ತಾಯಿಯಾಗಿಯೂ ತಂದೆಯಾಗಿಯೂ ಇರುವನು. ಈ ವಿಷಯದಲ್ಲಿ ನಾನು ಎಷ್ಟು ಕೃತಜ್ಞಳಾಗಿದ್ದಾಗ್ಗೂ ಕಡಮೆಯೇ ಸರಿ. ಜೀವಾವಧಿ ಇವನಲ್ಲಿ ನಾನು ಸೇವೆ ಮಾಡುತ್ತಿದ್ದಾಗ್ಗೂ, ಇವನು ಮಾಡಿದ ಉಪಕಾರಕ್ಕೆ ಸರಿಯಾದ ಪ್ರತ್ಯುಪಕಾರವಾಗಲಾರದು. ಆದರೆ, ಮಕ್ಕಳಿಗೆ ತಾಯಿತಂದೆಗಳು ಸಮಸ್ತ ವಿಷಯದಲ್ಲಿಯೂ ಯಾಮಕರಾಗಿದ್ದಾಗ್ಗೂ, ಧರ್ಮಮಾರ್ಗವನ್ನು ಬಿಟ್ಟು ಹೋಗುವುದು ಅವರಿಗೂ ಉಚಿತವಲ್ಲ. ತಾಯಿ ತಂದೆಗಳು ಮಕ್ಕಳನ್ನು ಸಾಕಿದ ಮಾತ್ರದಿಂದಲೇ, ಯುಕ್ತಾಯಕ್ತ ವಿವೇಚನೆಯಿಲ್ಲದೆ ಅವರಿಗೆ ಅನುಚಿತ ಕಾರ್ಯಗಳನ್ನು ಹೇಳಿ ಅದನ್ನು ಮಾಡದಿದ್ದರೆ ಕೃತಘ್ನರೆಂದು ಹೇಳುವುದಕ್ಕಾದೀತೆ? ಈ ಶಂಬರನು ವ್ಯಭಿಚಾರಿಯು ; ಇದರಿಂದ ಅನೇಕ ರೋಗಗಳುಳ್ಳವನಾಗಿರುವನು. ಬಹಳ ಸುಳ್ಳುಗಾರನು, ಚೌರ ಮೊದಲಾದ ಅನೇಕ ದುಷ್ಕೃತ್ಯಗಳನ್ನು ಮಾಡಿ, ಅನೇಕಾವೃತ್ತಿ ರಾಜ್ಯಾಧಿಕಾರಿಗಳಿಂದ ಕ್ರೂರ ಶಿಕ್ಷೆಯನ್ನನುಭವಿಸಿರುತ್ತಾನೆ. ಇಂಥವನನ್ನು ವಿವಾಹಮಾಡಿಕೊಳ್ಳಬೇಕೆಂದು ನನ್ನ ತಂದೆ ನಿರ್ಬಂಧಿಸಬಹುದೆ? ಈ ಮಾತನ್ನು ನಾನು ಹೇಗೆ ತಾನೆ ನಡಯಿಸಲಿ! ಈ ವಿಷಯದಲ್ಲಿ ಇಷ್ಟವಿಲ್ಲವೆಂದು ಹೇಳಿದ ಮಾತ್ರಕ್ಕೆ ನಾನು ಕೃತಘ್ನಳಾಗುವೆನೆ? ಈ ಸುಮಿತ್ರನು ಮಾಡಿರತಕ್ಕೆ ಮಹೋಪಕಾರಗಳನ್ನು ನಾನು ಎಂದಿಗೂ ಮರೆಯತಕ್ಕವಳಲ್ಲ. ನ್ಯಾಯವಾದ ರೀತಿಯಲ್ಲಿ ಹೇಳಿದರೆ, ಅವನಿಗೊಸ್ಕರ ನನ್ನ ಪ್ರಾಣವನ್ನಾದರೂ ಒಪ್ಪಿಸುವುದರಲ್ಲಿ ಸಿದ್ಧಳಾಗಿರುವೆನು; ಆ ನೀಚನಾದ ಶಂಬರನ ಪತ್ನಿಯಾಗಿ ಮಾತ್ರ, ನಾನು ಎಂದಿಗೂ ಇರಲಾರೆನು.
ಪರಂತಪ -ನೀನು ಹೇಳುವ ಮಾತುಗಳು ನನಗೆ ಅತ್ಯಾಶ್ಚರ್ಯಕರಗ೪ಾಗಿರುವುವು. ಸುಮಿತ್ರನು ಬಹಳ ವಿವೇಕಿಯೆಂದು ಕೇಳಿರುತ್ತೇನೆ. ಇದಲ್ಲದೆ, ನಿನ್ನಲ್ಲಿ ಸಂಪೂರ್ಣವಾದ ವಿಶ್ವಾಸವುಳ್ಳವನೆಂದೂ ತೋರುತ್ತದೆ. ಶಂಬರನು ಅಂಥ ದುರ್ಗುಣವುಳ್ಳವನಾಗಿದ್ದರೆ, ಪ್ರಾಣಪ್ರಾಯಳಾದ ನಿನ್ನನ್ನು ಆತನಿಗೆ ಕೊಟ್ಟು ಮದುವೆಮಾಡಬೇಕೆಂದು ಸುಮಿತ್ರನೆಂದಿಗಾದರೂ ಸಂಕಲ್ಪ ಮಾಡುತಿದ್ದನೆ! ಆ ವಿಚಾರವು ಹೇಗಾದರೂ ಇರಲಿ, ನಿನ್ನ ಪ್ರಾರ್ಥನೆಯಂತೆ ಶಂಬರನಿಗೆ ನೀನು ಮದುವೆಯಾಗದಿರುವ ಹಾಗೆ ಮಾಡುವ ಭಾರವು ತನ್ನದಾಗಿದೆ. ಇನ್ನು ಚಿಂತಿಸಬೇಡ, ಹೋಗು.
ಪುಟ:ಪರಂತಪ ವಿಜಯ ೨.djvu/೪೬
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಪರಂತಪ ವಿಜಯ