________________
ಪೈಗಂಬರ ಮಹಮ್ಮದನು ಆತನ ಜೀವನ ಚರಿತ್ರೆಯನ್ನೂ ಆತನು ಬೋಧಿಸಿದ ತತ್ವಗಳನ್ನ ಸಂಕ್ಷೇಪವಾಗಿ ತಿಳಿದುಕೊಳ್ಳುವುದು ಮನುಷ್ಯತ್ವದ ಮಂಗಳಾಕಾಂಕ್ಷಿ ಗಳಾದವರ ಅವಶ್ಯ ಕರ್ತವ್ಯವಾಗಿದೆ. ಏಕೆಂದರೆ, ಮನುಷ್ಯರೆಲ್ಲರೂ ಒಬ್ಬ ಭಗವಂತನಿಂದಲೇ ಸೃಷ್ಟಿ ಪಡೆದವರು. ಆದಕಾರಣ, ಭಗವಂತನು ಕಳುಹಿಸಿದ ಮತ ಸ್ನಾನಕರು ಯಾರೇ ಆಗಲಿ ಉದಾತ್ತ ತತ್ತ್ವಗಳನ್ನು ಬೋಧಿಸಿದಲ್ಲಿ, ಅವು ಸರ್ವಾದರಣೀಯವಾಗಿ ಪರಿಣಮಿಸಿ ಅನುಷ್ಠಾನಕ್ಕೆ ಬರಬೇಕಾದುದು ಯುಕ್ತವಾಗಿಯೇ ಇದೆ. ಮತ ಸ್ಥಾಪಕರೆಂದರೆ ಸಾಮಾನ್ಯ ವ್ಯಕ್ತಿಗಳಲ್ಲ: ಮನುಷ್ಯರು ಪ್ರಗತಿ ಮಾರ್ಗವನ್ನು ಬಿಟ್ಟು ತಮ್ಮ ಮನಸ್ಸಿಗೆ ತೋರಿದಂತೆ ಪ್ರವರ್ತಿಸ ಲಾರಂಭಿಸಿದಾಗ-ಮನುಷ್ಯರು ಭೋಗವೇ ಜೀವನದ ಸರ್ವಸ್ವವೆಂದು ನಂಬಿ ಕಲ್ಯಾಣಮಯನಾದ ಭಗವಂತನನ್ನು ಮರೆತು ಉಚ್ಚಂಬಲ ವೃತ್ತಿಗುಪಕ್ರಮಿಸಿದಾಗ ಅವರನ್ನು ತಿದ್ದಿ ಸನ್ಮಾರ್ಗಕ್ಕೆ ತಂದ ಭಕ್ತಾ ಗ್ರಣಿಗಳೇ ಮತ ಸ್ಥಾಪಕರೆನಿಸಿಕೊಳ್ಳುವರು. ಆದುದರಿಂದ, ಜಗ ತ್ಯಲ್ಯಾಣ ಸಾಧಕವಾದ ಉದಾತ್ತ ತತ್ವಗಳು ಯಾವುದೆಂದು ಮತ ದಲ್ಲಿಯೇ ಇದ್ದರೂ, ಅವು ಒಟ್ಟು ಮನುಷ್ಯತ್ವಕ್ಕೆ ಬೋಧಿಸಲ್ಪಟ್ಟವು ಗಳೆಂದು ಭಾವಿಸುವುದೇ ವಿವೇಕಿಗಳ ಲಕ್ಷಣ. ಮಹಮ್ಮದನು ಜನಿಸಿದುದು ಅರಬ್ಬಿ ದೇಶದಲ್ಲಿರುವ ಮಕ್ಕಾ ನಗರದಲ್ಲಿ. ಅವನು ಅವತರಿಸಿದಾಗ ಅರಬ್ಬಿ ದೇಶವು ಈಗಿನಂತಿರಲಿಲ್ಲ : ದೇಶವೆಲ್ಲ ಅಜ್ಞಾನಾಂಧಕಾರದಲ್ಲಿ ಮುಳುಗಿದ್ದಿ , ತೆಂದರೂ ಅತಿಶಯೋಕ್ತಿಯಾಗಲಾರದು, ಅದು ದೇಶದ ಸ್ಥಿತಿ ಅಷ್ಟು ಮಟ್ಟಿಗೆ ಹೀನ ಸ್ಥಿತಿಗೆ ಬಂದಿದ್ದಿತು. ಅಲ್ಲಲ್ಲಿ ಕೆಲವು ಮಂದಿ ಧರ್ಮಾತ್ಮರೂ ಇದ್ದರು. ಆದರೂ, ಒಟ್ಟಿನಲ್ಲಿ ನೋಡಿದರೆ ಅಧರ್ಮವೂ ಅಸತ್ಯವೂ ದುರಹಂಕಾರವೂ ಮದ್ಯಪಾನವೇ ಮುಂತಾದ ದುರ್ಗುಣಗಳೂ ಎಲ್ಲೆಲ್ಲಿಯ ತಾಂಡವವಾಡುತ್ತ, ಕಾಡುಕಿಚ್ಚಿನಂತೆ ವ್ಯಾಪಿಸಿ ದೇಶವನ್ನೆಲ್ಲ ದಹಿಸುತ್ತಿದ್ದುವು. ಜನರಲ್ಲಿ ಎಲ್ಲಿ ನೋಡಿದರೂ - ದ್ವೇಷ ವೈಷಮ್ಯಗಳೇ; ಎಲ್ಲಿ ನೋಡಿದರೂ ಕಕ್ಷಿ ಪ್ರತಿಕ ವಿಭಾಗಗಳೇ; ಎಲ್ಲಿ ನೋಡಿದರೂ ಅಂತಃಕಲಹಗಳೇ; ರಕ್ತ ಪಾತವಂತೂ ತಪ್ಪಿದ ದಿನವೇ ಅರಬಿ