ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ಗಳನ್ನು ವ್ಯಾಸಂಗ ಮಾಡಿದವರನೇಕರು, ಸ್ವರ್ಗ ಸುಖವನ್ನು ಪಡೆಯುವ ಸಾಧನವೇನೆಂದು ನಿಮ್ಮನ್ನು ಕೇಳಿದರೆ, ಸತ್ಯವನ್ನರಿತು ಸತ್ಕರ್ಮಾ ಚರಣೆ ಮಾಡುವುದೇ ಆ ಸಾಧನವೆಂದು ಅವರಿಗೆ ಒಳ್ಳೆಯ ಮಾತಿನಿಂದ. ಉತ್ತರ ಹೇಳಿರಿ' ಎಂದು ಮಹಮ್ಮದನು ಅವರಿಗೆ ಹೇಳುತ್ತಿದ್ದನು. ಇಷ್ಟಪಟ್ಟವರನ್ನು ಮಾತ್ರವೇ ಇಸ್ಲಾಂ ಮತಕ್ಕೆ ಸೇರಿಸಿಕೊಳ್ಳ ಬೇಕೆಂಬುದು ಅವನ ಆಶಯವೆಂದು ಇದರಿಂದ ವ್ಯಕ್ತವಾಗುವುದಿಲ್ಲವೆ? ನಚಾನಿನ ಕೈಸ್ತರಿಗೆ ಅವನು ಕೊಟ್ಟ ಸನ್ನದಿನಲ್ಲಿ ಬರುವ ಒಕ್ಕಣೆ ಇದು:- ನಜಾನ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ, ಗಳಲ್ಲಿರುವ ಕ್ರೈಸ್ತರನ್ನು, ಅವರ ತನು ಧನಗಳಿಗೂ ಅವರ ಮತಕ್ಕೂ ಅಪಾಯಬಾರದಂತೆ, ಸುರಕ್ಷಿತವಾಗಿ ನೋಡಿಕೊಳ್ಳಲಾಗುವುದೆಂದು ಪೈಗಂಬರ್‌ ಮಹಮ್ಮದನು ವಾಗ್ದಾನ ಮಾಡಿ ಹೊರಡಿಸಿರುವ ಸನ್ನದು :ಕ್ರೈಸ್ತರ ಮತಾಚಾರಗಳ ವಿಷಯದಲ್ಲಿ ಯಾರೂ ಅವರನ್ನು ಆತಂಕಪಡಿಸ. ಲಾಗದು; ಅವರ ಹಕ್ಕು ಬಾಧ್ಯತೆಗಳಿಗೆ ಯಾವ ಲೋಪವೂ ಬರಬಾರದು. ಬಿಷಪ್, ಮಂಕ್ ಮುಂತಾದ ಕ್ರೈಸ್ತ ಮತಾಧಿಕಾರಿಗಳು ಮಹಮ್ಮದೀಯರ ದೆಸೆಯಿಂದ ಪದಚ್ಯುತರಾಗುವ ಭಯವಿಲ್ಲದೆ, ಅವರ ಸಮಸ್ತ ಹಕ್ಕುಗಳನ್ನೂ ಈಗಿರುವಂತೆಯೇ ಮುಂದೆಯ ನಿರಾತಂಕ ವಾಗಿ ಸಾಧಿಸಿಕೊಳ್ಳುತ್ತ ಬರಬಹುದು. ಕೈಸ್ತರು ಆರಾಧಿಸುವ ವಿಗ್ರಹ ಗಳನ್ನಾಗಲಿ, ಕ್ರಾಸುಗಳೆಂಬ ತಿಕಡಿಗಳನ್ನಾಗಲಿ, ಮಹಮ್ಮದೀಯರು. ನಾಶಪಡಿಸಲಾಗದು. ಕೈಸ್ತರಿಗೆ ಮುಸಲ್ಮಾನರ ದೆಸೆಯಿಂದಾಗಲಿ, ಮಹಮ್ಮದೀಯರಿಗೆ ಕೈಸ್ತರ ದೆಸೆಯಿಂದಾಗಲಿ ಯಾವ ವಿಧವಾದ ಹಿಂಸೆಯೂ ಇರಬಾರದು. ಕೈಸ್ತರಿಂದ ಮತದ ತೆರಿಗೆ ಯಾವುದನ್ನೂ ಎತ್ತಲಾಗದು. ನಮ್ಮ ಸೈನಿಕರಿಗೆ ಅವರು ಆಹಾರವನ್ನು ಒದಗಿಸ. ಬೇಕೆಂದು ನಿರ್ಬಂಧಪಡಿಸಬಾರದು.” ಅರಬ್ಬಿ ದೇಶದಲ್ಲಿ ವಾಸವಾಗಿದ್ದ ಅಗ್ನಿ ಯ ಆರಾಧಕರಾದ ಪಾರ್ಸಿಯವರನ್ನೂ ಸುರಕ್ಷಿತವಾಗಿ ನೋಡಿ, ಕೊಳ್ಳುವಂತೆ ಮಹಮ್ಮದನು ಅವರಿಗೆ ಸನ್ನದನ್ನು ಕೊಟ್ಟಿದ್ದನು. ಯೆಹೂದ್ಯರಿಗೂ ಅಂತೆಯೇ, ನಸಿರುದ್ದೀನ್ ಮಹಮ್ಮದ್, ಹುಮಾ' ಯನ್, ಅಕ್ಷರ್‌ ಮುಂತಾದವರು ಈ ತತ್ತ್ವವನ್ನರಿತು ತದನುಗುಣ