ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

”ವನ ಪೈಗಂಬರ ಮಹಮ್ಮದನು ಎರಡನೆಯ ಅಧ್ಯಾಯ ಸಂಸಾರದ ಸುಖ ದುಃಖಗಳು ತನ್ನ ದೇಶೀಯರು ಹಲವು ಪಂಗಡಗಳಾಗಿ ದ್ವೇಷಾಸೂಯೆಗಳಿಂದ ಕೂಡಿ ಆಗಾಗ ಹೊಡೆದಾಡುತ್ತಿದ್ದುದನ್ನು ಮಹಮ್ಮದನು ತನ್ನ ಬಾಲ್ಯದಿಂದಲೂ ನೋಡುತ್ತಲೇ ಇದ್ದನು. ಸಮಾಜದ * ದುರವಸ್ಥೆಯು ಅವನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತು ಅವನ ಹೃದಯವನ್ನೇ ಮರುಕದಿಂದ ಕರಗಿಸಿಬಿಟ್ಟಿತು. ಈ ಸನ್ನಿ ವೇಶದಲ್ಲಿ ಅವನು ಯಾವನದ ಹೊಸಲನ್ನು ಮೆಟ್ಟಿದನು. ಅದು ವರೆಗೂ ಅವನು ಓದು ಬರೆಹಗಳನ್ನು ಅಭ್ಯಾಸ ಮಾಡದಿದ್ದರೂ ತನ್ನ ದೇಶದ ಪುರಾತನ ಕಥೆಗಳನ್ನೂ ವೀರರ ಜೀವನ ಚರಿತ್ರೆಗಳನ್ನೂ ಚೆನ್ನಾಗಿ ಕೇಳಿ ಮನನ ಮಾಡಿದ್ದನು ; ಅದರಿಂದ ಸಾಧ್ಯವಾದಷ್ಟು ಮಟ್ಟಿನ ವಿವೇಕವನ್ನೂ ಸಂಗ್ರಹ ಮಾಡಿದ್ದನು. ಅವನಿಗೆ ತನ್ನ ದೇಶ ಬಾಂಧವರಲ್ಲಿ ಕೇವಲ ಪ್ರೀತಿಯಿದ್ದಿತು. ಅಕಾರಣವಾಗಿ ಅವರು ಹೊಡೆ. ದಾಡುವುದನ್ನು ಕಂಡು ಅವನು ವಿಷಾದಪಡುತ್ತಿದ್ದನು ; ಅವರಲ್ಲಿ ಶಾಂತಿ ಯನ್ನು ನೆಲೆಗೊಳಿಸುವುದು ಸಾಧ್ಯವೇ ಎಂದು ತವಕ ಪಡುತ್ತಿದ್ದನು. ಆದರೆ ದರಿದ್ರ ಯುವಕನ ವಿವೇಕದ ನುಡಿಯನ್ನು ರಾಗಾಂಧತೆಯಿಂದ ಮತ್ತರಾದ ಬಲ್ಲಿದರು ಕೇಳುವ ಸಂಭವವುಂಟೆ ? ಅದನ್ನರಿತು ಮಹಮ್ಮ ದ ಸುಮ್ಮನಿದ್ದನು. ಅವನ ಮನಸ್ಸಿನಲ್ಲಿ ಬಗೆಬಗೆಯ ಆಲೋಚನೆಗಳು ತರಂಗ ತರಂಗವಾಗಿ ಹೊರಹೊಮ್ಮುತ್ತಿದ್ದುವು. ಅವನು ಜನಸಂದಣಿಯ. ಮಧ್ಯದಲ್ಲಿದ್ರೂ ಮೌನ ವ್ರತವನ್ನವಲಂಬಿಸಿದ್ದನು. ಕೇಳದವರಿಗೆ ಹೇಳ ಹೋಗುವುದೂ ಅವಿವೇಕವೇ ಅಲ್ಲವೆ ? ಇದರ ಮೇಲೆ ದಾರಿದ್ರ, ದಗ್ನ ರಾದವರ ಗುಣಗಳು ಶೋಭಿಸುವುದು ಅಪೂರ್ವ; ಅನೇಕ ಸಂದರ್ಭಗಳಲ್ಲಿ ಗುಣಗಳೂ ಅವಗುಣಗಳೆಂದೇ ಭಾವಿಸಲ್ಪಡುವುದೂ ಉಂಟು. ಒಟ್ಟು ಜನಪದಗಳ ವಿಷಯವೂ ಹೀಗೆಯೇ, ಗುಣ ಮಣಿಯಾದ ಭಾರತ. ಮಾತೆಯ ಸಂಸ್ಕೃತಿಯ ವಿಷಯದಲ್ಲಿ ಕೂಡ ಇತರ ದೇಶಗಳವರ ಅವಹೇಳನಕ್ಕೆ ಗುರಿಯಾಗಿರುವುದೂ ಬಡತನದ ಬವಣೆಯಿಂದಲೇ.