ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೨೧೯ VWMYV/ \/ \ \ / \ / / \ /\/ \ \\/\ \ \/ \ \ +\/\/\/ \ \ \/\

  • \ Y\/\/\/\/\/\

ಮಧು-ಅಕ್ಷಯಕುಮಾರ ! ಇದೇನಿದು, ಇಷ್ಟು ವಿಳಂಬವಾಯಿತು ? ಈ ಮಿತ್ರನನ್ನು ಮರೆತಿದ್ದಿರೋ ? ಅಥವಾ ನಮ್ಮ ಕಲಾಧವ ಕುಮಾರನೇನಾದರೂ ಬರಲೊಲ್ಲೆನೆಂದು ಹಟ ಹಿಡಿದು ನಿಂತಿದ್ದ ನೋ-? ಹೇಗೆ ? ಕಲಾಧವ ಕಲಾಧವನ ಮೇಲೇಕೆ ವೃಥಾರೋಪಣೆಯನ್ನು ಮಾಡುವೆ ? ಈಗ ಇವನು ನಿನ್ನಲ್ಲಿ ಉದಾಸೀನವನ್ನು ತೋರುತ್ತಿರುವನೆಂದು ಹೇಳಲು ಪ್ರಮಾಣವೇನಾದರೂ ಇರುವುದೋ ? ಮಧು-ಕಲಾಧವಕುಮಾರ ! ಕ್ಷಮಿಸು, ನನ್ನ ಭಾವನೆ ತಪ್ಪಾಗಿರಬ ಹುದು. ಆದರೆ ಮತ್ತಾವಕಾರಣ ? ಪ್ರಭಾಕರ-ನಗು-ಕಾರಣವೊ ? ಮಧುಮಿತ್ರನು ಮಧುಪಾನದಿಂದ ಉನ್ಮತ್ತನಾಗಿ,-ಮಧುಪವೃತ್ತಿಯಲ್ಲಿ ತಲ್ಲೀನನಾಗಿ ಹೋಗಿರಬ ಹುದೆಂದೂ, ಈ ವೇಳೆಯಲ್ಲಿ ನಾವು ಅವನನ್ನು ನೋಡುವುದ ರಿಂದ ಅವನ ಏಕಾಂತ ಸುಖಕ್ಕೆ ಆತಂಕವಾಗಬಹುದೆಂದೂ ಭಾವಿಸಿ ಸುಮ್ಮನಿದ್ದೆವು. ಮತ್ತೇನು ? ಮಧು-ಪ್ರಭಾಕರನ ಬೆನ್ನು ತಟ್ಟಿ -ಪ್ರಭಾಕರ ! ನೀನು ಒಳ್ಳೆ ಮಾ ರ್ಮಿಕನೂ ವಾಗ್ನಿಯೂ ಆದ ಪಂಡಿತನೇ ಸರಿ ! ಆದರೆ, ಹೀಗೆ ಹಿಂದೆ ನಡೆದುಹೋದ ವಿಚಾರವನ್ನು ನೆನಪಿಗೆ ತಂದು ನನ್ನನ್ನು ನೋಯಿಸಬಾರದೆಂದು ನಾನು ಪ್ರಾರ್ಥಿಸುವೆನು. ಕುಮುದಮಿತ್ರ-ಮತ್ತೆ ಮತ್ತೆಯು ಒತ್ತಿ ಒತ್ತಿ ಹೇಳದಿದ್ದರೆ ಚಿತ್ರ ಶುದ್ದಿ ಯಾಗುವದು ಹೇಗೆ ? ಕಲಾಧವ-ನಿಜ ! ಕೆತ್ತಿಸಿಕೊಳ್ಳದೆ ವಿಗ್ರಹವಾಗಲಾರದು, ಸುತ್ತಿಗೆ ಯಪೆಟ್ಟು ತಿನ್ನದೆ-ಸುಡಿಸಿಕೊಳ್ಳದೆ ಚಿನ್ನ ಬೆಳ್ಳಿಗಳು ತೊಡವೆನ್ನಿ ಸವು. ಹಾಗೆಯೇ ನಮ್ಮ ವಿಚಾರವೂ ಆಗಿದೆ.