ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೧೩೧ • • • • • ಗೀತ, ವಾದನಗಳೂ, ಮತ್ತು ಇತರ ಆತಿಧಗಳೂ, ತರುಣ ಜನರ ಮನಸ್ಸನ್ನು ಯಾವ ಸ್ಥಿತಿಗೆ ತರಬಹುದೆಂದು ಸ್ವಲ್ಪ ವಿಚಾರಮಾ ಡಿದರೆ ಸಾಕಾಗಿದೆ. ಹೀಗೆ ಹೇಳಿದೆವೆಂದು ನಮ್ಮಲ್ಲಿ ಮಲ್ಯಾ ದೋಲ್ಲಂಘನದ ಅಪವಾದವನ್ನು ಹೊರೆಯಿಸಬಾರದೆಂದು ಪ್ರಾ ರ್ಥಿಸುತ್ತೇವೆ, ಕುಮುದೆಯು ನಮ್ಮ ಒಡಹುಟ್ಟಿದವಳೆಂ ದೇ ತಿಳಿದಿರುವುದರಿಂದ ಅವಳ ವಯೋವೃದ್ಧಿಗಾಗಿ ನಾವು ಈ ಮಾತನ್ನು ಸ್ಪಷ್ಟವಾಗಿ ನಿವೇದಿಸಿರುತ್ತೇವೆ. ತಾವು ಒಂದು ವೇಳೆ ಅನ್ಯ ಪದ್ಧತಿಯನ್ನು ಹಿಡಿದಿದ್ದರೂ ತಮ್ಮ ಕನೈಗೆ ಮಾತ್ರ ನಮ್ಮ ಆದ್ಯ ನೀತಿಶಿಕ್ಷಣದ ಪದ್ಧತಿಯನ್ನೇ ಕಲಿಸಬೇಕೆಂಬುದು ನಮ್ಮ ಪ್ರಾರ್ಥನೆ. ಹೀಗೆ ಹೇಳಿ ಇಬ್ಬರೂ ಕೈ ಮುಗಿದು ಹೊರಟು ಹೋದರು. -~- ನವಮಹರಿಚ್ಛೇದ 'ರಕ್ತಾಕ್ಷಿಯ ಸಂತಾಸ, ನಿಶೆಯ ಸಮಾಧಾನ, ನಳಿನೀಕಾಂತ ಮಧುಮಿತ್ರರ ಆಗಮನ, ರಕ್ತಾಕ್ಷಿಯ ತಿರಸ್ಮಾರವಾಕ್ಯ, ನಳಿನೀಕಾಂತನ ದೈನ್ಯಪ್ರಾರ್ಥನೆ, ರಕ್ತಾಕ್ಷಿಯ ಆಗ್ರಹ, ಮಧುಮಿತ್ರನ ಕ್ಷಮಾಪ್ಪಾ ರ್ಧನೆ, ರಕ್ತಾಕ್ಷಿಯ ಉದಾಸೀನ-ನಿಶೆಯ ಆದರೆ ಮತ್ತು ಅಭಯಪ್ರ ದಾನ ಇತ್ಯಾದಿ ಇತ್ಯಾದಿ. ಕೃತಷ್ಟ ! ತೆಲಗು, ಇನ್ನು ಮುಂದೆ ನಿನ್ನ ಮುಖಾವಲೋಕನವೋ ನನಗೆ ಬೇಡ. ರಾತ್ರಿ ಹತ್ತು ಗಂಟೆ ಹೊಡೆದು ಹೋಗಿದ್ದಿತು. ಪ್ರಭಾನಗರದ ರಾಜಬೀದಿಯ ಹಿಂದುಗಡೆಯ ಪಣ್ಯಾಂಗನಾವೀಥಿ (ದೇಶೈಯರ ಬೀದಿ)