ಈ ಪುಟವನ್ನು ಪ್ರಕಟಿಸಲಾಗಿದೆ

138

ಕನಸು

ಇರುವಂತೆ ಮಾಡಿದ್ದುವು.
....ಬಯಲಿನತ್ತ, ಬಯಲಿನಾಚೆ ಬೀದಿಯತ್ತ, ಬೀದಿಯ ಆಚೆ ಮನೆಗಳತ್ತ,
ಶೂನ್ಯನೋಟ ಬೀರುತ್ತ ನಿಂತಿದ್ದ ಸುನಂದಾ, ಹಾಗೆ ನಿಂತಿರುವುದು ಬೇಸರವಾಗಿ,
ನಿಟ್ಟುಸಿರು ಬಿಟ್ಟು ಕಿಟಿಕಿ ಮುಚ್ಚಿದಳು.
ಅಷ್ಟರಲ್ಲೆ ಹೊರಗಿನಿಂದ “ಪೋಸ್ಟ್” ಎಂಬ ಸ್ವರ ಕೇಳಿಸಿತು.
ಕುಸುಮಾ ಬರೆಯುವೆನೆಂದಿದ್ದಳು. ಆಕೆಯಿಂದ ಬಂದಿರಬಹುದೆಂದು ಭಾವಿಸುತ್ತ
ಸುನಂದಾ ಅತ್ತ ಧಾವಿಸಿ ಬಾಗಿಲಿನೊಳಕ್ಕೆ ಬಿದ್ದಿದ್ದ ಲಕೋಟೆಯತ್ತ ಬಾಗಿದಳು:
ಅದು ಆಕೆಯ ತಂದೆಯಿಂದ ಬಂದಿತ್ತು. ಆತುರವಾಗಿ ಸುನಂದಾ ಅದ
ನ್ನೊಡೆದಳು:
ಕಾಗದದ ಬದಿಗಳಿಗೆ ಹಚ್ಚಿದ್ದ ಅರಸಿನ ನೋಡಿ ಆಕೆಯ ಮುಖ ಅರಳಿತು.
ಆಶೀರ್ವಾದಗಳನ್ನೆಲ್ಲಾ ಕೊಟ್ಟು ಅವರು ಬರೆದಿದ್ದರು:
“ವಿಜಯಾಗೆ ವರ ಗೊತ್ತಾಗಿದೆ. ನಮ್ಮ ಮಟ್ಟಕ್ಕೆ ಸರಿಹೋಗುವಂಥ ಮನೆತನ.
ಶಿವಮೊಗ್ಗಾ ಕಡೆಯವರು. ಈ ತಿಂಗಳ ಕೊನೆಯಲ್ಲೇ ಒಳ್ಳೇ ಮುಹೂರ್ತವಿದೆ
ಯಾದ್ದರಿಂದ ಅದನ್ನೇ ಗೊತ್ತುಮಾಡಿದ್ದೇವೆ. ಇನ್ನು ಹೆಚ್ಚು ದಿವಸಗಳೇ ಇಲ್ಲ.
ರಜಾ ತೆಗೆದುಕೊಂಡು ಮಗುವಿನೊಡನೆ ನೀವಿಬ್ಬರೂ ಕೂಡಲೇ ಬರಬೇಕೆಂದು ಅಳಿ
ಯಂದಿರಿಗೂ ಬರೆದು ಇದರ ಜತೆಯಲ್ಲಿರಿಸಿದ್ದೇನೆ...ಖಂಡಿತಾ ಬನ್ನಿ ...ಎಲ್ಲಾ ಅವಸರ
ದಲ್ಲೇ ಆಗಬೇಕಾಗಿದೆ. ಕಾಗದ ನೋಡಿದ ತಕ್ಷಣ ಬರಬೇಕೆಂದು ವಿಜಯಾ ಹೇಳು
ತಾಳೆ. ನಿನ್ನ ತಾಯಿಯೂ ಅದೇ ಅಭಿಪ್ರಾಯ ಪಡುತ್ತಾಳೆ....”
ಜತೆಯಲ್ಲಿ ಪುಟ್ಟಣ್ಣನಿಗೆಂದು ಬರೆದಿದ್ದ ಕಾಗದವಿತ್ತು. ಅದನ್ನೂ ಸುನಂದಾ
ಅವಸರವಾಗಿ ಓದಿದಳು. ಅದರಲ್ಲೂ ಹೆಚ್ಚು ಕಡಮೆ ಆ ವಿಷಯವೇ ಇತ್ತು.
ಅಂಗಳಕ್ಕಿಳಿದು ನೇರವಾಗಿ ರಾಧಮ್ಮನ ಮನೆಯೊಳಕ್ಕೆ ಹೋಗಿ ಸುನಂದಾ
ಅಂದಳು:
“ರಾಧಮ್ಮ! ನನ್ನ ತಂಗಿಗೆ ವರ ಗೊತ್ತಾಗಿದೆ. ಈ ತಿಂಗಳಲ್ಲೇ ಮದುವೆ!”
ಅನ್ನ ಬಸಿಯುತ್ತಿದ್ದ ರಾಧಮ್ಮ, ಸುನಂದೆಯ ಗದ್ದಲದ ನಡುವೆ ಕೈ ಬೆರಳು
ಸುಟ್ಟುಕೊಂಡರು. ಸುನಂದಾ ಹೇಳಿದುದನ್ನು ಕೇಳಿ, ಸಂತೋಷದಿಂದ ಆಕೆ ಬೆರಳನ್ನು
ತುಟಿಗಳ ನಡುವಿಗಿಟ್ಟು ಚೀಪಿದರು.

೨೩

ತಕ್ಷಣವೇ ಅಲ್ಲದಿದ್ದರೂ ಆ ವಾರವೇ ಸುನಂದಾ ತವರುಮನೆಗೆ ಹೊರಟಳು.
ಪುಟ್ಟಣ್ಣ ಬರಲಿಲ್ಲ. ಆದರೆ ಹೆಂಡತಿಯನ್ನೂ ಮಗುವನ್ನೂ ಕಳುಹಿದ.