ನಲಸಂ| ಮಾರ್ಗಶಿರ) ಪೂಣ೯ಕಲಾ ೨೩೭ v\\n ಹಾಗೆ ಆನಂದಬಾಷ್ಪವನ್ನು ಸುರಿಸುತ್ತ ಕೈಕಟ್ಟಿ ನಿಂತಿರುವ ಶಿಷ್ಯವರ್ಗವನ್ನು ನೋಡಿ ಭಾಸ್ಕರಾಚಾದ್ಯರು ಹೀಗೆ ಹೇಳಿದರು. “ಕೃತಾರ್ಥನಾದೆನು, ಪ್ರಿಯಶಿಷ್ಯರೇ ! ವಿಶ್ವಸನೀಯ ಬಾಂಧವರೇ ! ಈಗೆಲೀಗ ಕೃತಾರ್ಥನಾದೆನು. ನನಗೆ ಇದಕ್ಕೂ ಹೆಚ್ಚಾದ ಸುಖ ಸಂಗ ತಿಯೇನಿದೆ ? ಅವ ಮಕ್ಕಳು ಅಭ್ಯುದಿತರಾಗುವುದನ್ನು ನೋಡಬೇಕೆಂಬ ಆಶೆ, ನನಗೆ ಬಲವಾಗಿದ್ದಿತೋ-ಆ ನೀವೆಲ್ಲರೂ ಅಭ್ಯುದಯ ಪ್ರಾಸಾದವ ನೇರಲು ಅರ್ಹರಾಗಿ ನಿಂತು ಪ್ರಕಾಶಿಸುತ್ತಿರುವುದನ್ನು ನೋಡುವುದಕ್ಕೂ ಮಿಗಿಲಾದ ಸಂತೋಷವು ನನಗೆ ಇನ್ಯಾವುದಿರುವುದು ? ಶಾಂತಿನಿಕೇತನದ ಯಶಶ್ಚಂದ್ರಿಕೆಯನ್ನು ದಿಂಡಲವನ್ನು ವ್ಯಾಪಿಸುವಂತೆ ಮಾಡಲು ಕೃತ ನಿಶ್ಚಯರಾಗಿ ನಿಂತಿರುವ ನಮ್ಮ ಪ್ರಿಯಬಂಧು-ತಾರಾಕಾಂತರನ್ನು ಕಣ್ಣ ನವಾರೆ ನೋಡಿ ಧನ್ಯನಾದೆನೆಂದು ಅಭಿಮಾನಪಡುವುದಕ್ಕೂ ಹೆಚ್ಚಾದ ಅಪೂರ್ವ ದೃಶ್ಯವನ್ನಾವುದಿದೆ ? ಸಾಕು; ನನಗಿಷ್ಟೇ ಸಾಕು ! ಎಂದರೆ, ಇದಕ್ಕೂ ಹೆಚ್ಚಿದ ಸುಖ-ಸಮಾಧಾನಗಳು ಬೇಡವೆಂದು ಹೇಳಿದಂತೆ ಭಾವಿಸಬಾರದು. ಸುಖ-ಆನಂದ-ಕೀರ್ತಿಗಳು ಎಷ್ಟೆಷ್ಟು ಮೇಲೇರಿ ನಡೆಯುತ್ತ ಬಂದರೆ, ಅಷ್ಟಷ್ಟೂ ಉತ್ಸಾಹವೇ ಸರಿ, ಪ್ರಿಯಬಾಂಧವರೇ!ಶಾಂತಿನಿಕೇತನವನ್ನು ಆಕ್ರಮಿಸುವುದರಲ್ಲಿದ್ದ ಮಲಿನತೆ, ಭಗವತ್ಯಷೆಯಿಂದ ಈಗ ಪರಿಹಾರವಾಯಿತೆಂಬ ಆನಂದವು ನನ್ನಿಂದ ವಿವರಿಸಲ್ಪಡುವಂತಿಲ್ಲ ; ಅಷ್ಟೇ ಅಲ್ಲ. ನನ್ನ ಪರಮಪ್ರಿಯ ಬಂಧು-ತಾರಾಕಾಂತರಿಗೆ ನನ್ನಲ್ಲಿ ಅಚ್ಛೇದ್ಯವಾದ ವಿಶಸವ್ರಂಟಾಗಿರು ವುದೂ, ದುಸ್ಸಹವಾಸದಿಂದ ಅಧಃಪಾತಾಳಕ್ಕಿಳಿದು ಹೋಗುತ್ತಿದ್ದ ಮಧು ಮಿತ್ರನು ಸತ್ಸಹವಾಸಬಲದಿಂದ ಉದ್ಧ ತನಾಗಿ ಬಂದು, ಪಶ್ಚಾತ್ತಾಪ ಪ್ರಾಯಶ್ಚಿತ್ತದಿಂದ ಪರಿಶುದ್ಧನಾಗಿ, ಆಶ್ರಮದ ಪರಮಾಪ್ತ ಶಿಷ್ಯ ಕೊ ಟೆಯಲ್ಲಿ ಪರಿಗಣಿತನಾದುದೂ, ಮುಖ್ಯವಾಗಿ, ನಮ್ಮ ಮಾನ್ಯ ಸೋದರಿ
ಪುಟ:ಪೂರ್ಣಕಲಾ.djvu/೨೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.