ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೧೭

೧೩೫


ಸನ್ನಿಹಿತವಾಗಿರುವುದು. ಎಲ್ಲಿ, ನಿನ್ನ ಕೈಗಳನ್ನು ತೆಗೆ, ಬೇಡಿಗಳಿಂದ ಅವುಗಳಿಗೆ ಅಲಂಕಾರವನ್ನು ಮಾಡುವೆನು.
ಶಂಬರ- (ಆತ್ಮಗತ) ತನ್ನ ದುರ್ಗವು, ಶೂರರಾಗಿಯೂ ನಂಬಿಕೆಯುಳ್ಳವರಾಗಿಯೂ ಆಯುಧಪಾಣಿಗಳಾಗಿಯೂ ಇರತಕ್ಕ ಭೃತ್ಯರಿಂದ ಕಾಪಾಡಲ್ಪಟ್ಟದ್ದು. ಈ ಜನಗಳು ಹೇಗೆ ಒಳಕ್ಕೆ ಪ್ರವೇಶಿಸಿದರು! ಇರಲಿ, ಇವರಿಗೆ ತಕ್ಕ ಬಂದೋಬಸ್ತನ್ನು ಮಾಡುವೆನು. (ಪ್ರಕಾಶ) ಎಲಾ ಸಮರಸಿಂಹಾದಿ ದುಷ್ಟರೆ! ನನಗೆ ಕೈಬೇಡಿ ಹಾಕುವುದಕ್ಕೆ ಪ್ರಯತ್ನ ಮಾಡುವಿರಾ? ನಿಮ್ಮೆಲ್ಲರನ್ನೂ ಈ ದುರ್ಗಕ್ಕೆ ಬಲಿ ಕೊಡುವೆನು.
ಎಂದು ಸಿಡಿಲಿನಂತೆ ಮಂಜೀರಕನ ಮೇಲೆ ಬಿದ್ದು, ಅವನನ್ನು ನೆಲಕ್ಕೆ ಕೆಡವಿ, ಸಮರಸಿಂಹಾದಿಗಳು ಮೇಲೆ ಬೀಳುವುದರೊಳಗಾಗಿ ಅಲ್ಲಿಂದ ತಪ್ಪಿಸಿಕೊಂಡು ಆ ದುರ್ಗವನ್ನು ಬಿಟ್ಟು ಪರಾರಿಯಾಗುವುದಕ್ಕೋಸ್ಕರ ಹೊರಟನು. ಆ ಕಾಲಕ್ಕೆ ಸರಿಯಾಗಿ, ಕಲಾವತಿಯು ಬಾಗಿಲಿಗೆ ಬಂದಳು.
ಕಲಾವತಿ - ಎಲಾ ನೀಚನಾದ ಶಂಬರನೆ! ನಿಲ್ಲು: ಓಡಿಹೋಗಬೇಡ. ಒಂದು ಹೆಜ್ಜೆಯನ್ನು ಮುಂದಕ್ಕೆ ಹಾಕಿದರೆ, ನಿನ್ನನ್ನು ಗುಂಡಿನಿಂದ ಹೊಡೆದು ಯಮಪುರಿಗೆ ಕಳುಹಿಸುವೆನು.
ಬಾರುಮಾಡಲ್ಪಟ್ಟ ಪಿಸ್ತೂಲನ್ನು ಅವನ ಕಡೆಗೆ ತಿರುಗಿಸಿ ಹಿಡಿದುಕೊಂಡಳು.
ಶಂಬರ- (ಆತ್ಮಗತ) ಸಂಪತ್ತುಗಳು ಹೇಗೋ-ಹಾಗೆ ವಿಪತ್ತುಗಳ ಗುಂಪು ಗುಂಪಾಗಿ ಬರುವುವು. ಈ ಚಂಡಾಲ ಸ್ತ್ರೀಯು ಏಟುತಿಂದ ಹೆಣ್ಣು ಹುಲಿಗೆ ಸಮಾನಳಾದವಳು. ನಾನು ಅವಳಿಗೆ ಬಹು ದ್ರೋಹವನ್ನು ಮಾಡಿರುವೆನು, ಅದಕ್ಕೆ ಪ್ರತೀಕಾರವನ್ನು ಮಾಡುವುದಕ್ಕೋಸ್ಕರ ಬಂದಿರುವಳು. ಇನ್ನೇನು ಮಾಡಲಿ! (ಪ್ರಕಾಶ) ಎಲೈ ಕಲಾವತಿಯೆ! ನನ್ನ ಅಪರಾಧವನ್ನು ಕ್ಷಮಿಸು. ಈಗ ನನಗೆ ಮಹಾವಿಪತ್ತು ಬಂದಿರುವುದು. ನನ್ನನ್ನು ಸಂರಕ್ಷಿಸು. ನಾನು ನಿನ್ನನ್ನು ವಿವಾಹಮಾಡಿಕೊಂಡು ನಿನ್ನ ಸೇವೆಯಲ್ಲಿ ಧುರಂಧರನಾಗಿರುತ್ತೇನೆ.
ಕಲಾವತಿ- ನೀನು ಮಹಾ ದುಷ್ಟನು. ನನ್ನ ತಂದೆಯನ್ನು ಚಮತ್ಕಾರದಿಂದ ಕೊಂದೆ. ಆತನು ಬರೆದಿಟ್ಟಿದ್ದ ಉಯಿಲನ್ನು ಅಪಹರಿಸಿದೆ. ನನ್ನ ಕತ್ತನ್ನು ಕಿವುಚಿದೆ. ದೈವಾಧೀನದಿಂದ ನಾನು ಬದುಕಿದೆನು. ಹಾಗಿಲ್ಲದಿದ್ದರೆ, ನೀನು ಉಯಿಲನ್ನು ಅಪಹರಿಸಿದ ದಿವಸವೇ ನನಗೂ ಮರಣವುಂಟಾಗು