ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1. ಮಹಮ್ಮದನ ಬಾಲ್ಯ ವನ್ನು ಸೂಚಿಸುವ ಅದ್ಭುತವಾದ ಪ್ರಾಕೃತಿಕ ವೈಚಿತ್ತು, ವ್ಯಾಪಾರಗಳು ತಲೆದೋರಿದುವಂತೆ. ವಿಜ್ಞಾನ ಶರಣರಾದ ನವ ನಾಗರಿಕರಲ್ಲಿ ಕೆಲವರು ಇದನ್ನು ಒಪ್ಪದೆ ಇರಬಹುದು. ಆದರೂ, ( ವಿಜ್ಞಾನಾತೀತವಾದ ವಸ್ತುವೇ ಇಲ್ಲವೆ ?' ಎಂಬ ಪ್ರಶ್ನೆಯೇನೋ ನಮ್ಮ ಮನಸ್ಸಿನಿಂದ ಮರೆಯಾಗಲೊಲ್ಲದು. ಮಹಮ್ಮದನು ಜನಿಸುವ ಮೊದಲೇ ಅವನ ತಂದೆಯು ಮೃತ ನಾದನೆಂದು ಹೇಳಿದೆವಷ್ಟೆ. ಆಗ ಆತನಿಗೆ ಇನ್ನೂ ಇಪ್ಪತ್ತೈದು ವರುಷ ವಯಸ್ಸು. ಸುಕೃತೀ ಗತಾಯುಃ ಎಂಬುದು ಬಾಲ್ಯ ಅನೇಕ ಸಂದರ್ಭಗಳಲ್ಲಿ ನಿಜವಾಗುವುದು. ಆವಿಾನಾ ಬೀಜಿಗೆ ಎಷ್ಟು ಚಿಕ್ಕ ವಯ ಸ್ಸಿ ನಲ್ಲಿ ಎಂತಹ ವಿಪತ್ತು ಒದಗಿತು ! ಪಾಪ! ಪತಿಯ ಮರಣ ಕಾಲದಲ್ಲಿ ಆತನ ಬಳಿಯಲ್ಲಿರುವ ಭಾಗ್ಯವೂ ಆಕೆಗೆ ಲಭಿಸಲಿಲ್ಲ : ಯಾತ್ರಿ ನಗರಕ್ಕೆ ಪ್ರಯಾಣಮಾಡುತ್ತಿದ್ದು, ದಾರಿಯಲ್ಲಿ ಆತನು ಮೃತನಾದನು; ಗರ್ಭಿಣಿ ಯಾದ ಆಖಾನಾ ಬೀಬಿಯು ಆಗ ಊರಿನಲ್ಲಿದ್ದಳು. ವಿಧಿ ವಿಲಾಸಕ್ಕೆ ಎದುರು ನಿಲ್ಲುವವರಾರು ? - ಪತಿ ಪರಾಯಣೆಯಾಗಿದ್ದ ಆ ಸಾದ್ವಿ ಮಣಿಯು ವಿಧವೆಯಾದ ಬಳಿಕ ಹೆಚ್ಚು ಕಾಲ ಜೀವಿಸಿರಲಿಲ್ಲ. ತಂದೆಯನ್ನು ಕಂಡರಿಯದ ಹಸುಗೂಸಾದ ಮಹಮ್ಮದನಿಗೆ ಆರು ವರುಷಗಳು ತುಂಬುವ ವೇಳೆಗೆ ಮಾತೃ ವಿಯೋಗವೂ ಪ್ರಾಪ್ತವಾಯಿತು. ಮರಣವೆಂದರೇನೆಂಬುದೇ ಮನಸ್ಸಿಗೆ ಬೋಧೆಯಾಗಲೊಲ್ಲದ ಚಿಕ್ಕ ವಯಸ್ಸಿನಲ್ಲಿ ಆ ಹಸುಳೆಗೆ ತಾಯಿ ತಂದೆಗಳಿಬ್ಬರ ವಿಯೋಗವೂ ಸಂಭವಿಸಿತು. ತಬ್ಬಲಿಯಾದ ಈ ಮಗುವನ್ನು ಅದರ ತಾತನು ಅಕ್ಕರೆಯಿಂದ ಪೋಷಿಸುತ್ತಿದ್ದನು. ಚಂದ್ರಹಾಸನಿಗೆ ಧಾತ್ರಿಯು ಹೇಗೋ ಹಾಗೆಯೇ ಮಹಮ್ಮದನಿಗೆ ಅವನ ತಾತನೂ ಏಕಮಾತ್ನಾವಲಂಬನವಾದನು. ವಿಧಿಯು ಅದನ್ನೂ ನೋಡಿ ಸೈರಿಸಲಿಲ್ಲ : ಒಂಬತ್ತು ವರುಷಗಳು ತುಂಬುವ ವೇಳೆಗೆ ಮಹಮ್ಮದನು ತಾತನನ್ನೂ ಕಳೆದುಕೊಂಡನು. ವಿಯೋಗದ ಮೇಲೆ ವಿಯೋಗವು ಒದಗಿತು. ತಾತನು ಮೃತ್ಯು ಶಯ್ಕೆಯಲ್ಲಿ ಮಲಗಿರುವಾಗ