ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧೫೩* ದಲ್ಲಿಯ ಶ್ರೀಮಂತರು ಗುಲಾಮರನ್ನು ಸಿಂಹ, ಹುಲಿ ಮುಂತಾದ ಕಾಡು ಮೃಗಗಳೊಡನೆ ಹೋರಾಟಕ್ಕೆ ಬಿಟ್ಟು, ಅದಕ್ಕಾಗೇರ್ಪಡಿಸಿದ್ದ ಆವರಣದ ಹೊರಗೆ ನಿಂತು ತಮಾಷೆಯನ್ನು ನೋಡಿ ಆನಂದಪಡು ತಿದ್ದರು. ಮಹಮ್ಮದನು ಅವತರಿಸುವುದಕ್ಕೆ ಮೊದಲು ಗುಲಾಮರ ಕಷ್ಟ ನಿವಾರಣೆಗಾಗಿ ಕೆಲವು ಪ್ರಯತ್ನಗಳು ನಡೆದಿದ್ದರೂ ಅವು ಫಲಕಾರಿ ಯಾಗಿ ಪರಿಣಮಿಸಲಿಲ್ಲ. ನಾಯಿ ನರಿಗಳಿಗಿಂತಲೂ ನಿಕೃಷ್ಟವಾಗೆಣಿಸ ಲ್ಪಟ್ಟಿದ್ದ ಈ ಗುಲಾಮರಿಗೆ ಇಸ್ಲಾಂ ಮತದಿಂದ ಅಭೂತ ಪೂರ್ವವಾದ ಆದರವು ದೊರೆಯಿತು. ಮಹಮ್ಮದನು ಗುಲಾಮರ ಸ್ಥಿತಿಯನ್ನು ಉತ್ತಮಗೊಳಿಸ ಬೇಕೆಂಬ ದೃಢ ಸಂಕಲ್ಪ ಮಾಡಿದನು. ಆದರೆ ಆಗ ಅವನ ಮತವು ಕೇವಲ ಶೈಶವಾವಸ್ಥೆಯಲ್ಲಿದ್ದುದರಿಂದ, ಗುಲಾಮರನ್ನು ಬಿಡುಗಡೆ ಮಾಡುವುದಕ್ಕೆ ಅವರ ಯಜಮಾನರಿಗೆ ಕೊಡಬೇಕಾದಷ್ಟು ಹಣವು ಮಹಮ್ಮದನಲ್ಲಿರ ಲಿಲ್ಲ. ಆದಕಾರಣ, ಗುಲಾಮರ ದಾಸ್ಯವನ್ನು ನಿವೃತ್ತಿ ಮಾಡುವುದು ಅತಿ ಶ್ಲಾಘೋವಾದ ಪುಣ್ಯ ಕಾರ್ಯವೆಂಬ ಸಿದ್ಧಾಂತವನ್ನು ತನ್ನ ಮತ ತತ್ಯ ಗಳಲ್ಲಿ ಸೇರಿಸುವ ಕಾರ್ಯವನ್ನು ಮಾತ್ರ ನಡೆಯಿಸಿದನು. ಕೇವಲ ಪುಣ್ಯ ದಾಯಕವಾದ ಸತ್ಯರ್ಮಗಳ ಗುಂಪಿನಲ್ಲಿ, ಗುಲಾಮರ ದಾಸ್ಯ ನಿವ್ರ ತ್ರಿಯ ಅನಾಥರಿಗೆ ಅನ್ನ ದಾನವೂ ಸರ್ವೊತ್ಕೃಷ್ಟವಾದವುಗಳೆಂದು ಮಹಮ್ಮದನು ಖುರಾನಿನಲ್ಲಿ ಬರೆದಿಟ್ಟನು. ಕೆಲವು ಪಾಪಗಳಿಗೆ ಪ್ರಾಯ ಶಿತ್ರಗಳನ್ನು ವಿಧಿಸುವುದರಲ್ಲಿ ಗುಲಾಮರ ದಾಸ್ಯ ನಿವೃತ್ತಿ ಮಾಡಿ ಸುವುದೂ ಒಂದು ಪ್ರಾಯಶ್ಚಿತ್ತವೆಂದು ಗೊತ್ತು ಮಾಡಿದನು, ಗುಲಾ ಮರು ತಮ್ಮ ಯಜಮಾನರಿಗಾಗಿ, ಮಾಡುತ್ತಿದ್ದ ಕೆಲಸದಲ್ಲಿ ಒಂದು ಭಾಗಕ್ಕೆ ದ್ರವ್ಯ ರೂಪವಾಗಿ ಬೆಲೆ ಕಟ್ಟಿ, ಆ ಮೊತ್ತವು ಅವರ ದಾಸ್ಯ ನಿವೃತ್ತಿ ಗಾಗಿ ಸಲ್ಲಬೇಕಾದ ಮೊತ್ತಕ್ಕೆ ಉತ್ತಾರವಾಗುತ್ತ ಬಂದು ಯಥಾ ಕಾಲ ದಲ್ಲಿ ಅವರು ಯಜಮಾನರ ಕೈಯಿಂದ ಬಿಡುಗಡೆ ಹೊಂದಿ ಸ್ವತಂತ್ರರಾಗು ವಂತೆ ಮಹಮ್ಮದನು ಒಂದು ನಿಯಮವನ್ನು ಮಾಡಿದನು. ಯಾವನಾ ದರೂ ಗುಲಾಮನು ತನಗೆ ಮತ್ತೆಲ್ಲಿಯಾದರೂ ಹೆಚ್ಚು ಸಂಬಳವು ದೊರೆಯುವುದಾಗಿದ್ದರೆ ಅಲ್ಲಿಗೆ ಹೋಗುವುದಕ್ಕೆ ಅವನ ಯಜಮಾನನು