ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

137

ನಿಧಾನವಾಗಿ ಹೊರಗೆ ನೋಡಿದಾಗ, ಇತರರ ಸಂಕಟಗಳನ್ನೂ ಕಂಡಾಗ, ಆಕೆ ಚೇತರಿಸಿ
ಕೊಳ್ಳುತ್ತಿದ್ದಳು.
ಬಿಡುಗಡೆ ಹೊಂದುವ ಯೋಚನೆ ಬಹಳ ದಿನ ಆಕೆಯನ್ನು ಕಾಡಿತು. ತಾನು
ಸ್ವತಂತ್ರ ಭಾರತದ ಪ್ರಜೆ, ಪ್ರಾಯಸ್ಥೆ, ವಿದ್ಯಾವತಿ, ನ್ಯಾಯಸ್ಥಾನಕ್ಕೆ ಹೋಗಿ ಕ್ರೂರಿ
ಯಾದ ಗಂಡನಿಂದ ಬೇರ್ಪಡುವ ಹಕ್ಕು ತನಗಿದೆ... ಆತನಿಂದ ವರ್ಷಾಶನ ಪಡೆಯ
ಬಹುದು .. ಯಾಕೆ ತಾನು ಹಾಗೆ ಮಾಡಬಾರದು? ಯಾಕೆ ಮಾಡಬಾರದು? ಯಾಕೆ
ಆ ಹೆಜ್ಜೆ ಇಡಬಾರದು?
ಎಷ್ಟೊಂದು ರಾತ್ರೆಗಳು ಆ ರೀತಿಯ ಯೋಚನೆಯಲ್ಲೇ ಆಕೆ ನಿದ್ದೆ ಕೆಟ್ಟಿದ್ದಳು!
ಆದರೆ ಆ ಅಂತಿಮ ನಿರ್ಧಾರಕ್ಕೆ ಬರುವುದು ಆಕೆಯಿಂದ ಆಗಿರಲಿಲ್ಲ.
ಗಂಡ ಸುಧಾರಿಸಬಹುದೆಂಬ ಆಸೆ ಇನ್ನೂ ಆಕೆಗೆ ಇತ್ತೆಂದೇ?
ಸುನಂದಾ ಎಷ್ಟೋ ಸಾರೆ ತನ್ನನ್ನೆ ಕೇಳಿಕೊಂಡಿದ್ದಳು:
'ಇನ್ನೂ ಆ ಭ್ರಮೆ ಇದೆಯೇನು?'
ಸ್ವಲ್ಪ ಮಟ್ಟಿಗೆ ಇತ್ತೇನೋ ಎನಿಸುತಿತ್ತು. ಆದರೂ ಆತ ಎಷ್ಟೇ ಸುಧಾರಿಸಿ
ದರೂ ಹಿಂದಿನಂತೆ ತನ್ನ ಬದುಕು ಮತ್ತೆ ಹಸನಾಗುವುದು ಎಂದಿಗೂ ಸಾಧ್ಯವಿಲ್ಲ
ವೆಂಬುದು ಆಕೆಗೆ ಸ್ಪಷ್ಟವಾಗಿತ್ತು.
ಸುನಂದಾ ಎಷ್ಟೋ ಸಾರೆ ಸೀತೆ ಸಾವಿತ್ರಿ ದಮಯಂತಿಯರನ್ನು ನೆನೆಸಿಕೊಂಡಿ
ದ್ದಳು. ಕುಸುಮಾ ಮತ್ತು ಆಕೆ ಆ ವಿಷಯವಾಗಿ ಹಲವು ಬಾರಿ ತಮ್ಮೊಳಗೆ ಚರ್ಚಿಸಿ
ದ್ದರು. ಸಾಹಿತ್ಯ ನಿರ್ಮಿಸಿದ್ದ ಆ ಅದ್ಭುತ ಪಾತ್ರಗಳೆದುರು ಅನನ್ಯ ಭಕ್ತಿಯಿಂದ
ತಲೆಬಾಗಿ ನಮಿಸುವಂತಾಗುತ್ತಿತ್ತು. ಅವರೆಲ್ಲ ಅನುಕರಣೀಯ ಸ್ತ್ರೀ ರತ್ನಗಳೇ. ಆ
ವಿಷಯದಲ್ಲೇನೂ ಸಂದೇಹವಿರಲಿಲ್ಲ.
ಆ ದಿನ ಕುಸುಮಾ ನಗುತ್ತಾ ಹೇಳಿದ್ದಳು:
“ಸೀತೆ ಸಾವಿತ್ರಿ ಎಲ್ಲಾ ಸರಿಯೆ, ಆದರೆ ರಾಮಂದಿರು ಸತ್ಯವಾನರನ್ನು ಎಲ್ಲಿ
ಹುಡುಕೋಣ ಈಗ? ನಮಗೆ ನೋಡೋದಕ್ಕೆ ಸಿಗೋದೆಲ್ಲ ರಾಮನ ಉಡುಪು
ತೊಟ್ಟಿರುವ ರಾವಣ ಶರೀರಗಳೇ, ಸತ್ಯದ ಕಿರೀಟವಿಟ್ಟಿರುವ ಅಸತ್ಯವಾನರೇ,
ಅಲ್ಲವೇನ್ರೀ?”
ಸುನಂದಾ ಆ ಮಾತಿಗೆ ತಲೆದೂಗಿದ್ದಳು.
ಮನುಷ್ಯತ್ವ ಕಳೆದುಕೊಂಡ ಮಾನವ ಪ್ರಾಣಿಯೊಂದರ ಭೋಗದ ಆಟಿಗೆ
ಯಾಗಿರಲು, ಮನೆಯಲ್ಲಿ ಊಳಿಗದ ತೊತ್ತಾಗಲು, ನಿಂದೆ ಅವಹೇಳನಗಳಿಗೆ ಮಾತ್ರ
ಪಾತ್ರಳಾದ ಚರಣದಾಸಿಯಾಗಲು, ಸುನಂದಾ ಸಿದ್ಧಳಿರಲಿಲ್ಲ.
ಆದರೆ ವಸ್ತುಸ್ಥಿತಿ, ಆಕೆಯ ಅಸಹಾಯತೆ, ದೌರ್ಬಲ್ಯ, ಮಗುವಿನ ಭವಿತವ್ಯದ
ಬಗೆಗೆ ಕಾತರ,-ಎಲ್ಲ ಒಂದಾಗಿ ಒಳಸಂಚು ನಡೆಸಿ, ಬಂದುದನ್ನಿದಿರಿಸುತ್ತ ಆಕೆ ಅಲ್ಲೆ

18