ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮ ದನ ರೂಪವೂ ಗುಣಗಳೂ ೧೧೯ ತೋರಿಸುವುದು ಅತ್ಯಾವಶ್ಯಕವೆಂಬ ನಂಬಿಕೆಯಿಂದ ಮಹಮ್ಮದನು. ಪ್ರಾಣಿ ಮಾತ್ರದಲ್ಲಿ ಅನುಕಂಪವುಳ್ಳವನಾಗಿದ್ದನು. ಆದರೆ ಅವನು ಆಗಾಗ ಮಾಂಸಾಹಾರ ಮಾಡುತ್ತಿದ್ದುದನ್ನೆತ್ತಿಕೊಂಡು, ಅಹಿಂಸಾ. ತತ್ತ್ವದಲ್ಲಿ ಅವನನ್ನು ಬುದ್ಧನೊಡನೆ ಹೋಲಿಸುವುದು ನ್ಯಾಯವಲ್ಲ. ಹಾಗೆಯೇ, ಭಕ್ತಿಮಾರ್ಗ ವಿಚಾರದಲ್ಲಿ ಬುದ್ಧನನ್ನು ಮಹಮ್ಮದು ನೊಡನೆ ಹೋಲಿಸುವುದೂ ನ್ಯಾಯವಲ್ಲ. ಲೋ ಕ ವ೦ದಿತರಾದ ಅವರಿಬ್ಬರನ್ನೂ ಹಾಗೆ ಪರಸ್ಪರ ಹೋಲಿಸಬೇಕಾದ ಆವಶ್ಯಕತೆಯ ಇಲ್ಲ. ಒಮ್ಮೆ, ಒಬ್ಬ ಮನುಷ್ಯನು ಬಾಯಾರಿಕೆಯಿಂದ ಬಳಲು ತಿದ್ದ ಯಾವುದೋ ಒಂದು ನಾಯಿಗಾಗಿ ಬಾವಿಯಿಂದ ನೀರನ್ನು ಸೇದಿ ಇಟ್ಟನಂತೆ. ಭಗವಂತನ ಸೃಷ್ಟಿಗೆ ಸೇರಿದ್ದ ಆ ಮಕ ಪ್ರಾಣಿಗೆ ಕರುಣೆಯನ್ನು ತೋರಿಸಿದುದಕ್ಕಾಗಿ ಆತನಿಗೆ ಸ್ವರ್ಗ ಲೋಕದಲ್ಲಿ ಮನ್ನಣೆ. ದೊರೆಯುವುದೆಂದು ಮಹಮ್ಮದನು ತಿಳಿಸಿದನಂತೆ. ಮತ್ತೊಂದು ಸಂದರ್ಭದಲ್ಲಿ, ಒಬ್ಬ ಹೆಂಗುಸು ರೋಗದಿಂದ ನರಳುತ್ತಿದ್ದು ಸತ್ತು. ಹೋದಳಂತೆ. ಅವಳು ಜೀವಂತಳಾಗಿದ್ದಾಗ ಒಂದು ಬೆಕ್ಕನ್ನು ಕಟ್ಟಿ, ಹಾಕಿ ಅದು ಹಸಿವಿನಿಂದ ಸೊಕ್ಕುವಂತೆ ಮಾಡಿದ್ದಳಂತೆ. ಈ ಪಾಪ ಕರ್ಮ ಕ್ಕಾಗಿ ಅವಳಿಗೆ ಪರ ಲೋಕದಲ್ಲಿ ಶಿಕ್ಷೆಯು ಸಿದ್ದವೆಂದು ಮಹಮ್ಮದನು ಸಾರಿ ಹೇಳಿದನಂತೆ. ದೀನರಾದ ವಿಧವೆಯರಲ್ಲಿಯ, ಪೋಷಕರಿಲ್ಲದ, ಮಕ್ಕಳಲ್ಲಿಯೂ, ಮಹಮ್ಮದನಿಗೆ ವಿಶೇಷ ಸಹಾನುಭೂತಿಯಿದ್ದಿತು.. ಅಂಥವರಿಗೆ ಅವನು ಅವಶ್ಯವಾಗಿ ಸಹಾಯ ಮಾಡುತ್ತಿದ್ದನು. ಖುರಾನಿ. ನಲ್ಲಿ ಅನರ್ಥ್ಯವಾದ ಈ ವಾಕ್ಯವಿದೆ:- ಮತ ಬಾಹಿರನು ಯಾವನೆಂಬು. ದನ್ನು ಬಲ್ಲೆಯಾ ? ಅನಾಥರಾದ ಬಾಲಕರ ವಿಷಯದಲ್ಲಿ ಯಾವನು. ಕೌರ್ಯವನ್ನು ತೋರಿಸುವನೋ, ದೀನರಿಗೆ ತಾನೂ ಸಹಾಯ. ಮಾಡದೆ, ಸಹಾಯ ಮಾಡುವಂತೆ ಇತರರನ್ನೂ ಪ್ರೇರಿಸದೆ ಯಾವಸು ಇರುವನೋ ಅವನೇ ಮತ ಬಾಹಿರನು. ಮಹಮ್ಮದನು ತನಗೆ ಎಂತಹ ಸೌರ ವಿಪತ್ತು ಬಂದೊದಗಿದರೂ ತಾಳ್ಮೆಯಿಂದ ಸಹಿಸುತ್ತಿದ್ದನು ಆದರೆ, ಇತರರಿಗೆ ಅಲ್ಪ ಸ್ವಲ್ಪ ತೊಂದರೆಯಾದರೂ, ಅನುತಾನ ದಿಂದ ಕುಂದಿಹೋಗುತ್ತಿದ್ದನು. ಯಾರಾದರೂ ಮೃತಪಟ್ಟರೆ, ಮಹ