ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೪
೨೯

ಮಾಧವ-ಎಲೈ ಮಹನೀಯರೇ ! ಇದುವರೆಗೂ ನಾನು ನನ್ನ ಧರ್ಮ ಸಂಕಲ್ಪವು ನೆರವೇರುವುದೋ ಇಲ್ಲವೋ ಎಂದು ಬಹಳವಾಗಿ ಚಿಂತಿಸುತಿದ್ದೆನು. ತಕ್ಕ ಕಾಲಕ್ಕೆ ನೀವೆಲ್ಲರೂ ಒದಗಿ ನನ್ನನ್ನು ಕೃತಕೃತ್ಯನನ್ನಾಗಿ ಮಾಡಿದ ವಿಷಯದಲ್ಲಿ ನಾನು ಬಹಳ ಕೃತಜ್ಞನಾಗಿರುವೆನು. ನೀವು ಮಾಡಿರುವ ಈ ಉಪಕಾರಕ್ಕೆ ತಕ್ಕ ಪ್ರತಿಫಲವನ್ನು ಭಗವಂತನೇ ನಿಮಗೆ ಉಂಟುಮಾಡುವನೆಂದು ನಂಬಿರುತ್ತೇನೆ. ನನ್ನ ಇತರ ಆಸ್ತಿಗಳಿಗೆಲ್ಲ ಸರಿಯಾದ ವಿನಿಯೋಗವನ್ನು ಮಾಡಿರುತ್ತೇನೆ. ನೀವು ಸ್ಥಾಪಿಸತಕ್ಕ ವೈದ್ಯ ಶಾಲೆಯಿಂದ ಅನೇಕ ಸಹಸ್ರ ಜನಗಳಿಗೆ ಅನಂತವಾದ ಕ್ಲೇಶ ನಿವಾರಣೆಯುಂಟಾಗುವುದು, ಇದರಿಂದುಂಟಾಗುವ ಪುಣ್ಯಕ್ಕೆ ನೀವೂ ಭಾಗಿಗಳಾಗಬೇಕೆಂದು, ನಾನು ಜಗದೀಶ್ವರನನ್ನು, ಪ್ರಾರ್ಥಿಸುತ್ತೇನೆ. ಹೀಗೆ ಹೇಳುತ, ಆತ್ಮ ಶುದ್ಧಿಯಿಂದ ದೇವತಾ ಧ್ಯಾನ ಮಾಡುತ, ಮಾಧವನು ಸ್ವರ್ಗಸ್ಥನಾದನು.

ಅಧ್ಯಾಯ ೪.



   ಕಲ್ಯಾಣಪುರವು, ಪೂರ್ವಕಾಲದಲ್ಲಿ ಗಂಧರ್ವಪುರಿಯಂತೆಯೇ ಬಹಳ ಪ್ರಸಿದ್ಧವಾದ ರಾಜಧಾನಿಯಾಗಿದ್ದಿತು. ಈ ಪಟ್ಟಣವು ಸಪ್ತಕಕ್ಷ್ಯೆಗಳಿಂದ ಕೂಡಿರುವ ಅನೇಕ ಸೌಧಾಗ್ರಹಗಳಿಂದಲೂ, ಕುಬೇರೈಶ್ವರ್ಯವುಳ್ಳ ದೊಡ್ಡವರ್ತಕರಿಂದಲೂ, ಅಹೋರಾತ್ರಿಯೂ ತಮ್ಮ ತಮ್ಮ ಬುದ್ಧಿ ಬಲದಿಂದಲೂ ದೇಹಶ್ರಮದಿಂದಲೂ ಬಹು ದ್ರವ್ಯವನ್ನಾರ್ಜಿಸುವ ಶಿಲ್ಪಿಗಳಿಂದಲೂ, ಅತ್ಯುನ್ನತವಾದ ಗೋಪುರಗಳಿಂದ ಕೂಡಿದ ಶಿವಾಲಯಗಳಿಂದಲೂ, ಧರ್ಮಮಾರ್ಗೈಕ ಪಾರಾಯಣರಾಗಿ ರಾಜತಂತ್ರ ಧುರೀಣರಾಗಿರುವ ಅಧಿಕಾರಿಗಳಿಂದಲೂ, ಸಮಸ್ತ ವಿದ್ಯೆಗಳಲ್ಲಿಯೂ ಅದ್ವಿತೀಯರಾದ ವಿದ್ವಜ್ಜನಗಳಿಂದಲೂ, ಅತಿಮನೋಹರವಾಗಿದ್ದಿತು. ಮಾಧವನ ಅಣ್ಣನಾದ ಸುಮಿತ್ರನೂ, ಇವನ ಇನ್ನೊಬ್ಬ