ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ဂ ಪೈಗಂಬರ ಮಹಮ್ಮದನು ತನ್ನ ಮರಣ ಕಾಲವು ಸಮೀಪಿಸುತ್ತಿರುವ ಅಂಶವನ್ನು ಅತಿ ಸೂಕ್ಷ್ಮ ವಾಗಿ ಸೂಚಿಸಿದನು. ಕುಶಾಗ್ರ ಬುದ್ದಿಯುಳ್ಳ ಅಬೂ ಬಕರನೊಬ್ಬನಿಗೆ ಮಾತ್ರ ಅದರ ಭಾವವು ಮನಸ್ಸಿಗೆ ಹಿಡಿದು ಅವನ ಕಣ್ಣುಗಳು ಕಂಬನಿ ದುಂಬಿದುವು. ಭಾಷಣವು ಪೂರೈಸಿದನಂತರ ಮಹಮ್ಮದನು, ತಾನು ಯಾರಿ. ಗಾದರೂ ಅನ್ಯಾಯ ಮಾಡಿದ್ದರೆ ಅಂಥವರು ತನ್ನ ಮೇಲೆ ಈಗ ಹಗೆ ಯನ್ನು ತೀರಿಸಿಕೊಳ್ಳಬಹುದೆಂದೂ, ಈ ಪ್ರಪಂಚವನ್ನು ಬಿಟ್ಟು ಹೋಗು ವಾಗ ಇಲ್ಲಿ ಋಣ ಶೇಷವಿರಬಾರದೆಂಬ ಅಭಿಲಾಷೆಯಿಂದ, ತಾನು. ಮರೆತು ಯಾರಿಗಾದರೂ ಹಣ ಕಾಸು ಕೊಡುವುದು ಉಳಿದಿದ್ದರೆ ಅದನ್ನು ದಯವಿಟ್ಟು ತಿಳಿಸಬೇಕೆಂದೂ ಕೇಳಿದನು. ಸಾತ್ವಿಕ ಶ್ರೇಷ್ಠನಾಗಿ, ಯಾರನ್ನೂ ಯಾವ ವಿಧದಲ್ಲಿಯೂ ನೋಯಿಸದೆ ಸನ್ಮಾರ್ಗ ಪ್ರವರ್ತಕ ನಾಗಿದ್ದ ಮಹಮ್ಮದನ ಈ ಮಾತುಗಳನ್ನು ಕೇಳಿ ಅವನ ಶಿಷ್ಯರಲ್ಲನೇ ಕರು ಕಣ್ಣೀರು ಸುರಿಸಿದರು. ಆ ಸಭಿಕರಲ್ಲೊಬ್ಬನು ಮಾತ್ರ ತನಗೆ ಮಹಮ್ಮದನಿಂದ ಮೂರು ದರ್ಹ೦ ನಾಣ್ಯಗಳು ಬರಬೇಕೆಂದು ತಿಳಿಸಿ ದನು. ಭಿಕ್ಷುಕನೊಬ್ಬನಿಗೆ ಮಹಮ್ಮದನು ಆ ಹಣವನ್ನು ತನ್ನ ಸಾಲ ವಾಗಿ ಹಿಂದೆ ಕೊಡಿಸಿದ್ದುದು ಮರೆತುಹೋಗಿದ್ದಿತು. ಮಹಮ್ಮದನು ಆ ಸಾಲವನ್ನು ಸಂತೋಷದಿಂದ ತೀರಿಸಿದನು. ತರುವಾಯ, ಬಾಧೆ ಯಿಂದ ಹೆಚ್ಚು ಕಾಲ ಅಲ್ಲಿ ನಿಲ್ಲಲು ಶಕ್ತಿಯಿಲ್ಲದೆ ಮಹಮ್ಮದನು ಇಬ್ಬರ ಭುಜದ ಮೇಲೆ ಕೈಯಿಟ್ಟುಕೊಂಡು, ಮೆಲ್ಲಗೆ ನಡೆದು ಹೋಗಿ ಮನೆ ಯನ್ನು ಸೇರಿದನು. ಮರು ದಿನದಿಂದ ಮಹಮ್ಮದನ ರೋಗವು ಉಲ್ಬಣವಾಗುತ್ತ ಬಂದರೂ, ಕ್ರಿ. ಶ. ೬೨ನೆಯ ಜೂನ್ ೮ನೆಯ ತಾರೀಖು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಗುಣಮುಖವಾದಂತೆ ಪರಲೋಕ ಯಾತ್ರ ತೋರಿ ತಾಣವೂ ಬಂದಿತು. ಒಡನೆಯೇ ಅವನು ಮಸೀದಿಗೆ ಹೋಗಲು ಅನುವಾದನು. ಪತಿಯ ರೋಗವು ಹಿಮ್ಮೆಟ್ಟಿತೆಂದು ಮಹಮ್ಮದನ ಪತ್ನಿ ಯರೆಲ್ಲರೂ ಸಂತೋಷ ದಿಂದ ಹಿಗ್ಗಿದರು. ಮಹಮ್ಮದನು ಇತರರ ಸಹಾಯದಿಂದ ಮಸೀದಿಗೆ