ಈ ಪುಟವನ್ನು ಪ್ರಕಟಿಸಲಾಗಿದೆ

ಈ ಕಾದಂಬರಿಯನ್ನು ಕುರಿತು
ಸಾಧನೆಗೆ ಒಂದು ಕಾಗದ

ವಿಲ್ಸನ್ ಗಾರ್ಡನ್
ಬೆಂಗಳೂರು-೨

ಜೀವ,
ಕಾದಂಬರಿಯೊಂದನ್ನು ಬರೆದು ಮುಗಿಸಿ ನಿನಗೆ ಕಾಗದ ಬರೆಯ ಹೊರ
ಟಿದ್ದೇನೆ.
ಹೆಸರು 'ಪಾಲಿಗೆ ಬಂದ ಪಂಚಾಮೃತ.' ಹಾಗೆಂದು ಹೇಳಿದೊಡನೆಯೇ ಕಥಾ
ವಸ್ತುವೇನೆಂದು ತಿಳಿಯಿತು, ಎನ್ನುವೆಯೇನೋ! ನೀನು ಬುದ್ಧಿವಂತೆ. ಸರಿಯಾಗಿಯೇ
ಊಹಿಸಿಕೊಂಡರೂ ಆಶ್ಚರ್ಯವೇನಿಲ್ಲ. ಎಷ್ಟೆಂದರೂ ನನ್ನ ಒಡನಾಡಿ ತಾನೆ?
ಈ ಸಲ ಈ ಕಾದಂಬರಿಯನ್ನು ಬರೆದಾಗ ನನಗೊಂದು ರೀತಿಯ ವಿಚಿತ್ರ ಅನು
ಭವವಾಯಿತು:
ನೀನು ನನ್ನೆದುರು ಕುಳಿತು, ಮೇಜಿನ ಮೇಲೆ ಮೊಣಕೈಗಳನ್ನೂರಿ, ಅಂಗೈಗಳ
ಮೇಲೆ ಮುಖವಿಟ್ಟು [ಮುದ್ದು ಮುಖವಿಟ್ಟು-ಕ್ಷಮಿಸು!], ನನ್ನನ್ನೆ ದಿಟ್ಟಿಸುತ್ತಿದ್ದ
ಹಾಗೆ. ನಡುನಡುವೆ ಎದ್ದು, ನನ್ನ ಹಿಂಬದಿಯಲ್ಲೆ ನಿಂತು, ನಾನು ಬರೆಯುತಿದ್ದು
ದನ್ನು ಓದಿದ ಹಾಗೆ.
ಒಮ್ಮೆ ನಿನ್ನ ಸ್ವರವೇ ಕೇಳಿಸಿತು:
“ಹೀಗೆ ನೋಡ್ತಾ ಇದ್ದರೆ ನಿನಗೆ ತೊಂದರೆಯಾಗ್ತದೆ, ಅಲ್ಲ?”
ನಾನು ಉತ್ತರವಿತ್ತೆ:
“ನೋಡ್ತಾ ಇದ್ದರೆ ತೊಂದರೆಯಾಗೋದಿಲ್ಲ; ದೃಷ್ಟಿಯಾಗ್ತದೆ!”
ನೀನು ನಕ್ಕು ಸುಮ್ಮನಾದೆ.
ಸಾಮಾನ್ಯವಾಗಿ ಯಾರಾದರೂ ಎದುರಿಗಿದ್ದರೆ, ಬರೆವಣಿಗೆಯಲ್ಲಿ ತಲ್ಲೀನವಾಗು
ವುದು ಕಷ್ಟ. ಆದರೆ ನೀನಿದ್ದಾಗ, ಆ ತಲ್ಲೀನತೆಗೆ ಯಾವ ಭಂಗವೂ ಬರಲಿಲ್ಲ.
ಅಷ್ಟೇ ಅಲ್ಲ, ನನ್ನ ಬರೆವಣಿಗೆ ಹೆಚ್ಚು ಸುಲಭವಾಯಿತು. ನಡ ನಡುವೆ
ಎಷ್ಟೋ ಸಾರೆ ನಾನು ನಿನ್ನ ಸಲಹೆ ಕೇಳಿದೆ. ಹೆಣ್ಣಿನ ಮನಸ್ಸಿಗೆ ಸಂಬಂಧಿಸಿ, ಗಂಡಿನ
ವರ್ತನೆಗೆ ಸಂಬಂಧಿಸಿ, ನಿನ್ನೊಡನೆ ವಿಚಾರ ವಿನಿಮಯ ಮಾಡಿದೆ. ಹೀಗೆ ಈ
ಕಾದಂಬರಿಯಲ್ಲಿರುವ ಪಾತ್ರಗಳು ಸೃಷ್ಟಿಯಾದುವು: ಸುನಂದಾ-ಪುಟ್ಟಣ್ಣ, ರಾಧಮ್ಮ,
ಕುಸುಮಾ... ಒಬ್ಬೊಬ್ಬರೂ. ಅಧ್ಯಾಯದಿಂದ ಅಧ್ಯಾಯಕ್ಕೆ ಕಥೆ ರೂಪುಗೊಳ್ಳುತ್ತ
ಸಾಗಿ ಪಾತ್ರಗಳು ಪುಷ್ಟವಾಗಿ, ಮುಕ್ತಾಯ ಬಂತು.