________________
೧೧೮ ಪೈಗಂಬರ ಮಹಮ್ಮದನು ಮಹಮ್ಮದನು ಇನ್ನೂ ಪ್ರಬಲನಾಗಿರಲಿಲ್ಲ ; ಇಸ್ಲಾಂ ಮತವು ಇನ್ನೂ ಶೈಶವಾವಸ್ಥೆಯಲ್ಲಿದ್ದಿತು. ಆದರೂ, ಮಹಮ್ಮದನು ವಿವಾದವನ್ನು ಕೂಲಂಕಷವಾಗಿ ವಿಚಾರಣೆ ಮಾಡಿ, ಯೆಹೂದ್ಯನ ಕಡೆಗೆ ನ್ಯಾಯವಿದ್ದು ದರಿಂದ, ಅವನಿಗೆ ಅನುಕೂಲವಾಗಿಯೇ ತೀರ್ಪು ಹೇಳಿದನು. ಈ ತೀರ್ಮಾನ ದಿಂದ, ಮಹಮ್ಮದನ ಕೆಲವು ಅನುಯಾಯಿಗಳು ಕರಾ ಅವನ ಪಕ್ಷವನ್ನು ಬಿಟ್ಟುಬಿಡಬಹುದಾದ ಸಂಭವವಿದ್ದರೂ ಮಹಮ್ಮದನು ಲೇಶವೂ ಅಳುಕದೆ ನ್ಯಾಯವನ್ನೇ ಹಿಡಿದನು. ಮಹಮ್ಮದನ ಪ್ರಿಯ ಪುತ್ರಿಯಾದ ಫತೀಮಳು ಒಮ್ಮೆ ಆತನನ್ನು ಕುರಿತು, “ನಾನು ನಿಮ್ಮ ಮಗಳಾಗಿ ಹುಟ್ಟಿ ನಿಮ್ಮ ಜೊತೆಯಲ್ಲಿರುವುದರಿಂದ ನನಗೆ ಸಮ್ಮತಿಯಾಗು ವುದಿಲ್ಲವೆ ? ಎಂದು ಕೇಳಿದಳಂತೆ. ಅದಕ್ಕೆ ಮಹಮ್ಮದನು, " ಇಲ್ಲ, ತಾಯಿ ! ನಿನಗೆ ಆ ಕಾರಣದಿಂದ ಮಾತ್ರವೇ ಸದ್ದತಿಯುಂಟಾಗದು. ಭಗವಂತನು ಬಾಂಧವ್ಯವನ್ನು ನೋಡಿ ಸದ್ದತಿಯನ್ನು ಕೊಡುವುದಿಲ್ಲ ; ಪುಣ್ಯ ಕರ್ಮಗಳಿಗನುಗುಣವಾದ ಫಲವನ್ನೇ ಕರುಣಿಸುವನು' ಎಂದು ಉತ್ತರ ಹೇಳಿದನಂತೆ. ಖುರಾನಿನಲ್ಲಿ ಹೇಳಿರುವಂತೆ, “ ನಿನ್ನ ದ್ವೇಷಿ ಗಳೆಂಬ ಕಾರಣದಿಂದ ಜನರಿಗೆ ಅನ್ಯಾಯ ಮಾಡಬೇಡ ; ಅಧರ್ಮಕ್ಕೆ ಅವಕಾಶವಿಲ್ಲದಂತೆ ಅವರಲ್ಲಿ ವರ್ತಿಸು ; ಅದೇ ಪುಣ್ಯದ ದಾರಿ' ಎಂಬ ಉಪದೇಶವನ್ನು ಅವನು ಅಕ್ಷರಶಃ ಆಚರಣೆಗೆ ತರುತ್ತಿದ್ದನು. ಅವನು ಮರಣ ಶಯ್ಕೆಯಲ್ಲಿದ್ದಾಗ ಕೂಡ, 'ನಾನು ಯಾರಿಗಾದರೂ ಅನ್ಯಾಯ ಮಾಡಿದ್ದರೆ ಅವರು ಅವಶ್ಯವಾಗಿ ನನ್ನ ಮೇಲೆ ದ್ವೇಷವನ್ನು ತೀರಿಸಿ ಕೊಳ್ಳಬಹುದು' ಎಂದು ಹೇಳುತ್ತಲೇ ಇದ್ದನಂತೆ. ನ್ಯಾಯ ಮೂರ್ತಿ ಯಾಗಿ ಪರಿಶುದ್ಧಾತ್ಮನಾಗಿದ್ದ ಮಹಮ್ಮದನು ಯಾರಿಗೂ ಅನ್ಯಾಯ ಮಾಡಿರಲೂ ಇಲ್ಲ, ಯಾರೊಬ್ಬರೂ ಆತನ ಮೇಲೆ ದ್ವೇಷವನ್ನು ತೀರಿಸಿ ಕೊಳ್ಳುವ ಸಂದರ್ಭವೂ ಒದಗಲಿಲ್ಲ. ಕಟ್ಟುನಿಟ್ಟಾಗಿ ನ್ಯಾಯ ಪರಿಪಾಲನೆಮಾಡುವ ಗುಣದ ಜೊತೆಗೆ ಮಹಮ್ಮದನಲ್ಲಿ ಭೂತ ದಯೆಯ ಮೂರ್ತಿಮತ್ತಾಗಿ ನೆಲೆಗೊಂಡಿದ್ದುದ ರಿಂದ ಕನಕ ಕಮಲಕ್ಕೆ ಪರಿಮಳಗೂಡಿದಂತೆ ಶೋಭಿ ಭೂತ ದಯೆ ಸುತ್ತಿದ್ದಿತು. ಮೂಕ ಪ್ರಾಣಿಗಳಿಗೂ ದಯೆಯನ್ನು