ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೨ ಪೈಗಂಬರ ಮಹಮ್ಮದನು ಮಹಾತ್ಮನಾದ ತನ್ನ ಪವಾಡಗಳೆಂದು ಬೋಧಿಸಿ, ಮಹಮ್ಮದನಂತೆಯೇ ತಾನೂ ಒಬ್ಬ ಮಹಾ ಪುರುಷನೆಂದು ಎಲ್ಲೆಲ್ಲಿಯೂ ಹೇಳಿಕೊಳ್ಳಲಾರಂಭಿ ಸಿದನು. ಕೊನೆಗೆ, ಔದ್ಧತ್ಯದ ಸೊಕ್ಕಿನಿಂದ ಅವನು ಮಹಮ್ಮದನಿಗೆ ಹೀಗೆಂದು ಒಂದು ಕಾಗದವನ್ನು ಬರೆದನು :- ಭಗವಂತನ ಪಕ್ಷದ ಮತ ಸ್ಥಾಪಕನಾದ ಮೊಸ್ಕೆಲಿಮನು ಭಗವಂತನ ಪಕ್ಷದ ಮತ ಸ್ಥಾಪಕ ನಾದ ಮಹಮ್ಮದನಿಗೆ ವಂದನೆಗಳನ್ನರ್ಪಿಸಿ ಬಿನ್ನವಿಸುವುದೇನೆಂದರೆ : ನಾನೂ ನೀನೂ ಇಬ್ಬರೂ ಪಾಲುಗಾರರು; ಅಧಿಕಾರದಲ್ಲಿ ನಾವಿಬ್ಬರೂ ಸಮ ಭಾಗಿಗಳು. ಆದುದರಿಂದ ಅದನ್ನು ನಾವಿಬ್ಬರೂ ಹಂಚಿಕೊಳ್ಳ ಬೇಕಾಗಿದೆ. ಭೂಭಾಗದಲ್ಲಿ ಅರ್ಧವು ನನ್ನದು, ಅರ್ಧವು ನಿನ್ನದು. ನಿನ್ನ ಅನುಯಾಯಿಗಳು ನ್ಯಾಯವಂತರಲ್ಲದ ಕಾರಣ, ನೀನು ಜೀವಂತ ನಾಗಿರುವಾಗಲೇ ಈ ಹಂಚಿಕೆಯು ನಡೆದುಹೋಗಬೇಕು. ಈ ಪತ್ರಿಕೆಗೆ ಮಹಮ್ಮದನು ಮುಂದೆ ಹೇಳುವ ತಕ್ಕ ಉತ್ತರವನ್ನೇ ಕಳುಹಿಸಿದನು: ದಯಾ ಮಯನಾದ ಭಗವಂತನ ಅನುಗುಹದಿಂದ ಮತ ಸ್ಥಾಪಕನಾಗಿ ರುವ ಮಹಮ್ಮದನು ವೇಷ ಧಾರಿಯಾದ ಮೊಸ್ಕೆಲಿಮನಿಗೆ ಮಾಡುವ ಬಿನ್ನಹವೇನೆಂದರೆ: ಸನ್ಮಾರ್ಗವನ್ನನುಸರಿಸಿ ವರ್ತಿಸುವವರು ಶಾಂತರಾಗಿ ಬಾಳುವರು. ಭೂಮಿಯು ಭಗವಂತನಿಗೆ ಸೇರಿದುದು. ತನ್ನ ಪ್ರೀತಿಗೆ ಪಾತ್ರರಾಗುವಂಥವರಿಗೆ ಭಗವಂತನು ವೈಭವವನ್ನು ಕರುಣಿಸಿ ಅಧಿಕಾರ ನನ್ನ ನುಗ್ರಹಿಸುವನು. ಅವನನ್ನು ಮರೆ ಹೊಕ್ಕು ಭಕ್ತಿಯಿಂದಿರುವ ಧರ್ಮಾತ್ಮರಿಗೆ ಮಾತ್ರವೇ ಮುಂದೆ ಶ್ರೇಯಸ್ಸುಂಟಾಗುವುದು. ಮಕ್ಕಾ ನಗರದಿಂದ ಬಂದ ಮೇಲೆ ಮಹಮ್ಮದನು ಪರ ಲೋಕ ಯಾತ್ರೆಗೆ ಸಿದ್ಧನಾಗಿ ಮರಣವನ್ನೇ ಎದುರುನೋಡುತ್ತಿದ್ದನು. ಆದರೂ, ಪ್ರತ್ಯಹವೂ ನಿಷ್ಠೆಯಿಂದ ತನ್ನ ಕರ್ತವ್ಯವನ್ನು ನೆರ ರೋಗದ ಬಾಧೆ ವೇರಿಸುತ್ತ, ತನ್ನ ಆಡಳಿತಕ್ಕೊಳಪಟ್ಟಿದ್ದ ಪ್ರಾಂತ - ಗಳಲ್ಲೆಲ್ಲ ಬಗೆ ಬಗೆಯ ಶಿಸ್ತುಗಳನ್ನು ಆಚರಣೆಗೆ ತಂದು ಒಮ್ಮುಖವಾದ ಅಧಿಕಾರವನ್ನು ಉತ್ತಮ ರೀತಿಯಲ್ಲಿ ನೆಲೆಗೊಳಿಸಿದನು. ಹೀಗಿರುತ್ತಿರುವಲ್ಲಿ, ಮಹಮ್ಮದನಿಗೆ ವ್ಯಾಧಿಯು ಪ್ರಾಪ್ತವಾಯಿತು. ಸಿರಿಯಾ ದೇಶಕ್ಕೆ ಒಂದು ಸೈನ್ಯವನ್ನು ಕಳುಹಿಸಲು ಆ ವೇಳೆಗೆ ನಿರೂಪವು