عوف ಸತೀಹಿತೈಷಿಣಿ (ತ್ರೈಮಾಸಿಕ • , , . . ~ Ananth subray(Bot) (ಚರ್ಚೆ) ಬೇಕು. ಹಾಗಾಗುವುದಕ್ಕೆ ಈ ನಮ್ಮ ಗುರುಕುಲವಾಸ, ಬ್ರಹ್ಮ ಚರ್ಯೆ , ವಿದ್ಯಾಭ್ಯಾಸ-ಇವೇ ಮೂಲಮಂತ್ರಗಳು. ಈ ಮಂ ತ್ರವು ನಮಗೆ ಅಜ್ಞಾನತಿಮಿರಾಂಧಕಾರ ವಿದ್ವಂಸರಾದ ಸದ್ಗುರು ಗಳ ಅನುಗ್ರಹವನ್ನೇ ಆಶ್ರಯಿಸಿರುವುದರಿಂದ ನಾವು ಸರ್ವಪ್ರ ಯತ್ನದಿಂದಲೂ ಅಂತಹ ಸದ್ಗುರುಗಳನ್ನು ಸಂಪಾದಿಸಬೇಕು. ನಾವು ನೋಡಿದುದರಲ್ಲಿ ಅಂತಹ ಗುರುರಾಜರೆಂದರೆ, ನಮ್ಮ ಗುರುಗಳೇ ! ನೀನು ಕೂಡ ಗುರುಸನ್ನಿಧಿಯಲ್ಲಿ ಆಶ್ರಯವನ್ನು ಹೊಂದಬೇಕೆಂಬುದೇ ನನ್ನ ಪ್ರಾರ್ಥನೆ. ಪ್ರಭಾಕರ-ನಾನು ಅದನ್ನು ಅನುಮೋದಿಸಿರುವೆನು, ಬೃಹ-ನೀನು ಅನುಮೋದಿಸಿದ್ದರೆ ಅದನ್ನು ಅನುಸರಿಸುವವರು ಅನುಸರಿ - ಸಲಿ! ಭ್ರಮರನ್ಯಾಯದಲ್ಲಿ ವರ್ತಿಸುತ್ತಿರುವ ನನಗೇಕೆ, ಆ ಮಾತು ? ಮಧು-ಅಣ್ಣ ! ನನ್ನ ಪ್ರಾರ್ಥನೆಯೊಂದು ! ಭ್ರಮರನ್ಯಾಯದಲ್ಲಿ ನಾನೂ ವರ್ತಿಸಿ ನೋಡಿರುವೆನು. ಅದರಲ್ಲಿ ಅಷ್ಟಕ್ಕಷ್ಟಕ್ಕೂ ಯಾತನೆಗಳೇನಿವೆಯಲ್ಲದೆ, ಶಾಂತಿ-ಸಂತೋಷಗಳ ಆಶೆಯೇ ಇಲ್ಲದೆ ಅಂಧಕಾರದಲ್ಲಿ ಸಿಕ್ಕಿದಂತೆ ಕೊರಗಿ ಕೊರಗಿ ಕಡೆಗೆ ಇಲ್ಲಿಗೆ ಬಂದೆ ನು, ಈಗ ನನ್ನ ಅಂಧಕಾರದ ಅಂತಸ್ತಾಪವೆಲ್ಲಾ ನಿವಾರಣೆ ಯಾಯಿತು; ಈಗ ನನ್ನ ಮನಸ್ಸು ಪ್ರಸನ್ನವಾಗಿ, ತಾಯಿ-ತಂದೆಗುರು, ಬಂಧು ಮಿತ್ರರ ಆಪ್ತ ವಾಕ್ಯವನ್ನು ಸಂಗ್ರಹಿಸುವುದರ ಯೇ ಉತ್ಸುಕವಾಗಿರುತ್ತದೆ. ಇವೆಲ್ಲವೂ ಕಲಾಧವನು ಹೇಳಿ ದಂತೆ ಗುರುಕೃಪೆಯಿಂದಾದುದು. ಆದುದರಿಂದ ಆ ಗುರುಕೃಪೆ ಯನ್ನು ಹೊಂದಲು ನೀನು ಪ್ರಯತ್ನ ಪಡಬೇಕಲ್ಲದೆ ತೃಷ್ಣಾತುರ ದಲ್ಲಿ ಬಿದ್ದು ವ್ಯರ್ಥಜೀವಿಯೆನ್ನಿ ಸಬಾರದು,
ಪುಟ:ಪೂರ್ಣಕಲಾ.djvu/೨೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.