ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮ ದನ ರೂಪವೂ ಗುಣಗಳೂ ವೇನಾದರೂ ಉಳಿದಿದ್ದರೆ, ಅದನ್ನು ಸತ್ಪಾತುನಾದ ಧಾರ್ಮಿಕ ಸ್ವಭಾವ ಯಾವನಾದರೂ ದರಿದ್ರನಿಗೆ ದಾನಮಾಡಿ ಬಂದಲ್ಲದೆ ಸುಮ್ಮನಿರುತ್ತಿರಲಿಲ್ಲ. ತನಗೆ ದೊರೆತ ಹಣದಲ್ಲಿ ತನ್ನ ಜೀವನಕ್ಕೆ ಅತ್ಯವಶ್ಯವಾಗಿ ಬೇಕಾದಷ್ಟನ್ನು ಮಾತ್ರ ಉಪಯೋಗಿಸಿ ಕೊಂಡು, ಉಳಿದುದನ್ನು ಭಗವತ್ಯರ್ಥವಾಗಿ ದೀನಾನಾಥರಿಗೆ ಇನಿಯೋಗಿಸುತ್ತಿದ್ದನು. ತನಗೆ ವಿರಾಮವಿದ್ದಾಗಲೆಲ್ಲ ಭಗವಂತನ ಧ್ಯಾನ ದಲ್ಲಿ ಮಗ್ನನಾಗಿರುತ್ತ, ತಾನು ಈ ಪುಪಂಚದಲ್ಲಿರುವುದು, ಪ್ರಯಾಣ ಹೊರಟವನು ಮಾರ್ಗ ಮಧ್ಯದಲ್ಲಿ ಸ್ವಲ್ಪ ಕಾಲ ಯಾವುದಾದರೂ ಒಂದು ಮರದ ಕೆಳಗೆ ಕುಳಿತಿದ್ದ ಹಾಗೆಂದು ಆಗಾಗ ಹೇಳುತ್ತಿದ್ದನು. ಈ ಭಾವ ನೆಯು ಅವನ ಮನಸ್ಸಿನಲ್ಲಿ ನಿಶ್ಚಲವಾಗಿದ್ದುದರಿಂದಲೇ ಅವನು ಕ್ಷಣ ಭಂಗುರವಾದ ಐಹಿಕ ಜೀವನದ ನಿಜ ಸ್ವಭಾವವನ್ನರಿತು, ಏನಯ ಶೀಲ ನಾದ ಧರ್ಮಾತ್ಮನೆನಿಸಿ ಕೃತಾರ್ಥನಾದನು. ಮಹಮ್ಮದನು ಸರಳ ಜೀವಿಯಾದ ಸಾಧು ; ದರಿದ್ರನಾಗಿದ್ಯಾಗ ಹೇಗೆ ವಿನೀತ ಭಾವದಿಂದ ವರ್ತಿಸುತ್ತಿದ್ದನೋ, ಪ್ರಭು ಪದವಿಯನ್ನು ಪಡೆದ ಮೇಲೂ ಅದೇ ರೀತಿಯಲ್ಲಿ ವರ್ತಿಸುತ್ತಿದ್ದನು. ಸರಳ ಜೀವನ ಐಹಿಕ ಜೀವನದ ಅಟ್ಟಹಾಸದ ಕಡೆಗೆ ಅವನ ಬುದ್ದಿಯು ಓಡುತ್ತಲೇ ಇರಲಿಲ್ಲ ; ಹಾಗಿದ್ದಲ್ಲಿ, ಅರಬ್ಬಿ ದೇಶದ ರಾಜನೆಂದು ಮೆರೆದು ರಾಜ ಠೀವಿಯಿಂದಲೇ ಇರು ತಿದ್ದನು. ಮಹಮ್ಮದನು ಆ ರೀತಿ ಮಾಡಲಿಲ್ಲ ; ನೂರಾರು ಮಂದಿ ದಾಸ ದಾಸಿಯರಿಂದ ಓಲೈಸಿಕೊಳ್ಳುವಂತಹ ಪದವಿಯು ತನಗಿದ್ರೂ, ಸಾಮಾನ್ಯನಂತೆ ತನ್ನ ಕೆಲಸ ಕಾರ್ಯಗಳನ್ನು ತಾನೇ ಮಾಡಿಕೊಳ್ಳು, ತಿದ್ದನು ; ಕಿಂಕಾಜಿನ ವಸ್ತ್ರಗಳನ್ನು ತೊಡುವ ಐಶ್ವರ್ಯವಿದ್ದೂ ಸಾಮಾನ್ಯರಂತೆ ಉಡುಪನ್ನು ಧರಿಸುತ್ತಿದ್ದನು ; ಅಷ್ಟೇ ಅಲ್ಲ, ಬಟ್ಟೆಗಳು • ಹರಿದುಹೋದರೆ ತಾನೇ ಅವುಗಳನ್ನು ಹೊಲಿದುಕೊಳ್ಳು ತಿದ್ದನು; ಜೋಡು ಕಿತ್ತುಹೋದರೆ ತಾನೇ ಅದನ್ನು ಸರಿಮಾಡಿ ಕೊಳ್ಳುತ್ತಿದ್ದನು ; ಪ್ರಾಸಾದಗಳಲ್ಲಿ ವಾಸಮಾಡಬಹುದಾದಷ್ಟು ಭಾಗ್ಯವನ್ನು ಭಗವಂತನು ಕರುಣಿಸಿದ್ದರೂ, ಬಡವನಂತೆ ಒಂದು