ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಮೊದಲನೆಯ ಅಧ್ಯಾಯ ಮಹಮ್ಮದನ ಬಾಲ್ಯ ಚರಾಚರಾತ್ಮಕವಾದ ಈ ಪ್ರಪಂಚದ ಸೃಷ್ಟಿ ಸ್ಥಿತಿ ಲಯ ಕರ್ತ ನಾದ ಭಗವಂತನೊಬ್ಬಸಿರುವನೆಂಬುದು ಆಸ್ತಿಕರೆಲ್ಲರ ಅಚಲವಾದ ನಂಬಿಕೆ, ಭಗವಂತನು ಧರ್ಮ ಮೂರ್ತಿ ಶ್ರೀ ಕೃಷ್ಣ ಪರಮಾತ್ಮನು ಗೀತೆಯಲ್ಲಿ ಹೇಳಿರುವಂತೆ, 'ಮುದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಚಾಮ್ಯಹಂ ! ಎಂಬುದೇ ಆತನು ತಳೆದಿರುವ ಧರ್ಮ ದೀಕ್ಷೆ, ಧರ್ಮಕ್ಕೆ ನಾಶ ವಂಟಾಗಿ ಅಧರ್ಮವು ಪ್ರಬಲವಾದಾಗಲೆಲ್ಲ, ತಾನು ಅವತರಿಸುವುದಾಗಿ ಭಗವಂತನು ಮನುಷ್ಯತ್ವಕ್ಕೆ ವಾಗ್ದಾನ ಮಾಡಿದ್ದಾನೆ. ತದನುಗುಣ ವಾಗಿ) ಯಾವ ಕಾಲದಲ್ಲಿ, ಯಾವ ದೇಶದಲ್ಲಿ, ಅಜ್ಞಾನಾಂಧಕಾರವುಂಟಾಗಿ ಪಾಪಾಚರಣೆಯು ಪ್ರಬಲವಾದರೂ, ದೇವಾಂಶ ಸಂಭೂತರಾದ ಮಹಾ. ಪುರುಷರು ಆಯಾ ದೇಶ ಕಾಲಾನುಗುಣ್ಯವಾಗಿ ಅವತರಿಸಿ ಧರ್ಮ ಸಂಸ್ಥಾಪನೆ ಮಾಡುವರು: ಭಗವಂತನು ತಾನೇ ಅವತರಿಸಿ ಧರ್ಮವನ್ನು ಉದ್ದರಿಸುವನು; ಅಥವಾ, ತನ್ನ ಕಡೆಯವರು ಅವತರಿಸುವಂತೆ ಮಾಡಿ ಅವರಿಂದ ಧರ್ಮ ಸಂಸ್ಥಾಪನೆ ಮಾಡಿಸುವನು. ಹೀಗೆ ಅವತರಿಸುವ ಮಹಾ ಪುರುಷರು ದೇವಾಯತ್ತವಾಗಿ ತಮ್ಮಲ್ಲಿ ನೆಲಸಿರುವ ಜ್ಞಾನ ಪ್ರತಿಭೆಗಳ ಸಹಾಯದಿಂದಲೂ ತಾವು ನಡೆಯಿಸುವ ಧರ್ಮ ಬೋಧನೆ ಯಿಂದಲೂ ತಮ್ಮ ಪವಿತ್ರ ಜೀವನದ ಪ್ರತ್ಯಕ್ಷ ನಿದರ್ಶನದಿಂದಲೂ ತಮ್ಮ ಜನ್ಮ ಭೂಮಿಯನ್ನು ದೂರಿಸಿ, ಪ್ರಪಂಚಕ್ಕೆ ಆದರ್ಶ ಪ್ರಾ) ಯ ರಾಗಿ ಪರಿಣಮಿಸುವರು. ಮಹಮ್ಮದನೂ ಇಂತಹ ಮಹನೀಯರಲ್ಲೊಬ್ಬರು.