ಕಾಮಮೋಹಿನಿ-ನನ್ನ ಪ್ರಾರ್ಥನೆಯು ಇಷ್ಟು ಮಾತ್ರವೇ ಅಲ್ಲ; ನನ್ನನ್ನು ನೀನೇ ವಿವಾಹ ಮಾಡಿಕೊಳ್ಳಬೇಕೆಂಬುದೂ ಕೂಡ ನನ್ನ ಮುಖ್ಯ ಕೋರಿಕೆಯಾಗಿರುವುದು. ನಿನ್ನ ಮಾತುಗಳಿಂದ, ನನ್ನನ್ನು ವರಿಸುವುದರಲ್ಲಿ ನಿನಗೆ ಸಮ್ಮತಿಯಿಲ್ಲವೆಂದು ತೋರುತ್ತದೆ. ಹಾಗಿದ್ದ ಪಕ್ಷದಲ್ಲಿ, ನಿನ್ನ ಸಹಾಯದಿಂದ ನನಗೆ ಆಗ ತಕ್ಕ ಉತ್ತರ ಫಲವೆನೂ ತೋರಲಿಲ್ಲ. ನೀನು ಇಲ್ಲಿಗೆ ಬಂದಾರಭ್ಯ, ದೇವರೇ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದನೆಂದು, ತಂದೆ ತಾಯಿ ಬಂಧು ಬಳಗಗಳೆಲ್ಲರಿಂದಲೂ ಬಿಡಲ್ಪಟ್ಟು ಅನಾಥೆಯಾಗಿದ್ದಾಗ ನಿನ್ನನ್ನು ನೋಡಿ ನಾನು ಸನಾಥಳೆಂದು ಭಾವಿಸಿದ್ದೆನು. ಈಗ ಶಂಬರನನ್ನು ನಾನು ವರಿಸುವುದು ಇಷ್ಟಪಡದಿದ್ದರೆ, ನನ್ನ ಸಾಕು ತಂದೆಯಾದ ಸುಮಿತ್ರನಿಗೆ ನನ್ನಲ್ಲಿ ಔದಾಸೀನವೂ ಕ್ರೋಧವೂ ಉಂಟಾಗುವುವೇ ಹೊರತು ಮತ್ತೆ ಬೇರೆಯಿಲ್ಲ. ಸಾಮಾನ್ಯವಾಗಿ ಸ್ತ್ರೀಯರು ತಮ್ಮ ಅನುರಾಗಕ್ಕೆ ಪಾತ್ರರಾದ ಪುರುಷರಿಗೆ ಸ್ವಾಭಿಪ್ರಾಯವನ್ನು ವ್ಯಕ್ತವಾಗಿ ತಿಳಿಯಿಸುವುದೇ ಇಲ್ಲ.ಇಂಥ ಸಂಕೋಚವನ್ನೂ ಲಜ್ಜೆಯನ್ನೂ ಬಿಟ್ಟು, ನಿನ್ನ ಗುಣಾತಿಶಯಗಳಿಗೋಸ್ಕರ ನನ್ನನ್ನು ನಾನಾಗಿ ನಿನಗೆ ಒಪ್ಪಿಸಿದೆನು. ಇಂಥ ನನ್ನನ್ನು ನೀನು ತಿರಸ್ಕರಿಸುವ ಪಕ್ಷದಲ್ಲಿ, ನಿನ್ನಿಂದ ನಾನು ಉತ್ತರತ್ರ ವಿಶೇಷವಾದ ಅನರ್ಥಗಳಿಗೆ ಪಾತ್ರಳಾಗಬೇಕೇ ಹೊರತು, ಇತರ ಯಾವ ಪ್ರಯೋಜನವೂ ಆಗಲಾರದು. ಆದುದರಿಂದ, ಇನ್ನೊಂದು ನಿಮಿಷಾರ್ಧದಲ್ಲಿ ಆ ಸುಮಿತ್ರ ಶಂಭರರ ಸಂಕಲ್ಪಗಳನ್ನು ಭಗ್ನಮಾಡಿ ನಾನು ಪ್ರಾಣತ್ಯಾಗವನ್ನು ಮಾಡಿಕೊಳ್ಳುವೆನು.
ಎಂದು ಹೇಳಿ, ತನ್ನ ಬಳಿಯಲ್ಲಿಟ್ಟುಕೊಂಡಿದ್ದ ವಿಷವನ್ನು ತೆಗೆದು ಬಾಯಿಗೆ ಹಾಕಿಕೊಂಡಳು. ಆ ಕ್ಷಣದಲ್ಲಿಯೇ, ಪರಂತಪ ಅವಳ ಗಂಟಲನ್ನು ಗಟ್ಟಿಯಾಗಿ ಹಿಡಿದುಕೊಂಡು, ಬಲಾತ್ಕಾರದಿಂದ ಆ ವಿಷವನ್ನು ತೆಗೆದು ಒಂದು ಕಾಗದದಲ್ಲಿ ಸುತ್ತಿ ತನ್ನ ಜೇಬಿನಲ್ಲಿ ಹಾಕಿಕೊಂಡು “ಎಲೌ ಮಂಗ೪ಾಂಗಿಯೇ ! ನಿನ್ನ ಸ್ಥೈರ್ಯವೂ ದೃಢಸಂಕಲ್ಪವೂ ನನಗೆ ಅತ್ಯಾಶ್ಚರ್ಯವನ್ನುಂಟುಮಾಡಿದವು. ನಿನ್ನನ್ನು ವರಿಸಕೂಡದೆಂದು ನಾನು ಸಂಕಲ್ಪಿಸಿದವನಲ್ಲ; ನಿನಗೆ ಪುರುಷಾಂತರನಲ್ಲಿ ಅನುರಾಗವಿದ್ದ ಪಕ್ಷದಲ್ಲಿ, ಅದಕ್ಕೆ ಪ್ರತಿ ಬಂಧಕನಾದ ಈ ನಿನ್ನ ವಿಪತ್ತನ್ನು ತಪ್ಪಿಸಿ ನಿನ್ನ ಕೋರಿಕೆಯನ್ನು ಸಫಲ
ಪುಟ:ಪರಂತಪ ವಿಜಯ ೨.djvu/೪೭
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೪
೩೭