ಈ ಪುಟವನ್ನು ಪ್ರಕಟಿಸಲಾಗಿದೆ

70

ಕನಸು

ರಾಧಮ್ಮನಿಗೆ, ಸುನಂದೆಯ ಆ ದುಸ್ಥಿತಿಯನ್ನು ಕಂಡು, ಸಹಾನುಭೂತಿ ದುಃಖ
ವಾಗಿಯೂ ದುಃಖ ಆಕ್ರೋಶವಾಗಿಯೂ ಮಾರ್ಪಟ್ಟು, ಗಂಟಲು ಒತ್ತರಿಸಿ ಬಂತು.
ಕೆಟ್ಟ ಗಂಡಂದಿರ ವಿಷಯ ಆಕೆ ಎಷ್ಟೋ ಕೇಳಿದ್ದರು, ಕಲ್ಪಿಸಿಕೊಂಡಿದ್ದರು. ವಿದ್ಯಾ
ವಿಹೀನನಾದರೇ ಮನುಷ್ಯ ಹಾಗಾಗುತ್ತಾನೆ ಎಂದೂ ಅವರು ಭಾವಿಸಿದ್ದರು. ಆದರೆ
ಅವರ ಆ ಪೂರ್ವ ಕಲ್ಪನೆಗಳನ್ನೆಲ್ಲ ನಗೆಗೀಡು ಮಾಡಿತ್ತು, ಈ ನಿದರ್ಶನ.
ರಾಧಮ್ಮನ ಸಂತಾಪ ಹೆಚ್ಚಲು ಇನ್ನೂ ಒಂದು ಕಾರಣವಿತ್ತು. ಅದು, ಶ್ಯಾಮ
ತನ್ನನ್ನು ಹಿಂಬಾಲಿಸುತ್ತಿರುವನೆಂಬುದನ್ನು ತಿಳಿದು ಪುಟ್ಟಣ್ಣ ಹೆಂಡತಿಗೆ ಹಿಂಸೆಕೊಟ್ಟಿರ
ಬೇಕೆಂಬ ಊಹೆ. ಸುನಂದೆ ಏನಾದರೂ ಹಾಗೆ ಯೋಚಿಸುತ್ತಿರಬಹುದೇ ಎಂದು
ಅವರು ಕಾತರಗೊಂಡಿದ್ದರು.
ಆ ಮಾತು ಸ್ಪಷ್ಟವಾಗಬೇಕೆಂದೇ ಅವರು ಕೇಳಿದರು:
“ನನ್ನಿಂದಾಗಿ ನಿಮಗೆ ಇಷ್ಟೆಲ್ಲ ಹಿಂಸೆಯಾಯ್ತು ಅಲ್ವೆ ಸುನಂದಾ?”
ಅಲ್ಲ ಎನ್ನುವಂತೆ ಸುನಂದಾ ತಲೆಯಾಡಿಸಿದಳು. ಮತ್ತೆ ಮುಖವನ್ನು ಪಕ್ಕಕ್ಕೆ
ಹೊರಳಿಸಿದಳು.
ಸಮಾಧಾನದ ಮಾತು ಎನ್ನುವಂತೆ ರಾಧಮ್ಮ ಹೇಳಿದರು:
“ಹೆಣ್ಣಿನ ಜನ್ಮವೇ ಇಷ್ಟು ಸುನಂದಾ. ಕಷ್ಟ ಅನುಭವಿಸೋಕೇ ನಾವು ಹುಟ್ಟಿ
ದೋರು.”
'ಸುಳ್ಳು!' ಎಂದಿತು ಸುನಂದೆಯ ಮನಸ್ಸು. ತನ್ನನ್ನು ಸಂತೈಸುವುದಕ್ಕೋಸ್ಕರ
ಹೀಗಾಡುತ್ತಾರೆ; ಎಲ್ಲಾ ಹೆಂಗಸರ ಜನ್ಮವೂ ಇಂಥದೇ ಎನ್ನುವುದು ಸುಳ್ಳು; ಸ್ವತಃ
ರಾಧಮ್ಮ ಹಾಗಿದಾರೇನು?-ಎಂದು ಆ ಮನಸ್ಸು ಗೋಗರೆದುಕೊಂಡಿತು.
ಮಲಗಿದ್ದವಳು ಮೌನವಾಗಿದ್ದರೂ ರಾಧಮ್ಮ ಅಂದರು:
“ಏಳಿ. ಮೈಗಿಷ್ಟು ಎಣ್ಣೆ ಹಚ್ಚಿಕೊಳ್ಳಿ.”
ಮೈಗೆ ಎಣ್ಣೆ...! ತಾನು ಮುಸುಕೆಳೆದು ಮಲಗಿದ್ದರೂ ಒಳಗಿನ ದೇಹ ಜರ್ಜ
ರಿತವಾಗಿತ್ತೆಂದು ಆಕೆ ತಿಳಿದಿದ್ದರಲ್ಲವೆ?
ಆಗಲೂ ಮಾತನಾಡಲಿಲ್ಲ ಸುನಂದಾ.
“ನನ್ನ ಮೇಲೆ ಸಿಟ್ಟಾಗಿದೀರಾ? ಹಾಗಿದ್ದರೆ ಹೇಳಿ. ಹೊರಟು ಹೋಗ್ತೀನಿ.”
ಇಲ್ಲ-ಬೇಡ-ಎನ್ನುವಂತೆ ಸುನಂದಾ ಮತ್ತೊಮ್ಮೆ ತಲೆಯಾಡಿಸಿದರು.
“ಎದ್ದು ಕೂತ್ಕಳ್ಳಿ ಹಾಗಾದರೆ.”
ಮಗುವನ್ನು ಪಕ್ಕಕ್ಕೆ ಸೇರಿಸಿ, ರಾಧಮ್ಮನ ಸಹಾಯದಿಂದ ಸುನಂದಾ ಎದ್ದು
ಕುಳಿತುಕೊಂಡಳು. ರಾಧಮ್ಮನ ಮುಖ ನೋಡಿದರೆ ತನಗೆಲ್ಲಿ ಅಳುಬರುವುದೋ
ಎಂದು ಆಕೆ ತಲೆ ಬಾಗಿಸಿಯೇ ಕುಳಿತಳು.
ರಾಧಮ್ಮ ಅಡುಗೆ ಮನೆಯತ್ತ ಇಣಿಕಿ ನೋಡಿ, ಬಚ್ಚಲು ಮನೆಗೂ ಹೋಗಿ
ಬಂದು, ಹೇಳಿದರು: