________________
೨ ಪೈಗಂಬರ ಮಹಮ್ಮದನು ಕುಟೀರದಲ್ಲಿ ವಾಸಮಾಡುತ್ತಿದ್ದನು ; ಭಿಕ್ಷುಕರು ಬಾಗಿಲಿಗೆ ಬಂದರೆ ತಾನೇ ಅವರಿಗೆ ಆದರದಿಂದ ಭಿಕ್ಷವನ್ನು ನೀಡುತ್ತಿದ್ದನು ; ತನ್ನ ಕೋಣೆ ಯನ್ನು ತಾನೇ ಗುಡಿಸಿಕೊಂಡು, ತನ್ನ ಒಂಟೆಯ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳುತ್ತಿದ್ದನು ; ಹಂಸ ತೂಲಿಕಾ ತಲ್ಪದಲ್ಲಿ ಪವಡಿಸುವ ಅನುಕೂಲವು ತನಗಿದ್ರೂ ಕಡು ಬಡವನಂತೆ ಹಗ್ಗ ಬಿಗಿದ ಮರದ ಮಂಚದ ಮೇಲೆಯೋ, ಕೆಲವು ವೇಳೆ ಬರಿಯ ನೆಲದ ಮೇಲೆ ಮಲಗ ತಿದ್ದನು. ಅವನು ಕೂಲಿಯಾಳುಗಳೊಡನೆ ಸೇರಿ ಮಸೀದಿಯ ಗೋಡೆ ಯನ್ನು ಕಟ್ಟಿದುದನ್ನೂ ಕೋಟೆಯ ಕಂದಕವನ್ನು ಅಗೆದುದನ್ನೂ ಹಿಂದೆಯೇ ತಿಳಿಸಿದ್ದೇವೆ. ತನಗೆ ಬೇಕಾದ ಸಾಮಾನುಗಳನ್ನು ಅಂಗಡಿ ಯಿಂದ ತಾನೇ ತಂದುಕೊಳ್ಳುತ್ತಿದ್ದುದಲ್ಲದೆ, ನೆರೆ ಹೊರೆಯವರಿಗೆ ಕೂಡ ತಂದುಕೊಟ್ಟು ಸಹಾಯಮಾಡುತ್ತಿದ್ದನಂತೆ. ಒಮ್ಮೆ ಅವನ ಪತ್ನಿ ಯರೂ ಪುತ್ರಿಯ ತಮ್ಮ ಠೀವಿಗೆ ತಕ್ಕಂತೆ ಇರಬೇಕೆಂದು ಸೂಚಿಸಿ ದುದಕ್ಕೆ, ಭಗವಂತನ ಸೇವಕರಾಗಿ ಕೆಲಸ ಮಾಡುವವರು ಅಂತಹ ಯೋಚನೆಯನ್ನೇ ಮಾಡಬಾರದೆಂದು ಉತ್ತರ ಹೇಳಿದನಂತೆ. ಮತ ಸ್ಯಾಪಕನಾಗಿಯೂ ಪುಳುವಾಗಿಯ ಸಮಸ್ತ ಸೌಕರ್ಯಗಳನ್ನೂ ಘನತೆ ಗೌರವಗಳನ್ನೂ ಪಡೆದಿದ್ದರೂ ಯಾವ ಆನುಕೂಲ್ಯಗಳೂ ಇಲ್ಲದ ಸಾಮಾನ್ಯನಂತೆ ಅವನು ಜೀವನ ಮಾಡುತ್ತಿದ್ದನು. ನಸಿರುದ್ದೀನ್ ಚಕ್ರವರ್ತಿಯು ತಾನು ಡಿಲೀಶ್ವರನಾಗಿದ್ದೂ ಪ್ರಜೆಗಳ ಹಣವನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಳಲು ಇಷ್ಟಪಡದೆ ಖುರಾನಿನ ಪ್ರತಿಗಳನ್ನು ಬರೆದು ಮಾರಿ ಬಡ ಭಿಕಾರಿಯಂತೆ ಜೀವನ ಮಾಡುತ್ತಿರಲಿಲ್ಲವೆ? ಮಹಮ್ಮದನ ಆದರ್ಶ ಜೀವನವನ್ನೇ ಅನುಕರಿಸಿ ಐಹಿಕ ಭೋಗದ ತುಚ್ಛ ಸ್ವಭಾವವನ್ನರಿತು ಆ ದೊರೆಯು ಆ ರೀತಿ ಮಾಡಿದ್ದರೂ ಮಾಡಿರ ಬಹುದು. - ಮಹಮ್ಮದನ ಮನಸ್ಸಿನಲ್ಲಿ ಧನಿಕರು ದರಿದರು ಎಂಬ ಭೇದವೇ ಇರಲಿಲ್ಲ; ಸರಳ ಜೀವಿಯಾದ ಆ ಮಹಾನುಭಾವನು ಮನುಷ್ಯನ ಭೇದ ರಾಹಿತ್ಯ ಯೋಗ್ಯತೆಗೆ ಅವನ ಸಂಪತ್ತು ಎಂದಿಗೂ ಪ್ರಧಾನವಲ್ಲ ವೆಂಬುದನ್ನರಿತು, ಅದನ್ನು ಅಕ್ಷರಶಃ ಸತಿಪಾಲಿಸು