗೀರಿಗೆ ಮದುವೆ ವಯಸ್ಸಂತೆ."
"ಮದುವೆ ವಯಸ್ಸಂದ್ರೇನೊ ಶೀನು? ಎಂಟೆ, ಹತ್ರೆ, ಹನ್ನೆರಡೆ ?” ಹಾಗೆ ಕೇಳುತ್ತ ದೊಡ್ಡಮ್ಮನಿಗೆ ನಗು ಬಂತು.
ಶ್ರೀನಿವಾಸಯ್ಯನೂ ಸಣ್ಣಗೆ ನಕ್ಕರು.
"ಇಪ್ಪತ್ತೊ ಇಪ್ಪತ್ತೆರಡೋ? ಯಾರಿಗೆ ಗೊತ್ತಮ ?"
"ಜಾತಕ ತರಿಸು. ಗೊತಾಗುತ್ತೆ."
"ನೀನು ಒಪ್ಪಿದರೆ ಕಳಿಸೋಕೆ ಹೇಳೋಣಾಂತಿದ್ದೆ. ನಾವು ಇಷ್ಟಪಡೋದಾದ್ರೆ.
ಗೋವಿಂದ-ಪದ್ಮನಾಭ ಇಬ್ಬರನ್ನೂ ಅಳಿಯಂದಿರಾಗಿ ಸ್ವೀಕರಿಸೋಕೆ ಆತ ಸಿದ್ದ."
ಶ್ರೀನಿವಾಸಯ್ಯ ಹಾಗೆ ಹೇಳುತ್ತಿದ್ದಂತೆ ಭಾಗೀರಥಿ ಮಗುವಿನೊಡನೆ ಪಡಸಾಲೆಗೆ
ಬಂದು ಧಡಧಡನೆ ತನ್ನ ಕೋಣೆಗೆ ಹೋದಳು.
"ಮಗೂನ ಮಲಗಿಸಿಬಿಡು." ಎಂದರು ದೊಡ್ಡಮ್ಮ.
"ಹೂಂ" ಎಂದಳಾಕೆ, ಬಾಗಿಲನ್ನು ಮರೆ ಮಾಡುತ್ತ, ತಾನ್ಸು ಬರುವುದರೊಳಗೆ
ಅದೇನು ಮಾತಾಡಿಬಿಟ್ಟರೊ ? ಈ ಮಗು ಅಳದೇ ಇದ್ದರೆ ಮಾತು ಕೇಳಿಸಬಹುದು. ಒಮ್ಮೆ
ಇದು ತೆಪ್ಪಗೆ ಮಲಗಿದರೆ ಸಾಕಪ್ಪ ಎಂದುಕೊಂಡು, ಮಗನನ್ನು ತೊಟ್ಟಿಲಲ್ಲಿ ಮಲಗಿಸಿ
ಭಾಗೀರಥಿ ತೂಗತೊಡಗಿದಳು.
ಶ್ರೀಪಾದನೋ ಜೋ ಜೋ ರಾಗ ಕೇಳಿಯೇ ಮಲಗುವ ಅಭಾಸದ ಮಗು. ಆದರೂ
ಅತ್ತ ಕಿವಿಗಳನ್ನು ಪಡಸಾಲೆಗೆ ಮಿಾಸಲಿಟು "ಜೋ ಜೋ ಕಂದ" ಎಂದು ಪಲ್ಲವಿ ಹಾಡಿದಳು.
ಭಾಗೀರಥಿ.
ದೊಡ್ಡಮ್ಮ ಮಗನಿಗೆ ಅಂದರು:
"ಒಂದೇ ಮನೆಯಿಂದ ಇಬ್ಬರು ಹುಡುಗಿಯರನ್ನೆ ತರೋದು ಅಷ್ಟೊಂದು ಚೆನ್ನಾಗಿ
ರೋಲ್ಲ ಶೀನ."