ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIV. ಪರ ಲೋಕ ಯಾತ್ರೆ ೧೩೫ ಹೋಗಿ, ಅವನ ಶಿಷ್ಯರೆಲ್ಲರೂ ತಾನು ಅವರ ಬಳಿಯಲ್ಲಿಲ್ಲದೆ ಇರು ವಾಗಲೂ, ಅಷ್ಟು ಶ್ರದ್ದೆಯಿಂದ ನಮಾಜು ಮಾಡುತ್ತ, ಭಗವಂತನನ್ನು ಪ್ರಾರ್ಥಿಸುತ್ತಿದ್ದುದನ್ನು ಕಂಡು ಅವನಿಗೆ ಪರಮಾನಂದವಾಯಿತು. ತಮ್ಮ ಗುರುವಿಗೆ ರೋಗವು ಗುಣವಾಯಿತೆಂದು ಅಲ್ಲಿದ್ದವರೆಲ್ಲರೂ ಬಹಳ ಸಂತೋಷಪಟ್ಟರು. ಅಷ್ಟರಲ್ಲಿ ಮಹಮ್ಮದನ ತಾಣವು ಕುಂದುತ್ತ ಬಂದುದರಿಂದ, ಕೂಡಲೆ ಹೊರಟು ಬಹಳ ಕಷ್ಟದಿಂದ ಅವನು ಮನೆ ಯನ್ನು ಸೇರಿದನು. ಒಡನೆಯೇ ಸಂಕಟವು ಹೆಚ್ಚಿ, ಕೆಲವು ನಿಮಿಷ ಗಳಲ್ಲಿಯೇ ಮಹಮ್ಮದನು ಪರ ಲೋಕವನ್ನು ಸೇರಿದನು. “ ಭಗವಂ ತನೇ ! ಕರುಣಾ ಮಯನಾದ ನಿನ್ನ ಸಮ್ಮುಖದಲ್ಲಿ ವಾಸ.. .. ಎಂಬ ಅರ್ಧಕ್ತಿಗಳೇ ಮಹಮ್ಮದನ ಕಡೆಯ ನುಡಿಗಳು. ಯಾರಾದರೆ ಪಾಪ ದೂರರಾಗಿ ನಿರಹಂಕಾರ ವೃತ್ತಿಯಿಂದ ಜೀವಿಸುವರೋ, ಅವರು ಮಾತ್ರವೇ ನನ್ನ ಸಮೀಪಕ್ಕೆ ಬರುವರು. ಧರ್ಮಾತ್ಮರು ಸುಖವನ್ನ ರಸ ಬೇಕಾದ ನಿಮಿತ್ಯವೇ ಇಲ್ಲ ; ಸುಖವೇ ಅವರಿಗಾಗಿ ಯಾವಾಗಲೂ ಕಾದಿರುವುದು' ಎಂಬ ಖುರಾನಿನ ಭಗವದುಕ್ತಿಗನುಸಾರವಾಗಿ ಭಗವಂತನೇ ಮಹಮ್ಮದನನ್ನು ತನ್ನ ಸವಿಾಪಕ್ಕೆ ಕರೆದುಕೊಂಡನು. ಭಗವಂತನ ಸೇವೆಗಾಗಿಯ, ಜನಪದದ ಸೇವೆಗಾಗಿಯ ಸೊಂಟ ವನ್ನು ಕಟ್ಟಿ ನಿಂತು ಯಥಾ ಶಕ್ತಿಯಾಗಿ ನಿರ್ವಂಚನೆಯಿಂದ ಕೆಲಸಮಾಡಿದ ತೇಜಸ್ವಿಯ ಜೀವನವು ಹೀಗೆ ಪರಿಸಮಾಪ್ತಿಯಾಯಿತು. ತಮ್ಮ ಗುರು ವಿನ ವಿಯೋಗದಿಂದುಂಟಾದ ದುಃಖದಿಂದ ಅವನ ಶಿಷ್ಯರೆಲ್ಲರೂ ಕಳೆಗುಂದಿ ದರು. ಆದರೇನು ? ವಿಪತ್ತಿನಲ್ಲಿ ಧೈರ್ಯವೇ ಶರಣೆಂದು ನಿರ್ಧರಿಸಿ, ಪರಮಾತ್ಮನಾದ ಭಗವಂತನು ತಮ್ಮನ್ನು ಉದ್ದರಿಸಲು ಸಿದ್ದವಾಗಿಯೇ ಇರುವನೆಂದೂ, ಮಹಮ್ಮದನ ಉಪದೇಶಗಳಿಗನುಸಾರವಾಗಿ ನಡೆದು ಕೃತಾರ್ಥರಾಗಬೇಕೆಂದೂ ಅವರೆಲ್ಲರೂ ದೃಢನಿಶ್ಚಯಮಾಡಿದರು. ಎಂತಹ ಗುರುವೋ ಅಂತಹ ಶಿಷ್ಯರು !