ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIV. ಪರ ಲೋಕ ಯಾತ್ರೆ ဂနဂါ

  • ಪ್ರಿಯ ಬಾಂಧವರಿರಾ! ಮಹಮ್ಮದೀಯರಾದ ನಾವೆಲ್ಲರೂ ಸಹೋದರರೆಂಬ ಭಾವನೆಯು ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಇರಲಿ ; ಧರ್ಮದ ಮುಂದೆ ನೀವೆಲ್ಲರೂ ಸಮಾನರು; ಎಲ್ಲರಿಗೂ ಸಮಾನವಾದ ಹಕ್ಕು ಬಾಧ್ಯತೆಗಳಿರುವುವು. ಆದಕಾರಣ, ನೀವು ಯಾರೊಬ್ಬರೂ ಇತರರ ಸ್ವತ್ತನ್ನು ಅಪಹರಿಸಲು ಬಯಸಬೇಡಿರಿ, ಇತರರ ಹಕ್ಕು ಬಾಧ್ಯತೆಗಳಿಗೆ ಲೋಪವನ್ನು ತರಬೇಡಿರಿ, ಪರ ಪೀಡನೆಯು ಮಹಾ. ಪಾಪಕರವು, ನೀವೆಲ್ಲರೂ ಒಬ್ಬನೇ ಭಗವಂತನನ್ನಾರಾಧಿಸುವ ಸಹೋ ದರರೆಂದು ನಂಬಿ, ಪಾಪ ವಿಮುಖರಾಗಿ ಪರೋಪಕಾರ ನಿರತರಾಗಿದ್ದು ಕೃತಾರ್ಥರಾಗಬೇಕೆಂಬುದೇ ನನ್ನ ಪ್ರಾರ್ಥನೆ.”

ಈ ಭಾಷಣವು ಮುಗಿದ ಕೂಡಲೆ .ಮಹಮ್ಮದನು, ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ, “ ಭಕ್ತವತ್ಸಲನಾದ ಓ ಭಗವಂತನೇ ! ನಾನು. ನಿನ್ನ ಸಂದೇಶವನ್ನು ಸಾರಿದಂತಾಯಿತೆ ? ಎಂದು ಆರ್ತ ಸ್ವರದಿಂದ ಕೂಗಿದನು. ತನ್ನ ಮುಂದೆ ನೆರೆದಿದ್ದ ಅಗಾಧವಾದ ಸಭೆಯನ್ನೂ ಅಸಂಖ್ಯಾತರಾಗಿ ಅಲ್ಲಿ ಸೇರಿದ್ದ ತನ್ನ ಶಿಷ್ಯರ ಶ್ರದ್ಧಾ ಭಕ್ತಿಗಳನ್ನೂ ನೋಡಿ, ಅನಿರ್ವಚನೀಯವಾದೊಂದು ವಿಧದ ಅಂತರಾವೇಶದಿಂದ ಕೂಡಿದವನಾಗಿ, ಮಹಮ್ಮದನು ಆರ್ತ ಸ್ವರದಲ್ಲಿ ಆ ಮಾತುಗಳನ್ನು ನುಡಿದನು. ಸಭಿಕರೆಲ್ಲರೂ ಆನಂದೋತ್ಸಾಹ ಪರವಶರಾಗಿ, “ ನಿಶ್ಚಯ ವಾಗಿಯೂ ಭಗವಂತನ ಸಂದೇಶವನ್ನು ಸಾರಿ ನಮ್ಮನ್ನು ಕೃತಾರ್ಥ ರನ್ನಾಗಿ ಮಾಡಿರುವೆ ಎಂದು ಹೇಳಿ ಜಯ ಘೋಷಮಾಡಿದರು. ಸಭಾ ಕಾರ್ಯವು ಅಲ್ಲಿಗೆ ಪೂರೈಸಿತು. ಮಹಮ್ಮದನು ಯಾತ್ರೆಯನ್ನು ಮುಗಿಸಿಕೊಂಡು ಯಥಾ ಕಾಲದಲ್ಲಿ ಮೆದೀನಾ ನಗರವನ್ನು ಸೇರಿದನು. ಮಹಮ್ಮದನ ಘನತೆಯನ್ನೂ, ಜನತೆಯಲ್ಲಿ ಅವನಿಗೆ ದೊರೆಯು ತಿದ್ದ ಪ್ರೀತಿ ಗೌರವಗಳನ್ನೂ ಕಂಡು ಅಸೂಯೆ ಪಡುವವರೂ, ಕೆಲವ ರಿದ್ದರು. ಅವರಲ್ಲಿ ಮೊಸ್ಕೆಲಿಮನೆಂಬ ಇಂದ್ರಜಾಲಿ ಅಸೂಯಾಪರನ ಕನೂ ಒಬ್ಬನು. ಅವನು ತನ್ನ ಕರ ಲಾಘವ ಔದ್ಧತ್ಯ ಪ್ರಭಾವದಿಂದ ಕೆಲವು ಚಮತ್ಕಾರಗಳನ್ನು ಮಾಡಿ ತೋರಿಸಿ ಜನರನ್ನು ಬೆರಗು ಮಾಡಿ, ಅವುಗಳೆಲ್ಲ