________________
ಪೈಗಂಬರ ಮಹಮ್ಮದನು ದೇವರು ಎಂದಿಗೂ ಪ್ರೀತಿಸನು. ಬಟ್ಟೆಗಳಿಲ್ಲದ ನಿರ್ಗತಿಕರಿಗೆ ಬಟ್ಟೆ ಯನ್ನು ಕೊಡುವ ಮಹಮ್ಮದೀಯನಿಗೆ ಪರಲೋಕದಲ್ಲಿ ಭಗವಂತನು ಸ್ವರ್ಗ ಲೋಕದ ಹಸಿರು ಬಣ್ಣದ ಉಡುಪನ್ನು ಅನುಗ್ರಹಿಸುವನು.” ಒಮ್ಮೆ ಮಹಮ್ಮದನು ಬೋಧಿಸಿದುದೇನೆಂದರೆ:-'ದೇವರು ಭೂಮಿ ಯನ್ನು ಸೃಷ್ಟಿಸಿದಾಗ ಅದು ಚಲಿಸಿ ಅಲುಗಾಡಿತು. ಅದಕ್ಕೆ ಸ್ವಿಮಿತತೆ ಯನ್ನುಂಟುಮಾಡುವುದಕ್ಕಾಗಿ ಭಗವಂತನು ಭೂಮಿಯ ಮೇಲೆ ಅಲ್ಲಲ್ಲಿ ಗುಡ್ಡಗಳನ್ನೂ ಬೆಟ್ಟಗಳನ್ನೂ ಹೇರಿದನು. ಆಗ ದೇವ ದೂತರು, * “ಓ ಭಗವಂತನೇ ! ನಿನ್ನ ಸೃಷ್ಟಿಯಲ್ಲಿ ಬೆಟ್ಟಗಳಿಗಿಂತ ಬಲವಾದುದು ಏನಾ ದರೂ ಇದೆಯೆ ? ಎಂದು ಕೇಳಲು ಭಗವಂತನು, “ಕಬ್ಬಿಣವು ಅವು ' ಗಳನ್ನು ಒಡೆಯಬಲ್ಲುದಾದುದರಿಂದ ಬೆಟ್ಟಗಳಿಗಿಂತ ಬಲವಾದುದು ಎಂದು ಉತ್ತರ ಹೇಳಿದನು. ಅವರು, ನಿನ್ನ ಸೃಷ್ಟಿಯಲ್ಲಿ ಕಬ್ಬಿಣಕ್ಕಿಂತ ಬಲವಾದ ವಸ್ತುವ ಯಾವುದಾದರೂ ಇದೆಯೇ ? ಎಂದು ಮರಳಿ ಕೇಳಲು, ಭಗವಂತನು, 'ಬೆಂಕಿಯು ಕಬ್ಬಿಣವನ್ನು ಕರಗಿಸಬಲ್ಲುದಾದ ಕಾರಣ ಕಬ್ಬಿಣಕ್ಕಿಂತಲೂ ಬಲವಾದುದು ಎಂದು ಉತ್ತರ ಹೇಳಿದನು. * ನಿನ್ನ ಸೃಷ್ಟಿಯಲ್ಲಿ ಬೆಂಕಿಗಿಂತಲೂ ಬಲವಾದುದು ಯಾವುದಾದರೂ ಉಂಟೆ ? ಎಂದು ಅವರು ಮರಳಿ ಕೇಳಿದುದಕ್ಕೆ, 'ನೀರು ಬೆಂಕಿಯನ್ನು ಆರಿಸುವ ಶಕ್ತಿಯುಳ್ಳದುದರಿಂದ ಅದಕ್ಕಿಂತಲೂ ಬಲವಾದುದು' ಎಂದು ಅವನು ಉತ್ತರ ಕೊಟ್ಟನು. ತರುವಾಯ ಅವರು, 'ದೇವಾ ! ನೀರಿ ಗಿಂತಲೂ ಬಲವಾದುದು ಯಾವುದಾದರೂ ನಿನ್ನ ಸೃಷ್ಟಿಯಲ್ಲಿದೆಯೆ ? ಎಂದು ಕೇಳಲು, ಅದಕ್ಕೆ ಭಗವಂತನು, ಗಾಳಿಯು ನೀರಿಗಿಂತಲೂ ಬಲವಾದುದು ; ಏಕೆಂದರೆ, ಅದು ನೀರಿನ ಶಕ್ತಿಯನ್ನು ತಡೆದು, ಅದನ್ನು ಚಲಿಸುವಂತೆ ಮಾಡುತ್ತದೆ ಎಂದು ಉತ್ತರ ಹೇಳಿದನು. ಕೊನೆಗೆ ಅವರು, “ ನಮ್ಮನ್ನು ಸಂರಕ್ಷಿಸುವ ಸ್ವಾಮಿಯೇ ! ಗಾಳಿಗಿಂತಲೂ ಬಲವಾದುದು ಯಾವುದಾದರೂ ನಿನ್ನ ಸೃಷ್ಟಿಯಲ್ಲುಂಟೆ ? ಎಂದು ಕೇಳಲು, ಭಗವಂತನು, ದೀನರಲ್ಲಿ ಕನಿಕರವಿಟ್ಟು ಅವರಿಗೆ ಭಿಕ್ಷವನ್ನು ನೀಡಿ ಸಹಾಯಮಾಡುವ ಧರ್ಮಾತ್ಮನ ಶಕ್ತಿಯ ಪ್ರಭಾವವೂ ಎಲ್ಲಕ್ಕಿಂತಲೂ ಹೆಚ್ಚಾದುವು. ಬಲಗೈ ಸಹಾಯ ಮಾಡಿದುದನ್ನು ಎಡಗೈ