ಈ ಪುಟವನ್ನು ಪ್ರಕಟಿಸಲಾಗಿದೆ

130

ಕನಸು



"ನೋಡ್ರಿ ನಾವಿವತ್ತು ಸಿನಿಮಾಕ್ಕೆ ಹೋಗ್ತೀವಿ. ನೀವೂ ಬನ್ರೀ."
ಆ ದಂಪತಿಗಳ ಜೊತೆಯಲ್ಲಿ ತಾನು!
"ಬೇಡಿ ಕುಸುಮಾ, ಇವತ್ತು ಬೇಡಿ."
"ತುಂಬಾ ಸಂಕೋಚದವರಪ್ಪ ನೀವು."
"ಹಾಗೇ ಅಂದ್ಕೊಳ್ಳಿ!"
...ತನ್ನ ಮನೆ ಸೇರುತ್ತಿದ್ದoತೆ ಸುನಂದೆಗೆ, ಈ ದಿನ ತಾನು ಇಷ್ಟೊಂದು ಮಾತ
ನಾಡಿದೆನಲ್ಲ ಎಂದು ದಿಗ್ಭ್ರಮೆಯಾಯಿತು. ಒಂದೇ ಸಮನೆ ದುಡಿಯುತ್ತಿದ್ದ ಮೆದುಳು
ವಿಶ್ರಾಂತಿ ಕೇಳಿತು.
ರಾಧಮ್ಮ ಕರೆದರು:
"ಬನ್ರೀ. ಅದೇನು ಹಾಗೇ ಹೋಗ್ತೀರಲ್ಲ. ಹಳೇ ಸ್ನೇಹಿತರ್‍ನ ಬಿಟ್ಬಿಡ್ತೀ
ರೇನು?"
“ಯಾಕೋ ತಲೆನೋವು ರಾಧಮ್ಮ. ಒಂದಿಷ್ಟು ಮಲಕೋತೀನಿ."


೨೧

ದಿನಗಳು ಒಂದೇ ಸಮನಾಗಿ, ಸುನಂದೆಯ ಬದುಕಿನಲ್ಲಿ ಯಾವ ಸ್ಥಿತ್ಯಂತರಕ್ಕೂ
ಕಾರಣವಾಗದೆ ಉರುಳಿದುವು. ಒ೦ದು ದಿನ, ಪುಟ್ಟಣ್ಣನ ಅಣ್ಣ ಸಂಸಾರ ಸಮೇತ
ನಾಗಿ ಬಂದಿಳಿದ. ಆತ, ಉಳಿದಿದ್ದ ರಜಾವನ್ನು ಉಪಯೋಗಿಸಲೆಂದು, ಹೆಂಡತಿ
ಯನ್ನೂ ಮೂವರು ಮಕ್ಕಳನ್ನೂ ಕಟ್ಟಿಕೊಂಡು ಊರೂರು ನೋಡುವ ರೈಲು
ಪ್ರವಾಸ ಹೊರಟಿದ್ದ.
ತಾಯಿ ಸತ್ತಾಗ ಪುಟ್ಟಣ್ಣನ ಅಣ್ಣ ಒಮ್ಮೆ ಬಂದಿದ್ದನಾದರೂ ಅವರೆಲ್ಲ ಒಟ್ಟಾಗಿ
ಕಳೆದ ಸಾರೆ ಕಲೆತುದು ಪುಟ್ಟಣ್ಣನ ಮದುವೆಯಲ್ಲೆ. ಆ ಸೋದರರು ಒಂದಾಗಿ
ಇದ್ದಿದ್ದರೆ, ಬಂದಾಕೆ ಮನೆಗೆ ಹಿರಿಯ ಸೊಸೆಯಾಗುತ್ತಿದ್ದಳು-ಸುನಂದಾ ಕಿರಿಯ
ಯಜಮಾನಿತಿ. ಆದರೆ, ವಿಸ್ತಾರವಾಗುತ್ತ ನಡೆದಿದ್ದ ಬದುಕು ಅಂತಹ ಅವಿಭಕ್ತ
ಕುಟುಂಬ ಜೀವನವನ್ನು ದುಸ್ಸಾಧ್ಯಗೊಳಿಸಿತ್ತು. ಆದರೂ ಜತೆಯಲ್ಲೆ ಇದ್ದಿದ್ದರೆ
ಹೇಗಿರುತ್ತಿತ್ತೆಂಬ ಕಲ್ಪನೆಯ ಚಿತ್ರ ತಮಾಷೆಯಾಗಿ ತೋರುತ್ತಿತ್ತು ಸುನಂದೆಗೆ.
ಹಿರಿಯವಳಿಗೆ ಮೂವರು ಮಕ್ಕಳು. ಕಳೆದ ಸಾರೆ ಬಂದಾಗ ಎರಡನೆಯದು
ಕೈ ಮಗುವಾಗಿತ್ತು. ಅದನ್ನು ಸ್ಮರಿಸಿಕೊಂಡುದಾಯಿತು. ಆಕೆಯು ಕಿರಿಯ ಮಗನ
ಹಾಗೂ ಸರಸ್ವತಿಯ ಜನನದ ವಿಷಯ. ಅತ್ತೆಯು ಸಾವು. "ತುಂಬಾ ಒಳ್ಳೆಯವ
ರಮ್ಮ. ನನಗೆ ಅವರ ಸೇವೆ ಮಾಡಿ ಪುಣ್ಯ ಕಟ್ಟಿಕೊಳ್ಳೋ ಭಾಗ್ಯವಿರಲಿಲ್ಲ........"