ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಅಹುದು, ಆಸಮುದ್ರ ಪರ್ಯಂತವಾಗಿ ದಾನ ಮಾಡಿ, ಅದರ ಫಲವಾಗಿ ಬಡತನವನ್ನನುಭವಿಸಿದ ದರಿದ) ಚಾರುದತ್ತನನ್ನು ಕೊಂಡಾಡದವರಾರು? ಯಜ್ಞ ಕಾಲದಲ್ಲಿ ಸಮಸ್ತ ಧನ ಕನಕ ವಸ್ತು, ವಾಹನಾದಿಗಳನ್ನೂ ದಾನ ಮಾಡಿ, ಸುವರ್ಣಾಭಾವದಿಂದ ಮೃತ್ಪಾತ್ರೆಗಳನ್ನು ಬಳಸುತ್ತಿದ್ದ ರಘು ಚಕ್ರವರ್ತಿಯನ್ನು ಸ್ಮರಿಸಿದ ದಿನವೇ ಸುದಿನವೆಂದು ಭಾವಿಸದೆ ಇರು ವವರಾರು? ಪ್ರಕೃತದಲ್ಲಿ, ವಂಶಾನುಗತವಾಗಿ ಬಂದ ಔದಾರ್ಯದ ದೆಸೆಯಿಂದ ಕ್ರಮ ಕ್ರಮವಾಗಿ ಸಿರಿಯು ಮರೆಯಾಗಿ, ಅಬ್ದುಲ್ಲಾನ ಕಾಲಕ್ಕೆ ಬಡತನವು ಬಂದೊದಗಿತು. ಗೀತಾಚಾರ್ಯರು ಹೇಳಿರುವಂತೆ, ಯಾರನ್ನು ಪರಮಾತ್ಮನು ಅನುಗ್ರಹಿಸಲಿಚ್ಛಿಸುವನೋ ಅವರ ದ್ರವ್ಯ ವನ್ನು ಮೊದಲು ನಾಶ ಮಾಡಿ ಅವರ ಧರ್ಮ ಶ್ರದ್ಧೆಯನ್ನು ಒರೆಹಿಡಿದು ನೋಡುವನು. ಭಗವಂತನು ತನ್ನ ಅಂಶದ ಮತ ಪುರುಷನಾದ ಮಹಮ್ಮದನೆಂಟ ಮುಕ್ತಾಫಲವನ್ನು ಕರುಣಿಸುವುದಕ್ಕೆ ಮೊದಲು ಅಬ್ದುಲ್ಲಾನ ಮನೆತನದವರ ಧರ್ಮಾಭಿಮಾನವನ್ನೂ ಪರೋಪಕಾರ ಬುದ್ದಿಯನ್ನೂ ಪರೀಕ್ಷಿಸಿ ನೋಡಿದನೆಂದು ಹೇಳಿದರೆ ತಪ್ಪಾದೀತೆ ? ಅಂತು, ಆರ್ತರ ಸಹಾಯ ಕೋಸುಗ, ಸಿರಿಯು ಸೂರೆಯಾದ ಮನೆತನ ದಲ್ಲಿ ಹುಟ್ಟಿಯ, ಅಬ್ದುಲ್ಲಾನು ಖಿನ್ನ ಮನಸ್ಕನಾಗದೆ ಸನ್ಮಾರ್ಗವೇ ಶರಣೆಂದು ನಂಬಿದ್ದನು. ಆವಿಾನಾ ಬೀಬಿಯ ಆತನಿಗೆ ತಕ್ಕ ಮಡದಿ ಯಾಗಿದ್ದಳು. ಆಕೆಯ ಗರ್ಭ ಸುಧಾಂಬುಧಿಯಲ್ಲಿ ಮಹಮ್ಮದನೆಂಬ ಪುತ್ರ ರತ್ನ ವು ಕ್ರಿಸ್ತ ಶಕ ೫೭೦ ನೆಯ ಸಂವತ್ಸರದ ಆಗಸ್ತು ತಿಂಗಳು ೨೯ನೆಯ ತಾರೀಖಿನ ದಿನ ಜನನ ಹೊಂದಿ ಸ್ವಗೃಹವನ್ನೂ ಸ್ವದೇಶವನ್ನೂ ಬೆಳಗಿತು. ಆದರೆ ಪುತ್ರೋತ್ಸವದ ಆನಂದವನ್ನು ಅನುಭವಿಸುವ ಸುಯೋಗವನ್ನು ಅಬ್ದುಲ್ಲಾನುಕೇಳಿಕೊಂಡು ಬಂದಿರಲಿಲ್ಲ. ಮಹಮ್ಮದನ ಜನನಕ್ಕೆ ಮುಂಚೆಯೇ ಆತನು ಪರಲೋಕ ಯಾತ್ರೆ ಮಾಡಿದ್ದನು. ಮಗನ ವೈಭವವನ್ನು ತಂದೆಯ ಅಂತರಾತ್ಮವು ಪರಲೋಕದಿಂದಲೇ ಮತ್ತಷ್ಟು ಚೆನ್ನಾಗಿ ಪರಿಶೀಲಿಸಿ ಆನಂದಿಸುವಂತೆ ಭಗವಂತನು ಅನುಗ್ರಹಿಸಿರ ಬಹುದೆ? ಅದು ದೂರದ ಆಸೆ, ಅರಿಯದ ಮಾತು ; ಅದರ ಹಂಬಲು ನಮಗೇಕೆ ? ಮಹಮ್ಮದನು ಹುಟ್ಟಿದಾಗ ಮಹಾ ಪುರುಷನ ಆಗಮನ