ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ನೋವು

೭೭

"ಮೊದಲು ಸುಬ್ಬಿ ಓದ್ಲು, ಆ ಮೇಲೆ ನಾನ್ಹೋದೆ."
"ಎಂ‌ಥ ఆಟ ?”
"ಆಟ ಆಡ್ಲಿಲ್ಲ ಅತ್ತೆಮ್ಮ. ವಾಫ್ಸು ಬಂದ್ಬುಟ್ಟೊ."
ಹಣೆ ನೆರಿಗೆ ಕಟ್ಟಿಕೊಂಡು ನಾಗಮ್ಮ ಯೋಚಿಸಿದರು : ಇದೇನಿರಬಹುದು ? ಏನಿದರ
ಅರ್ಥ ?
ಉತ್ತರ ಹೊಳೆಯಲಿಲ್ಲ. ನಿಟ್ಟುಸಿರುಬಿಡುತ್ತ ತಲೆ ಕೊಡವಿದರು.
...ಸಿಕ್ಕುಗಟ್ಟಿದ್ದ ನಾಗಮ್ಮನ ಯೋಚನೆಗಳು ಬಿಟ್ಟುಕೊಂಡುದು ಆ ಸಂಜೆ.
ಸೋದರ ಸೊಸೆಯ ಬಳಿ ಸಾರಿ ಅವರೆಂದರು:
"ಬಾ ಮೊಗ, ತಲೆ ಬಾಚಿ ಕಟ್ತೀನಿ.”
"ಬ್ಯಾಡಿ, ಅತ್ತೆಮ್ಮ."
"ಬ್ಯಾಡ್ವಂತೆ. ಬಾ, ಬಾ. ಜಗಲಿಯಾಗೆ ಕುಂತ್ಕಳ್ಳಾನ. ಅಲ್ಲಿ ಬೆಳಕೈತೆ."
"ನಾನೊಲ್ಲೆ, ಅತ್ತೆಮ್ಮ, ರಂಗಣ್ಣ ಬಯ್ತಾನೆ.”
"ಬಯ್ತಾನ, ಯಾಕೆ?"
"ನಾನು ತಲೆ ಬಾಚ್ಕೊಳ್ಳೋದು ಅವನಿಗೆ ಇಸ್ಟ ಇಲ್ಲ."
"ಓ ಓ ಓ.... ಒಳ್ಳೆ ಯೋಳ್ದೆ. ನಡಿ. ನಾನವನನ್ನ ತರಾಟೆಗೆ ತಕಂತೀನಿ. ಮನೆಗೆ.
ಬರ್ಲಿ." "ಮನೆಯಾಗಿಲ್ಲವಾ ಅವ್ನು ?"
"ಇಲ್ಲ. ಒರಗೋಗವನೆ."
ಸುಭದ್ರೆ ನಾಗಮ್ಮನ ಜತೆ ಜಗಲಿಗೆ ಬಂದಳು. ನಾಗಮ್ಮ ಕೊಬರಿ ಎಣ್ಣೆಯ ಬಟ್ಟಲು.
ತಂದು ಸೊಸೆಯ ಕೂದಲಿಗೆ ಎಣ್ಣೆ ಸವರಿದರು. ಸೋಮಪುರದ ಜಾತ್ರೆಯಲ್ಲಿ ಶಾಮೇಗೌಡರು
ಕೊಂಡು ತಂದಿದ್ದ ದಂತದ ಬಾಚಣಿಗೆಯಿಂದ ತಲೆಗೂದಲು ಸಿಕ್ಕು ಬಿಡಿಸಿದರು.
ಸುಬ್ಬಿಯ ಕೂದಲು ನೀಳವೂ ಅಲ್ಲ, ಮೋಟೂ ಅಲ್ಲ. ಆದರೂ ಸಮೃದ್ಧವಾಗಿತ್ತು.
ಎರಡೂ ಕೈಗಳಿಂದ ಬಾಚಿ ಹಿಡಿಯುವಷ್ಟು. ನಾಗಮ್ಮನಿಗೆ ನೆನಪಿತ್ತು. ಅಂಥದೇ ತಲೆಗೂದ
ಲಿತ್ತು ಸುಬ್ಬಿಯ ತಾಯಿಗೆ. ಅವಳು ಈ ಮನೆಗೆ ಬರುವುದಕ್ಕೆ ಮುಂಚೆ ತಾವು ಹೊರಟು
ಹೋಗಿದ್ದರು ನಿಜ. ಹೋದ ಮನೆಯಲ್ಲಿ ಎಲ್ಲವೂ ಇತ್ತು, ತಮ್ಮ ಗಂಡನ ಆರೋಗ್ಯ
ವೊಂದರ ಹೊರತಾಗಿ. ತಾವು ವಿಧವೆಯಾಗುವುದಕ್ಕೆ ಮುನ್ನ ಗಂಡನ ಜತೆ ಒಂದೆರಡು ಸಾರೆ
ನಾಗಮ್ಮ ತವರು ಮನೆಗೆ ಬಂದಿದ್ದರು. ಅವರ ತಾಯಿ ಆಗಿನ್ನೂ ಜೀವಂತವಾಗಿದ್ದ ದಿನಗಳು.
ಮುಂದೆ ಅನೇಕ ವರ್ಷಗಳ ಕಾಲ ತವರು ಅವರಿಗೆ ದೂರವಾಗಿತ್ತು. ಸುಬ್ಬಿ ತಬ್ಬಲಿಯಾದಾಗ
ನಾಗಮ್ಮನವರ ಅಣ್ಣ ಆಕೆಯ ಗಂಡನ ಮನೆಗೆ ಬಂದು, ಕಂಬನಿ ಒರೆಸಿದ ಕಣ್ಣುಗಳನ್ನು
ತಿಕ್ಕಿಕೊಳ್ಳುತ್ತ, "ನಾಗೂನ ಕಳಿಸ್ಕೊಡಿ, ಒಂದು ವರ್ಷ ಕಣಿವೇಹಳ್ಳಿಯಾಗಿರ್ಲಿ," ಎಂದಿದ್ದರು.
ಅಣ್ಣನ ದುಃಖದಲ್ಲಿ ಭಾಗಿಯಾದರೂ, ತಮ್ಮ ಬದುಕು ಕೃತಾರ್ಥವಾಯಿತೆಂಬ
ಭಾವನೆಯಿಂದ ನಾಗಮ್ಮ ಒಡಹುಟ್ಟಿದವನನ್ನು ಹಿಂಬಾಲಿಸಿ, ಹಾಲು ಹಸುಳೆಯ ಆರೈಕೆಯ
ಭಾರ ಹೊತ್ತಿದ್ದರು.
ತಮಗೆ ವೈಧವ್ಯ ಪ್ರಾಪ್ತವಾಯಿತು; ಅಣ್ಣನ ಹೆಂಡತಿ ಸತ್ತಳು. ನಿಷ್ಕಾರಣವಾಗಿ