ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

<೧೫೪ ಪೈಗಂಬರ ಮಹಮ್ಮದನು ಅಪ್ಪಣೆ ಕೊಡಬೇಕೆಂದೂ, ಅಲ್ಲಿಯ ಸಂಬಳದ ಹಣದಲ್ಲಿ ಗುಲಾಮನು ತನ್ನ ದಾಸ್ಯ ನಿವೃತ್ತಿಯ ಮೊತ್ತಕ್ಕಾಗಿ ತಾನು ಹಣವನ್ನು ಸಲ್ಲಿಸುತ್ತ ಬರುವು ದಾಗಿ ಆತನಿಗೆ ಕರಾರು ಪತ್ರವನ್ನು ಬರೆದುಕೊಟ್ಟು ಹಾಗೆ ಬೇರೆ ಸ್ಥಳದಲ್ಲಿ ಕೆಲಸಕ್ಕೆ ಹೋಗಬಹುದೆಂದೂ ಮಹಮ್ಮದನು ನಿಬಂಧನೆಯನ್ನೇರ್ಪಡಿ ಸಿದನು. ಈ ವಿಧದ ಕರಾರು ಪತ್ರಗಳಲ್ಲಿ ಸಂದಿಗ್ವಾರ್ಥವುಳ್ಳ ಯಾವು ದೊಂದು ಅಂಶವೇ ಇದ್ದರೂ, ಗುಲಾಮನಿಗೆ ಪ್ರಯೋಜನಕರವಾದ ರೀತಿ ಯಲ್ಲಿ ಅದಕ್ಕೆ ಅರ್ಥ ಸಮನ್ವಯ ಮಾಡಬೇಕೆಂಬ ಕಟ್ಟುಪಾಡೂ ಆಚರಣೆಗೆ ಬಂದಿತು. ಅರಬ್ಬಿ ದೇಶವು ತನ್ನ ಆಳಿಕೆಗೊಳಗಾದ ಮೇಲೆ ಮಹಮ್ಮದನು ದೇಶದ ಹುಟ್ಟುವಳಿಯಲ್ಲಿ ಪ್ರತಿ ವರ್ಷವೂ ಒಂದು ಕ್ರೈಸ್ತ, ಭಾಗವು ದಾಸ್ಯ ನಿವೃತ್ತಿಗಾಗಿ ವಿನಿಯೋಗವಾಗತಕ್ಕುದೆಂದು ನಿರೂಪವನ್ನು ಕೊಟ್ಟನು. ದಾಸ್ಯ ನಿವೃತ್ತಿಯ ವಿಷಯದಲ್ಲಿ ಮಹಮ್ಮದನು ಸ್ವಾನುಷ್ಠಾನ ದಿಂದಲೂ ಇತರರಿಗೆ ಉತ್ತಮವಾದ ಮೇಲ್ಪ ಬಳ್ಳಿಯನ್ನು ಹಾಕಿ ಕೊಟ್ಟನು. ಅವನು ತನ್ನ ಗುಲಾಮರೆಲ್ಲರಿಗೂ ಉಚಿತವಾಗಿ ಸ್ವಾತಂತ್ರ್ಯ ದಾನ ಮಾಡಿದನು ; ಅವರಲ್ಲಿ ಜೈದನೂ ಒಬ್ಬನು. ಮಹಮ್ಮದನ ಸಮ ದರ್ಶಿತ್ವವು ಅಲ್ಲಿಗೇ ಮುಗಿಯಲಿಲ್ಲ. ಅವನು ತನ್ನ ಸವಿಾಪ ಸಂಬಂಧಿ ಯಾದ ಜೈನಾಬಳನ್ನು ಜೈದನಿಗೆ ಕೊಟ್ಟು ವಿವಾಹ ಮಾಡಿದನು. ಆ ದಂಪತಿಗಳ ಪ್ರೇಮ ಪುತ್ರನಾದ ಉಸಾವನಲ್ಲಿ ಮಹಮ್ಮದನಿಗೆ ಬಹಳ ಪ್ರೀತಿ, ಉಸಾಮನು ಪ್ರಾಪ್ತ ವಯಸ್ಕನಾದ ಮೇಲೆ ಮಹಮ್ಮದನು ಅವನನ್ನು ಸೇನಾಧಿಪತಿಯನ್ನಾಗಿ ನೇಮಿಸಿದುದನ್ನು ಹಿಂದೆ ಹೇಳಿದೆ. - ಖುರಾನಿನಲ್ಲಿ, “ ನಿಮ್ಮ ಗುಲಾಮರೂ ನಿಮ್ಮ ಸೋದರರೇ ಅಲ್ಲವೆ ? ಭಗವಂತನು ಅವರನ್ನು ನಿಮ್ಮ ಸೇವೆಗಾಗಿ ನಿಮ್ಮ ಅಧೀನ ಕೊಪ್ಪಿಸಿದ್ದಾನೆ. ಆದಕಾರಣ, ಇಂಥವರು ಯಾರ ಬಳಿಯಲ್ಲಿ ಕೆಲಸ ಕ್ಕಿದ್ದರೂ, ಯಜಮಾನರು ತಾವು ಊಟ ಮಾಡುವಂತಹ ರುಚಿಕರವಾದ ಆಹಾರ ವಸ್ತುಗಳನ್ನೆ ಅವರಿಗೂ ಒದಗಿಸಬೇಕು ; ತಾವು ಧರಿಸು ವಂತಹ ವಸ್ತ್ರಗಳನ್ನೇ ಅವರಿಗೂ ಕೊಡಬೇಕು; ಅವರ ಶಕ್ತಿಗೆ ಮೀರಿದ ಕೆಲಸವನ್ನೆ೦ದಿಗೂ ಕೊಡಬಾರದು. ಒಂದು ವೇಳೆ ಅಂತಹ ಕೆಲಸವನ್ನು