ಮಿತ್ರಭೇದತಂತ್ರ. 31 ಹೋಗುತ್ತಾನೆ. ನೀನಿನ್ನು ನನ್ನ ಮನಸ್ಸನ್ನು ಕಳವಳಪಡಿಸಬೇಡ ಎಂದು ನುಡಿದನು, ಅದಕ್ಕೆ ದಮನಕನು-ನೀವು ಸಂಜೀವಕನನ್ನು ತುಂಬಾ ಗರ ವಪಡಿಸಿ ದೊಡ್ಡ ಮಂತ್ರಿಯನ್ನಾಗಿ ಮಾಡಿ ರಾಜ್ಯಗಳನ್ನೆಲ್ಲಾ ಅವನ ವಶ ಪಡಿಸಿ ಸಮಸ್ತ ವಿಷಯದಲ್ಲಿ ಯಾವಾಗಲೂ ಅವನನ್ನು ನಂಬಿರುವಿರಿ ; ಅವನು ಇದನ್ನೆಷ್ಟು ಮಾತ್ರವೂ ಮನಸ್ಸಿನಲ್ಲಿಡದೆ ನಿಮ್ಮ ರಾಜ್ಯವನ್ನು ಒಟ್ಟಿಗೆ ಅಪಹರಿಸಬೇಕೆಂಬ ದುರಾಲೋಚನೆಯಲ್ಲಿದ್ದಾನೆ. ಅದು ನನಗೆ ತಿಳಿಯಿತು. ಆದಕಾರಣ ಅದನ್ನು ಬೇಗ ನಿಮಗೆ ತಿಳಿಸಲಿಕ್ಕೆ ಬಂದೆನು. ಅಣ್ಣ ತಮ್ಮನಾದರೂ ಮಗನಾದರೂ ಮಂತ್ರಿಸ್ಥಾನದ ಕೆಲಸಗಳನ್ನು ನಡಿಸುತ್ತಿರುವಾಗ ಅವನ ಮೇಲೆ ದೃಷ್ಟಿಯಿಡದಿದ್ದರೆ ಅರಸನ ಲಕ್ಷ್ಮಿ ತೊಲಗಿ ಹೋಗುವಳು. ಸುಜನರ ಹಿತವಾಕ್ಯವನ್ನು ಕಿವಿಗೆ ಸೋಕ ಲೀಯದೆ ದುರ್ಜನರು ಹೇಳಿದುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕಾರಗ ಳನ್ನು ನಡಿಸುವ ಭೂಪಾಲಕನು ಅಪಥ್ಯವಸ್ತುಗಳನ್ನು ಭುಜಿಸಿದ ರೋಗಿಯಹಾಗೆ ನಶಿಸುವನು, ಇದು ನಿಶ್ಚಯ. ಮಿತ್ರರ ಮಾತುಗ ಳನ್ನು ಕೇಳುವ ಅರಸನು ಸುಖವಾಗಿರುವನು; ಶತ್ರುಗಳ ಮಾತನ್ನು ಕೇಳುವ ಅರಸನು ಶೀಘ್ರವಾಗಿ ರಾಜ್ಯವನ್ನು ಹೋಗಲಾಡಿಸಿಕೊಳ್ಳು ವನು, ಸದ್ಯದಲ್ಲಿ ಅಪ್ರಿಯವಾಗಿದ್ದರೂ ಮುಂದಕ್ಕೆ ಪ್ರಿಯವಾಗಿರುವ ಮಾತುಗಳನ್ನು ಹೇಳುವವರು ಸಿಕ್ಕರು. ಅಂಥವರ ಮಾತುಗಳನ್ನು ಬುದ್ದಿವಂತರು ಕೇಳುವರೇ ಹೊರತು ಇತರರು ಕೇಳರು; ಕೇಳಿದವ ರನ್ನು ಲಕ್ಷ್ಮೀ ಅಗಲದೆ ಇರುವಳು. ಹಿತವನ್ನು ಕೋರುವವರು ತಿಳಿ ದವರಾಗಿ ಇರರು, ತಿಳಿದವರು ಹಿತವನ್ನು ಕೋರುವವರಾಗಿ ಇರರು ; ತಿಳಿದವರಾಗಿಯೂ ಹಿತವನ್ನು ಕೋರುವವರಾಗಿಯ ಇರುವವರು ಸಿಕ್ಕುವುದು ರೋಗವನ್ನು ಹರಿಸುವುದಾಗಿಯೂ ರುಚಿಯಾಗಿಯೂ ಇರುವ ಔಪಧದ ಹಾಗೆ,ಅಪೂರ್ವವು. ಹಳಯ ಸೇವಕರಿಗೆ ವಿರುದ್ಧವಾಗಿ ಹೊಸ ತಾಗಿ ಬಂದವರನ್ನು ಸನ್ಮಾನಿಸಿದರೆ ಅದು ರಾಜ್ಯ ಕೆಟ್ಟು ಹೋಗುವುದಕ್ಕೆ ಮೂಲವು-ಎಂದನು,
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.