೨೪೬ ಸತೀಹಿತೈಷಿಣೀ | (ಮಾಸಿಕ
ಗೀತಾಚಾರ್ಯರನ್ನು ಸದಸದ್ವಿವೇಚನೆಯ ಸಾರಥಿಯಾಗಿಯೂ, ಕಲಾಧವ ಪ್ರಕೃತಿಗಳನ್ನು ರಥಾಶ್ವಗಳೆಂದೂ ಭಾವಿಸಿರಿ, ಅಲ್ಲಿಂದ ಮುಂದೆ ಬಂದರೆ, ಜ್ಞಾನಕ್ಕೆ ಅಧಿದೇವತೆಯಾದ ಶ್ರದ್ಧೆಯೇ ಗುರುವರರ ಮಾತೃದೇವತೆ ಯೆಂದೂ, ಶ್ರದ್ದಾ ಜ್ಞಾನಲಾಭದಿಂದ ದೊರೆಯುವ ಆನಂದ ಸುಧಾರಸ ವೇ ಗುರುಪುತ್ರಿ ಪೂರ್ಣಕಲೆಯೆಂದೂ ಸುಧಾಸೌರಭ್ಯ-ಮಾಧುರಗಳೇ ಶಾರದಾ-ಕುಮುದೆಯರೆಂದೂ ಭಾವಿಸಿರಿ, ಮತ್ತು ವಿಜ್ಞಾನವನ್ನು ಗ್ರಹ ಣ ಮತ್ತು ಅವಧಾರಣ ಶಕ್ತಿಯು ಅನುಸರಿಸಿರುವುದೆಂದೂ, ಸದಸದ್ವಿ ವೇಚನೆಯನ್ನು ಶಾಂತಿಯು ಆಶ್ರಯಿಸಿರುವದೆಂದೂ ಧೃತಿಯು ಇವೆಲ್ಲವ ನ್ಯೂ ಆಶ್ರಯಿಸಿರುವುದೆಂದೂ ಇವೆಲ್ಲವನ್ನೂ ಆಶ್ರಯಿಸಿ ಜೀವಿಸುವದು ಭಕ್ತಿಯೆಂದೂ ತಿಳಿಯಿರಿ, ಆಗಲೇ ನಿಮಗೆ ರೋಹಿಣೀದೇವಿ, ಶಾಂತಿ ದೇವಿಯರು ತಾರಾಕಾಂತ ಗೀತಾಚಾರ್ಯರ ಅರ್ಧಾಂಗಿಯರಾಗಿರುವು ದರ ಮತ್ತು ಸತೀಮಣಿಯು ಇವರ ಸಖ್ಯವನ್ನು ಹೊಂದಿರುವವರ ತತ್ವ ವನ್ನೂ ನೀವು ತಿಳಿಯುವಿರಲ್ಲದೆ, ಈ ಶಾಂತಿನಿಕೇತನದ ಗುರುಪ್ರಕೃತಿ -ಶಿಷ್ಯ ರವರೆಗೆ - ಎಲ್ಲರನ್ನೂ ಸೇವಿಸುತ್ತಿರುವ ನನ್ನನ್ನೇ ದಾಸಾನುದಾಸನಾದ ಭಕ್ತಿಯೆಂದೂ ತಿಳಿಯಬಲ್ಲಿರಿ. ಮತ್ತೇನುಹೇಳಲಿ, ಪ್ರಿಯರೇ ! ನನ್ನ ಈ ವಯಸ್ಸಿನಲ್ಲಿ ನಾನು ಸುತ್ತದೆ, ನೋಡದೆ, ವಿಚಾರಿಸದೆ ಬಿಟ್ಟಿರುವ ಸ್ಥಳವು ಬಹುಶಃ ನಮ್ಮ ಆದ್ಯಾವರ್ತದಲ್ಲಿರಲಾರದು. ಆದರೆ, ಅಲ್ಲೆಲ್ಲಿ ಯೂ ನನ್ನ ಮನಸ್ಕ ಪ್ತಿಯಾಗುವ ಶಾಂತಿಸುಧಾರಸವು ನನಗೆ ಲಭಿಸ ಲಿಲ್ಲವಾದುದರಿಂದ ನಾನಿಲ್ಲಿಗೆ ಬಂದು ನೆಲಸಿದೆನು. ಇಲ್ಲಿ ನನಗೆ ಯಥೇ ಷ್ಟವಾದ ಶಾಂತಿರಸವು ಲಭಿಸುತ್ತಿರುವುದು. ಈ ನನ್ನ ಬ್ರಹ್ಮಾನಂದ ದಲ್ಲಿ ನೀವೂ ಭಾಗಿಗಳಾಗಬೇಕಾಗಿದ್ದರೆ, ಎಲ್ಲಿ?ನಮ್ಮ ಪ್ರಿಯ ಶಾಂತಿನಿಕೇ ತನ ಶಿಷ್ಯರೇ ! ಭಗವತೀ ನಾಗೇವಿಯನ್ನು ಸಾಕ್ಷಿಯಾಗಿಟ್ಟು, ತ್ರಿಜಗ ತ್ಪಾವನನಾದ-ಪರಂಜ್ಯೋತಿಸ್ವರೂಪಿಯಾದ-ಕರ್ಮಸಾಕ್ಷಿಯನ್ನು ಸಾ