ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ಮಿಶ್ರಭೇದತಂತ್ರ. ಉಪಾಯವನ್ನು ಹುಡುಕಿ ನಿನಗೆ ಶತ್ರುವಾದ ಕೃಷ್ಣಸರ್ಪವನ್ನು ಜಯಿಸು-ಎನಲಗಿ, ಕಾಗೆ ನರಿಯ ಅಪ್ಪಣೆಯನ್ನು ತಗೆದುಕೊಂಡು ತಾನಿದ್ದ ಆಲದ ಮರದ ಹತ್ತಿರಕ್ಕೆ ಮರಳಿ ಬಂದಿತು. That which cannot be done by force can be done by wisdom-The Crow and the Serpent, ಮಾರನೆಯ ದಿನ ಆ ಪಟ್ಟಣವನ್ನಾಳುತ್ತಿದ್ದ ಅರಸನ ಹೆಂಡಿರು ಗಳಾದ ಅರಸತಿಯರೆಲ್ಲರೂ ಉದ್ಯಾನವನಕ್ಕೆ ಬಂದು ಮಲ್ಲಿಗೆ ಸಂಪಗೆ ಜಾಜೆ ಪಾರಿಜಾತ ಸೇವಂತಿಗೆ ಹೊನ್ನೆ ಸುರಹೊನ್ನೆ ಮೊದಲಾದ ನಾನಾ ವಿಧವಾದ ಹೂಗಳನ್ನು ಎತ್ತಿ ಬಳಲಿ ಜಲಕ್ರೀಡೆಗಳಾಡಬೇಕೆಂದು ಕೊಳ ದಲ್ಲಿ ಇಳಿಯುವಾಗ, ತಮ್ಮ ಒಡವೆಗಳಲ್ಲಿ ಕೆಲವನ್ನು ತೆಗೆದು ಆ ಗಿಡದ ಕೊಂಬೆಗೆ ತಗುಲಿಸಿದರು. ಕಾಗೆ ಆ ಸಮಯವನ್ನು ನೋಡಿ ಬಂದು, ಆ ಸ್ತ್ರೀ ಯರು ನೋಡುತ್ತಿರುವಾಗ ಅವುಗಳಲ್ಲಿ ನವರತ್ನ ಖಚಿತ ವಾದ ಚಿನ್ನದ ಒಡವೆಯೊಂದನ್ನು ಮೂಗಿನಲ್ಲಿ ಕಚ್ಚಿಕೊಂಡು, ದೂರಕ್ಕೆ ಹೋಗದೆ ಸಖಾಸದಲ್ಲಿ ಒಂದು ಮರದ ಕೊಂಬೆಯ ಮೇಲೆ ಕುಳಿತು ಕೊಂಡಿತು. ಆ ಸಮಾಚಾರವನ್ನು ಆಳುಗಳು ಕೂಡಲೇ ಅರಸನಿಗೆ ತಿಳಿಸಿದರು. ಅರಸನು ತನ್ನ ಕೃತ್ಯರನ್ನು ನೋಡಿ “ ನೀವು ಬೇಗ ಹೋಗಿ ಕಾಗೆಯೆತ್ತಿಕೊಂಡು ಹೋದ ಒಡವೆಯನ್ನು ತೆಗೆದುಕೊಂಡು ಬನ್ನಿರಿ' ಎಂದು ಆಜ್ಞಾಪಿಸಿದನು. ಅನಂತರ ರಾಜಭಟರು ಹತ್ತಿರಕ್ಕೆ ಬರುತ್ತಾ ಬರುತ್ತಾ, ಕಾಗೆ ಮೆಲ್ಲಮೆಲ್ಲಗೆ ಮುಂದಕ್ಕೆ ಹೋಗಿ ಕೃಷ್ಣ ಸರ್ಪವಿದ್ದ ಹುತ್ತಿನಲ್ಲಿ ಆ ಒಡವೆಯನ್ನು ಹಾಕಿತು. ಅದನ್ನು ನೋಡಿ ಅವರು ಹಾಗೆ ಗಡಾರಿ ಗುದ್ದಲಿಗಳಿಂದ ಆ ಹುತ್ತವನ್ನ ಗೆಯಲಾಗಿ, ಅದರಲ್ಲಿ ಸುತ್ತಿಕೊಂಡು ನಿದ್ರಿಸುತ್ತಿದ್ದ ಕೃಷ್ಟಸರ್ಪವು ಎದ್ದು ಬುಸಗುಟ್ಟುತ್ತಾ, ಕೋಪದಿಂದ ಉರಿದುಬಿದ್ದು ಕೆಲವರನ್ನು ಕಚ್ಚಿ ಕೆಲವರನ್ನು ಬೆನ್ನಟ್ಟಿತು. ಕೆಲವರು (ರಶಾಲಿಗಳು ದೊಣ್ಣೆಗಳಿಂದ ಆ ಹಾವನ್ನು ಹೊಡೆದು ಕೊಂದು, ಆ ಒಡವೆಯನ್ನು ತೆಗೆದುಕೊಂಡು ಹೋಗಿ ಅರಸನಿಗೆ ಒಪ್ಪಿಸಿದರು. ಆದುದರಿಂದ ಉಪಾಯದಿಂದ ಸಾಧಿಸಕೂಡದ ಕಾರವು ಉಂಟೋ ? D