ನಲಸಂ|| ಮಾರ್ಗಶಿರ) ಪೂರ್ಣ ಕಲಾ ೨೨೫ + + "An - -~ " } } ++++ ನಾನಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಅಂತಹ ಕಾಯಿಲೆಗೆ ಳಿಗಾಗಿಯೇ ಲಕ್ಷಗಟ್ಟಲೆಯ ವೈದ್ಯರು ಪ್ರಸಿದ್ಧರಾಗಿರುವರು. ಪ್ರತಿ ಯೊಂದು ಪತ್ರಿಕೆಯಲ್ಲಿಯೂ ನೂರಾರು ಔಷಧಗಳ ಹೆಸರು ದೊರೆ ಯುವುವು.... ಅಕ್ಷಯ-ಬೃಹತ್ವ ! ನಿನ್ನ ಹೆಸರನ್ನು ಉಳಿಸಿಕೊಳ್ಳುವ ಯೋಚನೆ ಮಾಡು, ಈವರೆಗೆ ಕೆಡಿಸಿಕೊಂಡಿರುವುದು ಸಾಕು, ಹಾಳು ಪ್ರಕಟನೆಗೆ ಹಿಗ್ಗಿ, ಸಿಕ್ಕಿದ ಕುಶ್ಚಿತ ವೈದ್ಯರ ಸಹಾಯವನ್ನು ಸಂಪಾದಿಸಿ, ಸರ್ವನಾಶಕರವಾದ ಹೇಯವೃತ್ತಿಗೆ ಹೋಗುವುದು ಸರಿಯಲ್ಲ. ಮಧುಮಿತ್ರನಿಗೆ ಮೊದಲು ಬುದ್ಧಿ ಮಾಂದ್ಯವಾಗಿ ದ್ದಿತಾದರೂ ಅವನು ಬುದ್ದಿ ತಿಳಿದೇ ಇಲ್ಲಿಗೆ ಬಂದು ಸೇರಿ ಬದು ಕಿದನು, ನಿನ್ನ ಕರ್ತವ್ಯವೂ ಅದೇ ಆಗಿರುವುದು, ಕಲಾಧವ ಬೃಹತೇನ ? ನಾನು ನಿನಗೆ ಇದೇ ಪರಿಚಿತನಾದವನು. ನನ್ನ ಮಾತಿನಲ್ಲಿ ನಿನಗೆ ಆದರವುಂಟಾಗದಿರುವದೇನೂ ಅತಿಶಯ ವಲ್ಲ; ಹಾಗೆಂದೂ ನಾನು ಸುಮ್ಮನಿರುವಂತಿಲ್ಲ. ನನ್ನ ಕರ್ತ ವ್ಯವನ್ನು ನಾನು ಮಾಡಲೇಬೇಕು. ಬೃಹ-ಪ್ರಸ್ತಾವನೆ ಮುಗಿದಿದ್ದರೆ ಕರ್ತವ್ಯವೇನೋ ಅದನ್ನು ಮಾಡ ಬಹುದು. ಕಲಾ-ಕರ್ತವ್ಯವೆಂದರೆ ಪ್ರಾರ್ಥಿಸುವದು! ಕೇವಲ ನಮ್ಮಭಾವದಿಂದ ಬೇಡಿಕೊಳ್ಳುವೆನು,-ನಮ್ಮ ಆರ್ಯಧರ್ಮವನ್ನು ಊರ್ಜಿತಪಡಿ ಸುವ ಕೆಲಸವು ನಮ್ಮ ಪಾಲಿಗೆ ಬಿದ್ದಿರುವುದು, ಹೀನ-ದುರ್ಬ ಅಸ್ಥಿತಿಯಲ್ಲಿರುವ ನಮ್ಮ ದೇಶಮಾತೆಯನ್ನು ಉನ್ನತಸ್ಥಿತಿಗೆ ತರಲು ನಾವೇ ಮುಂದೆ ನಿಲ್ಲಬೇಕು. ಹಾಗೆ ನಿಲ್ಲಬೇಕಾದರೆ ನಾವು ದೃಢಕಾಯರೂ, ಜಿತೇಂದ್ರಿಯರೂ ಧೀಮಂತರೂ ಆಗಿರ 29
ಪುಟ:ಪೂರ್ಣಕಲಾ.djvu/೨೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.