ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIT, ಅಭ್ಯುದಯ ದಶೆ ೧೦೭ ತಾವು ಮಾಡಿದ ಪಾಪ ಕೃತ್ಯಕ್ಕಾಗಿ ಅವರೆಲ್ಲರೂ ನಾಚಿ ತಲೆ ತಗ್ಗಿಸಿದರು. ಸ್ವಲ್ಪ ಕಾಲದಲ್ಲಿಯೇ ಅವರೆಲ್ಲರೂ ಮಹಮ್ಮದನಿಗೆ ಶರಣಾಗತರಾಗಿ ಇಸ್ಲಾಂ ಮತವನ್ನವಲಂಬಿಸಿದರು. * ತಾಮ್ ವಂಶೀಯರ ದೊರೆಯಾಗಿದ್ದ ಹಾತಿಮನ ಔದಾರ್ಯವು ಪ್ರಖ್ಯಾತವಾದುದು ; ಅನೇಕ ಕವಿಗಳು ಅದನ್ನು ಹೊಗಳಿದ್ದಾರೆ. ಹಾತಿಮನ ಕಾಲಾನಂತರ ಅವನ ಮಗನಾದ ಆಡಿಯು ತಾಯy ವಂಶೀಯರು ದೊರೆಯಾಗಲು, ಅವನ ಪುಜೆಗಳು ಇಸ್ಲಾ೦ ಮತಕ್ಕೆ ಇಸ್ಲಾಂ ಮತಕ್ಕೆ ವಿರೋಧವಾಗಿ ಕಾರ್ಯಭಾಗ ಮಾಡಲುಪಕ್ರಮಿ ಸೇರಿದುದು ಸಿದರು. ಮಹಮ್ಮದನು ಅವರನ್ನು ನಿಗ್ರಹಿಸು ವುದಕ್ಕಾಗಿ ಅಲೀಯೊಡನೆ ಸಣ್ಣದೊಂದು ಸೈನ್ಯವನ್ನು ಕಳುಹಿಸಿದನು. ಆಡಿಯು ಭೀತನಾಗಿ ಸಿರಿಯಾ ದೇಶಕ್ಕೆ ಓಡಿಹೋಗಲು, ಅಲೀಯು ಅವನ ಪ್ರಜೆಗಳ ಮೇಲೆ ಯುದ್ಧ ಮಾಡಿ, ಯುದ್ದದಲ್ಲಿ ಕೈಸೆರೆ ಸಿಕ್ಕಿದವರನ್ನು ಮದೀನಾ ನಗರಕ್ಕೆ ಕರೆತಂದನು. ಇವರಲ್ಲೊಬ್ಬಳಾದ ಆಡಿಯ ಸಹೋದರಿಯನ್ನು ವಿಶೇಷ ಮನ್ನಣೆಯಿಂದ ಅಲೀದು ಕರೆ ತರಲು, ಮಹಮ್ಮದನು ಆಕೆಯನ್ನು ಗೌರವದಿಂದ ಕಂಡು, ಊಟ ಉಡು ಗೊರೆಗಳಿಂದುಪಚರಿಸಿ, ಅನರ್ಥ್ಯವಾದ ಪಾರಿತೋಷಿಕಗಳನ್ನು ಕೊಟ್ಟು, ಆಕೆಯನ್ನೂ ಆಕೆಯೊಡನಿದ್ದವರನ್ನೂ ಬಿಡುಗಡೆ ಮಾಡಿ ಹಿಂದಕ್ಕೆ ಕಳುಹಿಸಿಕೊಟ್ಟನು. ಆಡಿಯು ಇದನ್ನೆಲ್ಲ ಕೇಳಿ, ಮಹಮ್ಮದನಲ್ಲಿ ಪೂಜ್ಯ ಬುದ್ದಿಯುಂಟಾಗಿ, ಶಿಷ್ಯವೃತ್ತಿಯನ್ನವಲಂಬಿಸಿ ಇಸ್ಲಾಂ ಮತಕ್ಕೆ ಸೇರಿದನು. ಅವನ ಕಡೆಯವರೂ ಸಹ ಯಥಾ ಕಾಲದಲ್ಲಿ ಇಸ್ಲಾಂ ಮತವನ್ನವಲಂಬಿಸಿದರು. ಮಹಮ್ಮದನ ಕಾಲದ ಪ್ರಸಿದ್ಧ ಕವಿಯಾದ ಕಾಬನೆಂಬವನು ಶತ್ರು ಸೈನ್ಯದಲ್ಲಿ ಸೇರಿಕೊಂಡು ಯೋಧರನ್ನು ತನ್ನ ಕವಿತೆಗಳಿಂದ ಹುರಿದುಂಬಿ ಸುತ್ತಿದ್ದುದನ್ನು ನಾವು ಹಿಂದೆಯೇ ಕೇಳಿರುವೆವಷ್ಟೆ. ಕಾಬನಿಗೆ. ಕಾಲ ಕ್ರಮದಲ್ಲಿ ಕಾಬನಿಗೂ ಮಹಮ್ಮದನಲ್ಲಿ ಭಕ್ತಿ ಹುಟ್ಟಿ, ಇಸ್ಲಾಂ ಮತಕ್ಕೆ ಸೇರಬೇಕೆಂಬ ಕುತೂಹಲ ವುಂಟಾಗಿ, ಅವನಿಗೆ ಅದರಲ್ಲಿ ಹಿಂದೆ ಎಷ್ಟು ದ್ವೇಷ ಬಹುಮಾನ