೧೩೨ ಸತೀಹಿತೈಷಿಣಿ (ಿಮಾಕಸಿಕ 1 \ # 1 # # # # # » f * *
- # # +
\r\/ \N ಯಲ್ಲಿ ಮಧ್ಯದ ಉಪ್ಪರಿಗೆಯ ಮನೆಯ ಮೇಲ್ಗಡೆಯ ಕಿರುಮನೆಯಲ್ಲಿ ಮಂಚದ ಮೇಲೆ ಕರಾಳಕೃಷ್ಣ ವದನೆಯೋರ್ವಳು ಕುಳಿತಿದ್ದಳು. ಮಂ ಚದ ಬಳಿಯಲ್ಲಿ ದಾಸಿಯೊಬ್ಬಳು ನಿಂತು ಬೀಸಣಿಗೆಯಿಂದ, ಮಂಚದ ಮೇಲೆ ಕುಳಿತಿದ್ದವಳಿಗೆ ಗಾಳಿಯನ್ನು ಹಾಕುತ್ತಿದ್ದಳು. ಕೃಷ್ಣವದನೆ ಯು ರೂಪವತಿಯಲ್ಲದಿದ್ದರೂ ಯವನಭರದಿಂದುಂಟಾದ ದೇಹ ವುಷ್ಟತೆ ಯಿಂದಲೂ, ಸೈರವೃತ್ತಿಯ ವಿಲಾಸದಿಂದಲೂ, ಉಟ್ಟು ತೊಟ್ಟಿದ್ದ ಆಭರಣ ವಸ್ಯಾದಿಗಳ ದೆಸೆಯಿಂದಲೂ ಅದೊಂದು ಬಗೆಯ ಥಾಳಫಲ್ಯ ದಿಂದ ಯುವಜನ ಚಿತ್ತಾಕರ್ಷಿಣಿಯಾಗಿ ತೋರುತ್ತಿದ್ದಳು. ಯುವತಿಯನ್ನು ನೋಡಿದರೆ, ಮತ್ತು ಯುವತಿಯ ಮನೆಯಲ್ಲಿ ( ಇತರ ಪರಿವಾರದವರನ್ನು ನೋಡಿದರೆ, ಮನೆಯ ಆಡಳಿತ ಊಟಪಾ ವಿಗಳೇ ಮೊದಲಾದ ಇತರ ವಿಚಾರಗಳನ್ನು ನೋಡಿದರೆ ಇವಳು ಜಾತ್ಯಾ ವೇಶೈಯಲ್ಲವೆಂದೂ, ಧನದಾಹ ಪಿಶಾಚಗ್ರಸ್ತರಾದ ಪೋಷಕರ ದೆಶ ೧೭ಂದ ಸೈರವೃತ್ತಿಗೆರಗಿದ ಕುಲಬಾಂಗನೆಂದೂ ತೋರುತ್ತಿದ್ದಿತು - (ಹೇಗೆಂಬುದು ಇನ್ನು ಮುಂದೆ ತಿಳಿದುಬರುವುದು.) . ಯುವತಿಯು ನಿಟ್ಟುಸಿರಿಟ್ಟು-ದಾಸಿಯನ್ನು ಕುರಿತು 'ನಿಶೆ ! ಎಷ್ಟು ಕಾಠಿಣ್ಯ, ಎಂತಹ ಕೃತಘ್ನತೆ, ಎಷ್ಟು ವಂಚನೆ, ಎಂತಹದ್ರೋಹ. ನಿಶೆ -ಅಮ್ಮಾ! ಸುಮ್ಮನೇಕೆ ಕಾತರಪಡುವೆ ? ಆತುರದಿಂದ ಏನನ್ನೂ ಹೇಳಬೇಡ, ಸ್ವಲ್ಪ ನಿಧಾನಿಸು, ಮೋಸವೇನೂ ಇರಲಾರದು. ನಳಿನೀಕಾಂತನು ಹೇಳಿದಂತೆ ಆಲಸ್ಯದಿಂದ ಬರಲಿಲ್ಲವೋ-ಏನೋ ಅಷ್ಟಕ್ಕೇ ಇಷ್ಟು ಯುವತಿ-ಕೆಂಗಣ್ಣುಗಳಿಂದ “ಸಾಕು ಸಾಕು, ಕೇಳಲಾರೆನು, ಸು ಮನಿರು, ಆಲಸ್ಯವಂತೆ! ಎಂತಹ ಆಲಸ್ಯ? ನೀನೇನೂ ನನಗೆ ಹೇಳಬೇಕಾಗಿಲ್ಲ, ಹೋಗತ್ತ-ಅವನ ಹಿಂದೆಯೇ, ”