24 ಪಂಚತಂತ್ರ ಕಥೆಗಳು, ಆ ಮಾತನ್ನು ಕೊಕ್ಕರೆ ಕೇಳಿ-ನಾನು ಇದುವರೆಗೆಂದೂ ಕರ್ಕಟಕ ಮಾಂಸದ ರುಚಿಯನ್ನರಿಯೆನು, ಇಂದು ದೈವವಶದಿಂದ ನನಗದು ಅಭಿ ಸಿತು-ಎಂದು ಮನಸ್ಸಿನಲ್ಲಿ ಉಬ್ಬಿ, ತೊರೆಯಾಗಿ ಅದನ್ನು ತನ್ನ ಮೂಗಿ ನಲ್ಲಿ ಕಚ್ಚಿ ಹಿಡಿದುಕೊಂಡು ಮುಂಚೆ ತಾನು ಮತ್ರ ಗಳನ್ನು ಭಕ್ಷಿಸಿದ ಸ್ಥಳಕ್ಕೆ ಹೋಗಿ ಕಲ್ಲಿನಮೇಲಕ್ಕೆ ಬಾಗಲು, ಆ ನಳ್ಳಿ ಮತ್ತ್ವಗಂಧ ವನ್ನು ಕಂಡುಕೊಂಡು (ಈ ಮರಾತ್ಮನು ಕಪಟೋಪಾಯದಿಂದ ಮಾನುಗಳನ್ನೆಲ್ಲಾ ಇಲ್ಲೇ ಕೊಂದು ತಿಂದನು ' ಎಂದು ಎಣಿಸಿ ತನ್ನಲ್ಲಿ ತಾನು ಇಂತೆಂದಿತು. ಸಾಹಸವಿಲ್ಲದವನ ಬಾಳು ಏತಕ್ಕೆ? ಶೂರನಾದವನು ಭುಜಬs ದಿಂದ ವಿಜೃಂಭಿಸಿ ಶತ್ರುಸಮೂಹಗಳನ್ನು ಕೊಲ್ಲಲಾದರೂ ಕೊಲ್ಲುವ ನು, ಇಲ್ಲವೇ ತಾನು ಸಾಯಲಾದರೂ ಸಾಯುವನು, ಹೇಡಿಗಳು ಸ್ವಲ್ಪ ಹೊತ್ತು ಯುದ್ಧಭೂಮಿಯಲ್ಲಿ ನಿಂತು ಜಯವನ್ನು ಪಡೆಯಲಾರದೆ ಓಡಿಹೋಗುವರು. 'ಮೃತ್ಯುವು ಸವಿಾಪಿಸಿವಾಗ ಶರೀರವನ್ನು ಬಿಚಿ ಟ್ಟು ಕೊಳ್ಳಲಿಕ್ಕೆ ಆದೀತೆ ? ಅದನ್ನು ಹೀನರಾದವರು ಅರಿಯದೆ ಇಜಿ ಪರ ಸುಖವನ್ನು ಕೆಡಿಸಿಕೊಳ್ಳುವರು ; ಬುದ್ದಿ ವಂತರಾದವರು ಆ ಸಮಯದಲ್ಲಿ ಹಿಂತೆಗೆಯದೆ ನಿಂತು ಇತಪರಸುಖಗಳನ್ನು ಅನುಭವಿಸುವರು. ಈ ಲೋಕದಲ್ಲಿ ಹಾಗೆಗೆ ಯಾರಿಗೂ ಕಡಿಮೆಯಿಲ್ಲ. ಅಂಥಾ ಹಗೆ ಬಲ ವಂತವಾದುದಾಗಿ ಇದ್ದರೆ ತನಗೆ ತಕ್ಕ ಸಹಾಯನ್ನು ಸೇರಿಸಿಕೊಂಡು ಹಗೆಯಾಳುಗಳನ್ನು ಸಾಧಿಸಬೇಕು. ತಾನು ಬಲವನ್ನು ಸೇರಿಸಿಕೊಳ್ಳು ವುದಕ್ಕಿಂತ ಮುಂಚೆ ಹಗೆಗಾರನು ಸಮಯನೋಡಿ ಎದ್ದು ಬಂದಲ್ಲಿ ತಾನು ಮುಖವ ತಪ್ಪಿಸಿಕೊಳ್ಳದೆ ಹಗೆಗಾರನ ಮೇಲೆ ಬಿದ್ದು ಅವನನ್ನಾದರೂ ಕೊಲ್ಲಬೇಕು, ತಾನಾದರೂ ಸಾಯಬೇಕು. ಓಡಿಹೋದಲ್ಲಿ ಚಿರಕಾಲ ಬಾಳಬಹುದೇ ? ಎಂದಾದರೂ ಸಾವು ಬಾರದೆ ತಪ್ಪದೆಂದು ಪ್ರಾಜ್ಞ ನಾದವನು ಧೈರವನ್ನು ತಾಳುವನು. ಆದುದರಿಂದ ನನಗೆ ಸಾಹಸವ ಡಲಿಕ್ಕೆ ಇದು ಸಮಯವು ಎಂದು ಆಲೋಚಿಸಿ ನಳ್ಳಿ ತನ್ನ ಕೊಂಡಿ ಗಳಿಂದ ಕೊಕ್ಕರೆಯ ಕತ್ತನ್ನು ಅವುಕಿ ಹಿಡಿದುಕೊಂಡು ಹಣದಲ್ಲಿ ಕಚ್ಚಿ ಕೊಂದು ಸೇಚ್ಛೆಯಾಗಿ ಹೋಯಿತು. ಈ ಪ್ರಕಾರ ನೀನು ಒಂದು 2 ಚ
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.