ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೮ ಪೈಗಂಬರ ಮಹಮ್ಮದನು ಬಂದವುಗಳೆಂದು ಯಾರು ನಂಬುವರೋ, ಅವರೇ ನಿಜವಾದ ಮಹಮ್ಮ ದೀಯರು ಎಂಬುದಾಗಿಯೂ ಖುರಾನಿನಲ್ಲಿ ಹೇಳಿದೆ. ಆದರೆ, ಖುರಾನಿನಲ್ಲಿ ಕೆಲವು ಮಂದಿ ಮತ ಪುರುಷರ ಹೆಸರುಗಳನ್ನು ಮಾತ್ರ ಹೇಳಿರುವುದರಿಂದ, ಅವರು ಮಾತ್ರವೇ ಭಗವಂತನ ಅನುಗ್ರಹದಿಂದ ಅವತರಿಸಿದವರೆಂದೂ, ಉಳಿದವರು ಅಲ್ಲವೆಂದೂ ಶಂಕೆಯುಂಟಾಗದಿರು ನಂತೆ ಖುರಾಸಿನಲ್ಲಿ, “ ನಿನಗೆ ಇದುವರೆಗೆ ತಿಳಿಸಿರುವ ಮತ ಪುರುಷ ರನ್ನೂ, ತಿಳಿಸದೆ ಇರುವ ಇತರ ಮತ ಪುರುಷರನ್ನೂ ಲೋಕಾನು ಗುಹಾರ್ಥವಾಗಿ ನಾನೇ (ಭಗವಂತನೇ) ಕಳುಹಿಸಿಕೊಟ್ಟೆನು ' ಎಂದೂ ಹೇಳಿದೆ. ಇದನ್ನು ಓದಿದಾಗ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು, ಯಾವ ಯಾವ ಮಾಹಾತ್ಮಗಳು ಎಲ್ಲೆಲ್ಲಿ ಕಂಡುಬಂದರೂ ಅವುಗಳೆಲ್ಲ ತನ್ನಿಂದಲೇ ಅನುಗ್ರಹಿಸಲ್ಪಟ್ಟವುಗಳೆಂದು ಭಾವಿಸಬೇಕೆಂಬುದಾಗಿ ಪಾರ್ಥನಿಗೆ ಅಪ್ಪಣೆ ಕೊಡಿಸಿರುವುದು ನೆನಪಿಗೆ ಬರುವುದು. ಅನ್ಯ ಮತಗಳ ಆಚಾರ್ಯರನ್ನು ಗೌರವಿಸಬೇಕೆಂಬ ನಿಯಮವು ಇಸ್ಲಾಂ ಮತ ಧರ್ಮಗಳಲ್ಲೊಂದಾಗಿರುವುದರಿಂದ ಪರ ಮತ ಸಹಿಷ್ಟು ತೆಯು ಸ್ವತಸ್ಸಿದ್ದವಾಯಿತು. ಒಟ್ಟಿನಲ್ಲಿ ನೋಡಿದರೆ, ಪರ ಮತ ಸಹಿಷ್ಣುತೆ - ಎಲ್ಲ ಮತಗಳ ಮೂಲ ತತ್ತ್ವಗಳೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ ಎಂದು ಹೇಳಬಹುದು. ಆದಕಾರಣ, ತತ್ತ್ವವೇತ್ತರಲ್ಲಿ ಪರಸ್ಪರ ದ್ವೇಷವಿರುವದಿಲ್ಲ. ಮ ಹಮ್ಮ ದ ನೂ ತನ್ನ ರಾಷ್ಟ್ರದಲ್ಲಿದ್ದ ಅನ್ಯ ಮತೀಯರಾದ ಯೆಹೂದ್ಯರೂ ಕೈಸ್ತರೂ ತಮ್ಮ ತಮ್ಮ ಮತಗಳಿಗನುಸಾರವಾಗಿ ವರ್ತಿಸುತ್ತ ಸುರಕ್ಷಿತವಾಗಿರು ವಂತೆ ಶಾಸನ ಮಾಡಿದ್ದನು. (ಮತ ವಿಚಾರಗಳಲ್ಲಿ ಬಲಾತ್ಕಾರವು. ತಕ್ಕುದಲ್ಲ ಎಂದು ಖುರಾನಿನಲ್ಲಿ ಹೇಳಿರುವುದನ್ನು ತಾನು ಆಚರಣೆಯಲ್ಲಿ ತಂದನು, ತನ್ನ ಮತ ಬೋಧಕರನ್ನು ಕಳುಹಿಸಿ ಕೊಡುವಾಗ, ಈ ಅಂಶವನ್ನು ತನ್ನ ಮನಸ್ಸಿನಲ್ಲಿಟ್ಟುಕೊಂಡು, ( ಜನರಲ್ಲಿ ಅನುನಯಪರರಾಗಿ ವರ್ತಿಸಿರಿ; ಅವರೊಡನೆ ದುಡುಕಿ ನಡೆಯಬೇಡಿರಿ ; ಅವರಿಗೆ ಸಂತೋಷವಾಗುವಂತೆ ಮಾತನಾಡಿರಿ ; ಅವರನ್ನು ದೋಷಯುತರೆಂದು ದೂಷಿಸಬೇಡಿರಿ; ಅನ್ಯ ಮತ ಗ್ರಂಥ