ಅಗಿಲೆ ಸತಿಹಿತೈಷಿಣಿ (ತ್ರೈಮಾಸಿಕ vvvv འན་ཀ ཀརར་ ಗಳನ್ನೂ ಸಹಿಸಿಕೊಂಡು ಅವರ ಸ್ಮರಣೆಯಿಂದ ಜೀವಿಸುತ್ತಿರು ವೆನು.. ಇಷ್ಟರಲ್ಲಿ ಮಹಡಿಯ ಹಂತದ ಕಡೆಯಿಂದ ಧ್ವನಿಯು ಹೊರ ಟಿತು. “ಅಜ್ಜಿ ! ಸಮಾಲೋಚನೆಯು ಸಾಂಗವಾಯ್ತಿ ? ನಮ್ಮನ್ನು ಒಳಗೆ ಬರಗೊಡುವಿರಾ ??? ಸಮಾಲೋಚನೆಯಲ್ಲಿದ್ದ ಸಾದ್ವಿಯರಿಗೆ ಈ ಮಾತು ಕೇಳಬರ ಲಿಲ್ಲ. ಆದರೆ ಅದೇ ನಿರೀಕ್ಷಣೆಯಲ್ಲಿದ್ದ ಮಧುಮಿತ್ರನಿಗೆ ಸ್ಪಷ್ಟವಾಗಿ ಕೇಳಿಸಿದುದರಿಂದ ಅವನು ಗಟ್ಟಿಯಾಗಿ ಕೂಗಿ ಹೇಳಿದನು. ಅಮ್ಮ! ನಮ್ಮ ಮಿತ್ರರು ಬಂದು ಹಂತದ ಬಳಿಯಲ್ಲಿ ನಿಂತು ಕಾದಿರುವರು, ಅವರಿಗೆ ಅವಕಾಶ ಕೊಟ್ಟರೆ? ಅಜ್ಜಿಯು ತಟ್ಟನೆ ಎದ್ದು ನಿಂತು-ಓಹೋ ! ಆಗಲೇ ಅಯ್ತು ಗಂಟೆಯಾಗುತ್ತ ಬಂದಿತು.' ಎಂದು ಹೇಳಿ ಹೊರಹೊರಡಲು ಸಿದ್ದವಾ ದಳು, ಉಳಿದ ಮೂವರೂ ಎದ್ದು ಮಧುಮಿತ್ರನಿಗೆ ಹೊರಡುವೆವೆಂದ ಹೇಳಿ ಅಜ್ಜಿಯ ಹಿಂದೆಯೇ ಹೊರಟರು. ಇವರು ಹಂತದ ಬಳಿಗೆ ಬರ ವಷ್ಟರಲ್ಲಿ ಅಕ್ಷಯಕುಮಾರನು ಕಲಾಧವ, ಪ್ರಭಾಕರ, ಕುಮುದಮಿತ್ರ ರೊಡನೆ ಮುಂದೆ ಬಂದು ಸಂತೋಷದಿಂದ ಕಟ್ಟೋಡಿಸಿ-ನಮಸ್ಕರಿಸಿದನು. ಅಜ್ಜಿಯು ನಾಲ್ವರನ್ನೂ ಆಶೀರ್ವದಿಸಿ ಹೊರಟುಹೋದಳು. ಅಕ್ಷಯಕುಮಾರ ಪ್ರಕೃತಿಗಳು ಬಂದು ಮಧುಮಿತ್ರನ ಕಿರುಮ ನೆಯೊಳಹೊಕ್ಕರು. ಮಧುಮಿತ್ರನು ಸಂಭ್ರಮದಿಂದ ಎದ್ದು ಮುಂದೆ ಬಂದು ಹಸ್ತಲಾಘವಪೂರ್ವಕವಾಗಿ ಮಿತ್ರರ ಸುಖಾಗಮನವನ್ನು ಕೋ ರಿದನು. ಅಯ್ಯರೂ ಪರಸ್ಪರ ಸ್ನೇಹಾಧಿಕ್ಯದಿಂದ ಬೆನ್ನಮೇಲೆ ಅಪ್ಪಳಿಸಿ ನಗುತ್ತ ವಂಚ ದವೇಲೆ ಕುಳಿತರು. ಮಿತ್ರರಲ್ವರ ಸುಖಗೋಷ್ಟಿ ಯಲ್ಲಿ ಸಂಭಾಷಣೆಗೆ ಮೊದಲಾಯಿತು.
ಪುಟ:ಪೂರ್ಣಕಲಾ.djvu/೨೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.