ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೧೭

೧೩೧


ಹೀಗೆಂದು ಹೇಳಿ, ಸಮರಸಿಂಹನ ಬಿಡಾರಕ್ಕೆ ಪರಂತಪನನ್ನು ಕಳುಹಿಸಿಕೊಟ್ಟು, ಶಂಬರನು ಅರ್ಥಪರನ ಶವವನ್ನು ಆಚ್ಛಾದಿಸುವ ಯೋಚನೆಯಿಂದ ಹೊರಟನು; ಅಷ್ಟರಲ್ಲೇ, ಕಾಮಮೋಹಿನಿಯ ಶುಶ್ರೂಷೆಗಾಗಿ ನಿಯಮಿಸಲ್ಪಟ್ಟಿದ್ದ ದುರ್ಮತಿಯು ಬಂದಳು.
ದುರ್ಮತಿ- ಎಲೈ ಶಂಬರನೆ! ಕಾಮಮೋಹಿನಿಯ ತಂದೆಗೆ, ಬಂಧ ವಿಮೋಚನೆಯನ್ನು ಮಾಡುವುದಾಗಿಯ ಈ ರತ್ನಾಕರಕ್ಕೆ ಯಜಮಾನನನ್ನಾಗಿ ಮಾಡುವುದಾಗಿಯೂ ಹೇಳಿ, ಬಹಳ ಆಶೆಯನ್ನು ಹುಟ್ಟಿಸಿ, ಕಾಮಮೋಹಿನಿಗೆ ನಿನ್ನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಪ್ರೇರಿಸಬೇಕೆಂದು ಹೇಳಿದೆನು. ಅವನು ಅದೇ ರೀತಿಯಲ್ಲಿ ಪ್ರೇರಣೆಯನ್ನು ಮಾಡಿದನು. ಕಾಮಮೋಹಿನಿಯು ನಿನ್ನನ್ನು ವಿವಾಹಮಾಡಿಕೊಳ್ಳುವುದಕ್ಕೆ ಒಪ್ಪಿರುವಳು.
ಶಂಬರ- ನಿನ್ನ ಉಪಕಾರದಿಂದ ನಾನು ಬಹಳ ಸಂತುಷ್ಟನಾಗಿರುವೆನು. ಈ ವಿವಾಹವು ಪೂರಯಿಸಿದ ಕೂಡಲೆ, ನಿನಗೆ ಒಂದು ಲಕ್ಷ ಪೌನುಗಳನ್ನು ಕೊಡುವೆನು. ಇದಲ್ಲದೆ, ಕಾಮಮೋಹಿನಿಗೆ ಸೇವಕಳಾಗಿರುವಂತೆ ನಿನ್ನನ್ನು ನಿಯಮಿಸಿ, ತಿಂಗಳಿಗೆ ಒಂದು ಸಾವಿರ ಪೌನು ಸಂಬಳವನ್ನು ಕೂಡ ಕೊಡುವೆನು ಈ ದಿನವೇ ವಿವಾಹಕ್ಕೆ ಶುಭವಾಗಿರುವುದು. ಕಾರ್ಯಾರ್ಥವಾಗಿ ಬಂದಿರತಕ್ಕ ಕಳಿ೦ಗಾದಿಗಳು ನನ್ನ ಅತಿಥಿಗಳಾಗಿರಲಿ. ಅಪ್ರಾರ್ಥಿತವಾಗಿ ಪುರೋಹಿತರೂ ಕೂಡ ಬಂದಿರುವರು. ಈ ವಿವಾಹ ಮಹೋತ್ಸವವು ನಡೆಯುವುದಕ್ಕೆ ಬೇಕಾದ ಕೆಲಸಗಳೆಲ್ಲ ಸಿದ್ದವಾಗಿರುವುವು. ಈ ಸಂಗತಿಯನ್ನು ಕಾಮಮೋಹಿನಿಗೆ ಶ್ರುತಪಡಿಸು.
ಈ ವರ್ತಮಾನವನ್ನು ದುರ್ಮತಿಯು ಕಾಮಮೋಹಿನಿಗೆ ಹೋಗಿ ತಿಳಿಸಿದಳು. ಇದನ್ನು ಕೇಳಿ, ಕಾಮಮೋಹಿನಿಯು ಆತ್ಮಗತವಾಗಿ "ಈ ದುರಾತ್ಮನಾದ ಶಂಬರನು, ನಾನು ವಿವಾಹ ಮಾಡಿಕೊಳ್ಳುವುದಿಲ್ಲವೆಂದು ಹಠವನ್ನು ಹಿಡಿದರೆ ನನ್ನ ತಂದೆಯನ್ನು ಕೊಲ್ಲುವನು. ನನಗೋಸ್ಕರ ನನ್ನ, ತಂದೆ ಯೇತಕ್ಕೆ ಸಾಯಬೇಕು? ಅವನಾದರೂ ಬದುಕಿರಲಿ. ನಾನೇ ಮೃತನಾದ ಪರಂತಪನ ಮಾರ್ಗವನ್ನು ಅನುಸರಿಸುವೆನು. ಹೀಗೆ ಅನುಸರಿಸುವುದಕ್ಕೆ ಸಾಧಕವಾದ ಈ ವಿಷವು ನನಗೆ ಮಹೋಪಕಾರಿಯಾದುದು. ಈ ವಿವಾಹವು ಉಪಕ್ರಮವಾಗುವುದಕ್ಕೆ ಮುಂಚೆಯೇ ನನ್ನ ತಂದೆಯ