ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೭೮

ನೋವು

ವಿಧಿ ಕೂನ್ರಿರವಾಗಿದೆ ಎಂದು ಅವರಿಗೆ ಅನೇಕ ವೇಳೆ ಅನಿಸುತ್ತಿತ್ತು.
ತಮ್ಮದೇ ಮಗು ಎಂಬಷ್ಟು ಮಮತೆಯಿಂದ ತಾವು ಬೆಳೆಸಿದ ಹುಡುಗಿ ಸುಬ್ಬಿ.
ಪಾಲನೆ ಪೋಷಣೆಗೆ ಸಂಬಂಧಿಸಿ ರಂಗಣ್ಣ-ಸುಭಧ್ರೆಯರ ನಡುವೆ ಅವರು ತಾರತಮ್ಯ
ಮಾಡಿದರು, ಎಂದಲ್ಲ. ಆ ಬಗೆಯ ಯೋಚನೆ ಅವರಿಗೆ ಕನಸಿನಲ್ಲಿಯೂ ಸಾಧ್ಯವಿಲ್ಲದ್ದು.
ಆದರೂ, ರಂಗ ಆಗಲೇ ಐದಾರು ವರ್ಷ ದೊಡ್ಡವ. ತನಗೊಬ್ಬಳು ತಾಯಿ ಇದ್ದಳು
ಎಂಬುದನ್ನು ಸದಾಕಾಲವೂ ನೆನಪಿಡುವ ಮಟ್ಟಿಗೆ ಭಾಗ್ಯಶಾಲಿ. ಸುಬ್ಬಿಗಾದರೋ ನಾಗಮ್ಮನೇ
ಅಮ್ಮ.
ಆದರೂ, ಅಮ್ಮನೆಂದೇ ಸುಭದ್ರೆ ತಮ್ಮನ್ನು ಕರೆಯಬೇಕೆಂಬ ಹಟ ಇತ್ತೆ ಅವರಿಗೆ ?
ರಂಗಣ್ಣ 'ಅತ್ತೆಮಾ' ಎನ್ನುತ್ತಿದ್ದ; ತೊದಲತೊಡಗಿದಾಗ ಸುಬ್ಬಿಯನೂ ಅಣ್ಣನನ್ನು
ಅನುಕರಿಸಿ 'ಅತ್ತೇ' ಎಂದಿದ್ದಳು.
ಆ ಮಾತಿಗೆ ಹದಿನೈದು ವರ್ಷಗಳೋ ಹದಿನಾರೋ ಆದುವಲ್ಲ?
"ಸುಬ್ಬಿ."
"ಏನು ಅತ್ತೆಮಾ ?"
"ಯಾನ್ಮಾಡ್ತಿದೀಯ ?"
ಸಣ್ಣಗೆ ನಕ್ಕಳು ಹುಡುಗಿ. ನಾಗಮ್ಮನ ಹೊಟ್ಟೆ ತುಂಬಿತು.
"ಎರಳು ಆಕಿಸ್ಕೋತ ಕುಂತಿವ್ನಿ, ಅತ್ತೆಮಾ!"
"ಊಂ. ಮೊಗ, ಸುಮ್ಕಿದೀಯಲ್ಲ, ಅದಕ್ಕಂದೆ."
ಹುಡುಗಿ ಮೌನ. [ಮತ್ತೆ ಅಂತರ್ಮುಖಿಯಾದಳು ಸುಭದ್ರೆ.]
ನಾಗಮ್ಮನೇ ಅಂದರು:
"ಪದ್ಮಣ್ಣ ಈ ಕಡೆ ಬರ್ಲೆ ಇಲ್ಲ."
"........."
"ಜಗಳ ಆತಾ ಸುಬ್ಬಿ ?"
"ಅವರ್ನ ಕಂಡರೆ ರಂಗಣ್ಣ ಉರಿ ಕಾರ್ತಾನೆ, ಅತ್ತೆಮ್ಮ."
"ಯಾರ್ನ ?"
"ಅವರ್ನ; ಅಯ್ಯನೋರ ಮನೆಯೋರ್ನ."
ಅವರು ಬ್ಯಾರೆ ಜನ, ನಾವು ಬಾರೆ ಜನ ಸುಬ್ಬಿ."
"........."
"ಆದರೂ ಜಗಳ ಮಾತ್ರ ಸರಿಯಲ್ಲ. ಅವರುಡ್ಗ ಪದ್ಮ ನಿನ್ತಾವ ಯಾನಾದರೂ
ಅಂದ್ನ ?"
"ಬಾಡಿ ಅತ್ತೆಮ್ಮ! ಆ ಮಾತು ಬ್ಯಾಡಿ."
ಹುಡುಗಿ ಗದ್ಗದಿತೆ. [ಬೊಗಸೆ ಕಣ್ಣುಗಳು ನೀರಲ್ಲಿ ತೇಲಾಡಿದುವು.]
"ಅಳಬಾರ್ದು ಸುಬ್ಬಿ. ಅಳಬ್ಯಾಡ ಕಂದ."
ನಾಗಮ್ಮ ಹಣಿಗೆಯನ್ನು ಕೆಳಗಿಟ್ಟು ಹುಡುಗಿಯ ಭುಜಗಳನ್ನು ಹಿಡಿದು ತಿರುಗಿಸಿ
ಮುಖ ನೋಡಿದರು. ತಮ್ಮ ತೊಡೆಯ ಮೇಲೆ ಆಕೆಯನ್ನೊರಗಿಸಿಕೊಂಡು, ತಮ್ಮ ಸೆರಗಿ