ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೮ ಪೈಗಂಬರ ಮಹಮ್ಮದನು ಎದ್ದಿತೋ, ಈಗ ಅಷ್ಟು ಪ್ರೀತಿಯ ಮಮತೆಯ ಹುಟ್ಟಿದುವು. ಒಂದು ದಿನ ಅವನು ವೇಷವನ್ನು ಮರೆಯಿಸಿಕೊಂಡು, ತನ್ನವರೊಡನೆ ಮಸೀದಿಯಲ್ಲಿದ್ದ ಮಹಮ್ಮದನ ಬಳಿಗೆ ಹೋಗಿ ಅವನನ್ನು ಕುರಿತು, “ಸ್ವಾಮಿ ! ಕಾಬನು ತಮ್ಮಲ್ಲಿಗೆ ಬಂದು ಶರಣಾಗತನಾದರೆ ಅಪರಾಧಿ ಯಾದ ಅವನನ್ನು ಕ್ಷಮಿಸಿ, ಇಸ್ಲಾಂ ಮತಕ್ಕೆ ಸೇರಿಸಿಕೊಳ್ಳುವಿರಾ?” ನಾನು ಅವನನ್ನು ಕರೆತರಲೆ ? ” ಎಂದು ಕೇಳಿದನು. ಮಹಮ್ಮದನು ನಸು ನಕ್ಕು, 'ಕ್ಷಮೆಯನ್ನು ಬೇಡಿದ ಮೇಲೆ ಅಪರಾಧವೆಲ್ಲಿ ಉಳಿಯು ಇದೆ? ಅವಶ್ಯವಾಗಿ ಅವನನ್ನು ಕರೆದುಕೊಂಡು ಬಾ ಎನ್ನಲು ಕಾಬನು, “ನಾನೇ ಅವನು' ಎಂದು ಉತ್ತರ ಕೊಟ್ಟನು, ಮಹಮ್ಮದನ ಶಿಷ್ಯ. ರಲ್ಲಿ ಕೆಲವರು ಅವನ ಹಿಂದಣ ಅಪರಾಧಗಳಿಗಾಗಿ ಅವನನ್ನು ಶಿಕ್ಷಿಸ ಬೇಕೆಂದು ಸಲಹೆ ಕೊಟ್ಟರೂ ಮಹಮ್ಮದನು ಅದಕ್ಕೆ ಕಿವಿಗೊಡದೆ, (ಅವನಿಗೆ ಕ್ಷಮೆಯು ವಾಗ್ದಾನವಾಗಿದೆ ಎಂದನು. ಕಾಬನು ಮಹ. ಮೃದನ ಅನುಮತಿಯನ್ನು ಪಡೆದು ಅರಬ್ಬಿ ಭಾಷೆಯಲ್ಲಿ ಒಂದು ಆಶು ಕವಿತೆಯನ್ನು ರಚಿಸಿ ಹಾಡಿದನು : ಮಹಮ್ಮದನು ಅಜ್ಞಾನ ವೃಕ್ಷಕ್ಕೆ ಅಸಿಪ್ರಾಯನೆಂದೂ, ಭಗವಂತನ ದಯೆಯಿಂದ ಅರಬ್ಬಿ ದೇಶದಲ್ಲಿ ಜನ್ಮ ಗ್ರಹಣ ಮಾಡಿದ ಜ್ಞಾನಜ್ಯೋತಿ ಸ್ವರೂಪನೆಂದೂ, ಆ ಕವಿತೆಯಲ್ಲಿ ಕೊಂಡಾಡಿದ್ದನು. ಮಹಮ್ಮದನು ಕಾಬನೆ ಕವಿತಾ ಸಾಮರ್ಥ್ಯಕ್ಕೆ ಮೆಚ್ಚಿ ಅನರ್ಥ್ಯವಾದ ಕಿಂಕಾಬಿನ ಉಡಿಗೆಯನ್ನು ಅವನಿಗೆ ಬಹುಮಾನ ವಾಗಿ ಕೊಟ್ಟನು. ಅದು ಈಗಲೂ ಕಲೀಫರ ವಶದಲ್ಲಿದೆಯಂತೆ. ಕವಿತಾ ಮಾಧುರ್ಯಕ್ಕೂ ವಾಗೋರಣೆಗೂ ಕಾಬನ ಆ ಕವಿತೆಯು ಇಂದಿಗೂ ಪ್ರಸಿದ್ದವಾಗಿದೆಯಂತೆ. ಕಾಬನಂತಹ ಶಿಷ್ಯನನ್ನು ಪಡೆದ ಮಹ ಮೃದನೂ ಧನ್ಯನು, ಮಹಮ್ಮದನಂತಹ ಗುರುವನ್ನು ಪಡೆದ ಕಾಬನೂ, ಧನ್ಯನು. ಆ ಬಳಿಕ ನಾನಾ ಪ್ರದೇಶಗಳಿಂದಲೂ ತಂಡೋಪತಂಡವಾಗಿ ಅರಸರ ರಾಯಭಾರಿಗಳೂ ಪ್ರಜೆಗಳ ಪ್ರತಿನಿಧಿಗಳೂ ಮಹಮ್ಮದನಲ್ಲಿಗೆ ಬರಲಾರಂಭಿಸಿದರು. ಮಕ್ಕಾ ನಗರವು ಮಹ * ಮೃದನ ಸ್ವಾಧೀನವಾದ ಎರಡು ವರುಷಗಳಲ್ಲಿಯೇ