ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

COL ಪೈಗಂಬರ ಮಹಮ್ಮದನು. ನಿವಾಸಿಗಳು ಬಂದಿದ್ದನಷ್ಟೆ. ಆ ಸಮಯದಲ್ಲಿ ಆ ನಗರದ ಯಜ ತಾಯೆಫ್ ನಗರ ಮಾನನಾದ ಉರ್ವನೆಂಬವನು ಯುದ್ಧ ವಿದ್ಯೆಯನ್ನು ಕಲಿಯಲು ಪರಸ್ಥಳಕ್ಕೆ ಹೋಗಿದ್ದನು. ಮುತ್ತಿ ಗೆಯು ಮುಗಿದ ಒಂದು ವರ್ಷದ ಮೇಲೆ ಅವನು ತನ್ನ ಊರಿಗೆ ಹಿಂದಿರುಗಿ ಬಂದು ಅಲ್ಲಿ ನಡೆದ ವಿದ್ಯಮಾನಗಳನ್ನು ಕೇಳಿ ಸಂತೋಷ ಪಟ್ಟು ಮದೀನಾ ನಗರಕ್ಕೆ ಹೋದರು. ಮೊದಲಿಂದಲೂ ಮಹಮ್ಮದನ ಮೇಲೆ ಅವನಿಗಿದ್ದ ಪ್ರೀತಿ ಗೌರವಗಳು ಆಗ ಮತ್ತಷ್ಟು ಹೆಚ್ಚಿ, ಉರ್ವನು ಮಹಮ್ಮದನನ್ನು ಕಂಡು ಇಸ್ಲಾಂ ಮತವನ್ನವ. ಲಂಬಿಸಿ, ತನ್ನ ಊರಿನವರೂ ಈ ಮತವನ್ನವಲಂಬಿಸಲೆಂಬ ಆಸೆಯಿಂದ ಅವರಿಗೆ ವಿವೇಕ ಹೇಳುವುದಕ್ಕಾಗಿ ಅವಸರದಿಂದ ಹಿಂದಿರುಗಿದನು. ತನ್ನ ಊರಿನ ಜನರು ಹಳೆಯ ಮತವನ್ನು ಬಿಟ್ಟು ಇಸ್ಲಾಂ ಮತಕ್ಕೆ ಸೇರಬೇಕೆಂದು ಅವನು ಬೋಧಿಸಲಾರಂಭಿಸಿದೊಡನೆಯೇ ಆ ಊರಿನವ ರೆಲ್ಲರೂ ಅವನ ಮನೆಯ ಸುತ್ತಲೂ ಗುಂಪು ಸೇರಿ ಕಲ್ಲು, ಮಣ್ಣು, ಹೆಂಟೆ ಗಳಿಂದ ಅವನಿಗೆ ಪೂಜೆಮಾಡಲಾರಂಭಿಸಿದರು. ಅವರು ತನ್ನನ್ನು ಅಷ್ಟು ಹಿಂಸಿಸುತ್ತಿದ್ದರೂ ಕೇವಲ ಮತಾಭಿಮಾನದಿಂದ ಉರ್ವನು ಅದನ್ನೆಲ್ಲ ಸೈರಿಸಿಕೊಂಡು ಅವರಿಗೆ ಸಮಾಧಾನ ಹೇಳುತ್ತಲೇ ಇದ್ದನು. ಪಾಪಿಗಳಾದ ಆ ಪಾಷಂಡರ ಕೋಪವು ಅಲ್ಲಿಗೂ ಅಡಗದೆ ಹೋಯಿತು. ಉರ್ವನ ದೇಹವು ರಕ್ತಮಯವಾಗಿದ್ದುದನ್ನು ನೋಡಿಯೂ, ಅವರ ಕಲ್ಲೆದೆಯು ಕರಗಲಿಲ್ಲ. ಅವರು ಮರಳಿ ಕೊಟ್ಟ ಪೆಟ್ಟುಗಳಿಂದಲೇ ಉರ್ವನಿಗೆ ಮರಣವು ಸಂಭವಿಸಿತು. ಮಾತನಾಡಲು ತನಗೆ ಚೈತನ್ಯವು ಕಡಿಮೆಯಾಗುತ್ತ ಬಂದಾಗ ಆತನು ಹೇಳಿದ ಕೊನೆಯ ಸಂದೇಶವನ್ನು ಕೇಳಿ ಅವರಿಗೆ ಜ್ಞಾನೋದಯವಾಯಿತು : " ನನ್ನ ರಕ್ತವನ್ನು ಬಸಿದು ಸ್ವಾಮಿಯ ಸೇವೆಯನ್ನು ಮಾಡಿದ್ದೇನೆ ; ಆತನು ಸುಪ್ರೀತನಾದರೆ ಸಾಕು. ಹುಸೇನ್ ಕದನದಲ್ಲಿ ಮಡಿದ ಮಹಮ್ಮದೀಯ ಸೈನಿಕರ ಗೋರಿಗಳು ಇಲ್ಲಿಗೆ ಸಮೀಪವಾಗಿವೆ ; ಅವುಗಳ ಬಳಿಯಲ್ಲಿ ನನ್ನ ಶವ ವನ್ನೂ ಹೂಳಿ ನನ್ನ ನ್ನು ಧನ್ಯನನ್ನಾಗಿ ಮಾಡಿರಿ' ಎಂಬ ಕೊನೆಯ ಮಾತುಗಳನ್ನು ಕೇಳಿ ಅವರಲ್ಲಿ ಅನೇಕರು ಕಂಬನಿದುಂಬಿದರು ;