ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಪಂಚತಂತ್ರ ಕತೆಗಳು, ಈ ಮಾತುಗಳನ್ನು ಕೇಳಿ ಸಂಜೀವಕನಿಗೆ ನಾನು ಅಭಯವಿತ್ತು ದೊಡ್ಡ ಮಂತ್ರಿಯಾಗಿ ಮಾಡಿ ಪ್ರೀತಿಯಿಂದ ನಡಿಸುತ್ತಿರುವಲ್ಲಿ ಅವನು ನನಗೆ ಅಪಕಾರ ಮಾಡಬೇಕೆಂದು ನೆನಸುವನೇ? ಅದೆಲ್ಲಿಯ ಮಾತು ?- ಎಂದು ಪಿಂಗಳಕನು ನುಡಿಯಲು, ದಮನಕನು ಹೇಳುತ್ತಾನೆ: ದುರ್ಜನನು ತನ್ನನ್ನು ಪೂಜಿಸಿದವರಿಗೂ ತನಗೆ ಅಪರಾಧಮಾ ಡಿದವರಿಗೂ ಅಪರಾಧವನ್ನೇ ಮಾಡುವನು ; ಹಾವನ್ನು ತಲೆಯ ಮೇಲೆ ಇಟ್ಟುಕೊಂಡರೂ ಕಾಲಿನಲ್ಲಿ ಒದೆದರೂ ಅದು ಕಚ್ಚಲೇ ಕಚ್ಚುವುದು, ದುರ್ಜನನು ಸರ್ವದಾ ಸೇವಿಸಲ್ಪಡುತ್ತಿದ ರೂ ತನ್ನ ದುಶ್ನ ಭಾವವನ್ನು ಬಿಡುವನೆ ? ನಾಯಿಯ ಬಾಲಕ್ಕೆ ಎಣ್ಣೆ ಸವರಿ ನೀವಿದರೂ ಅದರ ಡೊಂಕು ಹೋದೀತೆ ?- ಪೂಜ್ಯವಲ್ಲದ ಪದಾರ್ಥವು ಎಲ್ಲಿಯೂ ಪೂಜ್ಯ ವಾಗಲಾರದು, ಅಮೃತಧಾರೆಯನ್ನು ಹೊಯಿದು ಬೆಳಸಿದರೂ ಮೂರು ಗದ ಮರವು ಕಲ್ಪವೃಕ್ಷದ ಹಾಗೆ ಪೂಜ್ಯವಾದೀತೆ ? ಸಕ್ಕರೆಯಲ್ಲಿ ಜೇನನ್ನು ಹಾಕಿ ಕಲಸಿ ಪಾತಿಗಟ್ಟಿ ಬೇವಿನ ಬೀಜವನ್ನು ನೆಟ್ಟು ಹಾಲ ಹಾಕಿ ಬೆಳಯಿಸಿದರೆ ಆ ಬೇವಿನಗಿಡವು ಸಿಹಿಯಾದೀತೇ? ಉತ್ತಮನಾ ದವನು ಇತರರಿಗೆ ಅಪಾಯಬರುವಾಗ ವಿಚಾರಿಸಿ ತಿಳಿದುಕೊಂಡು ಅವ ರೊಡನೆ ಮುಂಚಿತವಾಗಿ ಹೇಳುವನು; ದುರಾತ್ಮನಾದವನು ತಾನು ತಿಳ ದಿದ್ದರೂ ತನ್ನ ಮನಸ್ಸಿನಲ್ಲಿ ನಿರ್ನಿಮಿತ್ತವಾಗಿ ಬಂದು ಹಗೆತನವನ್ನು ಇಟ್ಟು ಹೇಳನು, ಎಷ್ಟು ಒಳ್ಳೆಯತನದಿಂದಿದ್ದರೂ ಮನಸ್ಸಿನಲ್ಲಿ ಹಗೆತ ನವನ್ನು ಇಟ್ಟುಕೊಂಡು ಕೋಪವುಳ್ಳವನಾಗಿರುವನು ದುರ್ಜನನು ; ಒಳ್ಳಯತನದಿಂದ ಸಂತೋಷಿಸುವನು ಸುಜನನು. ಕಮ್ಮಿ ಬೇವಿನ ಗಿಡವೂ ಅವುಗಳ ರಸದಿಂದಲೇ ತಿಳಿಯಬರುತ್ತವೆ, ಹಾಗೆಯೇ ಸುಜ ನನೂ ದುರ್ಜನನೂ ಅವರ ಪ್ರಭಾವದಿಂದಲೇ ತಿಳಿಯಬರುತ್ತಾರೆ. ' ವೃಶ್ಚಿಕ ವಿಪ್ರಲ ಪುಚ್ಛೇ ಮಕ್ಷಿಕಸ್ಯವಿದಂ ಶರಃ | ಶಿಕ್ಷಕಸ್ಯ ವಿದಂ ದಂ ಸಾಂಗಂ ದುರ್ಜನೇ ವಿಷಂ || ಚೇಳಿಗೆ ವಿಷವು ಬಾಲದಲ್ಲಿರುವುದು, ನೊಣಕ್ಕೆ ವಿಷವು ತಲೆಯಲ್ಲಿ ರುವುದು, ಹಾವಿಗೆ ವಿಷವು ಹಲ್ಲಿನಲ್ಲಿರುವುದು ದುರ್ಜನನಿಗೆ ವಿಷವು