೧೨೦ ಸತೀಹಿತೈಷಿಣಿ (ತ್ರೈಮಾಸಿಕ vvvvvvvvvvvvv, , , , , , v ಶಾರದೆ: ನಾನು ಹೇಗೆ ಬರಲಿ ? ಇತ್ತ ಕಡೆಯ ಬಾಗಲಿಗೆ ಬೀಗವನ್ನು ಹಾಕಿರುತ್ತಾರೆ. ಕುಮುದೆ: ಬೀಗಹಾಕಿದ್ದಾರೆಯೇ ? ಹಾಗಿದ್ದರೂ ನಿನಗೆ ಅಡ್ಡಿಯೇ ನಿದೆ ? ನಮ್ಮ ಅಣ್ಣಯ್ಯನ ಕಿರುಮನೆಯ ಕಡೆಯ ಬಾಗಿಲಿನಿಂದ ಬರಲಾಗದೇನು? ಪೂರ್ಣ:--ಕುಮುದಾ ! ದಯೆಯಿಟ್ಟು ನನ್ನನ್ನು ಇತ್ತ ಕಡೆಯ ಬಾಗಿಲಿ ನಿಂದಾದರೂ ಹೇಗಗೊಡು, ನಿನ್ನ ಕಾಲಿಗೆ ಬೀಳುತ್ತೇನೆ. ಕುಮುದೆ:-ನಗುತ್ತ “ಕಾಲಿಗೆ ಬಿದ್ದರೆ ಹರಕೆಯೊಪ್ಪಿಸುತ್ತೇನೆ. ನಿನಗೆ ಬೇಗನೆ ಕಲ್ಯಾಣವಾಗಲಿ! ಪೂಣ೯:-ಕಲ್ಯಾಣವನ್ನು ಬೇಡವೆಂದು ಹೇಳುವರಾರು ? ಎಂದಾದ ರೂ ಆಗಿಯೇ ಆಗುತ್ತದೆ, ಈಗಿನ ಮಾತನ್ನು ನಡೆಯಿಸಿಕೊಡು ಅಷ್ಟೇ ಸಾಕು. ಕುಮುದೆ:-ಪೂರ್ಣಕಲೆಯ ಕೈಬಿಟ್ಟು 6 ಹಾಗಿದ್ದರೆ ನಡೆ, ನಿನ್ನನ್ನು ನಾನೇನೂ ಕಟ್ಟಿ ಬಿಗಿದು ನಿಲ್ಲಿಸಿಕೊಂಡಿಲ್ಲ. ಹೋಗು! ” ಪೂರ್ಣಕಲೆಯು ನಗುಮೊಗದಿಂದ 'ಕೋಪಿಸಿಕೊಂಡಾದರೂ ಬಿಟ್ಟೆ ಯಲ್ಲ, ಅಷ್ಟೇಸಾಕು. ” ಎಂದು ಹೇಳಿ ಇದಿರಾಗಿದ್ದ ಬಾಗಿಲ ಬಳಿಗೆ ಒಂದು ಬಾಗಿಲನ್ನು ತನ್ನೆರಡು ಕೈಗಳಿಂದಲೂ ಬಲವಾಗಿ ಹಿಡಿದೆಳದಳು. ಬಾಗಿಲನ್ನು ತೆರೆಯಲಾಗಲಿಲ್ಲ. ಕಲೆಯ ಹೃದ ಯವು ನಡುಗಿತು. ಕುಮುದೆಯನ್ನು ನೋಡಿ, 66ಕುಮುದಾ! ಬಾ ಗಿಲನ್ನು ತೆಗೆಯಲಾಗುವುದಿಲ್ಲವೇಕೆ ? ಎಂದು ಕೇಳಿದಳು. ಕುಮದೆ:-ಹೊರಗಡೆ ಶಾರದೆಯು ಚಿಲುಕವನ್ನು ಹಾಕಿರಬಹುದು ಕೂಗಿ ಹೇಳು. ಪೂರ್ಣಕಲೆ:-ಗಟ್ಟಿಯಾಗಿ ಕೂಗಿದಳು. 'ಶಾರದಾ! ನೀನೂ ಹಾಸ್ಯಕ್ಕೆ
ಪುಟ:ಪೂರ್ಣಕಲಾ.djvu/೧೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.