ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V, ಉನ್ನತಿಯ ಅಂಕುರ ೧೫ ಕೂಡ ಅರಿಯದಂತೆ ವರ್ತಿಸುವುದಾದರೆ, ಅಂತಹ ಮನುಷ್ಯನ ಶಕ್ತಿ ಪ್ರಭಾವಗಳ ಮುಂದೆ ಯಾವುದೂ ಏಾರಿ ನಡೆಯುವಂತಿಲ್ಲ' ಎಂದು ಉತ್ತರ ಹೇಳಿದನು. ಧರ್ಮಾರ್ಥವಾಗಿ ಸಹಾಯ ಮಾಡಿ ಕರುಣೆಯನ್ನು ತೋರಿಸುವ ವಿಧಾನಗಳನ್ನು ತಿಳಿಸುವುದರಲ್ಲಿ ಮಹಮ್ಮದನು ಸಂಕುಚಿತ ದೃಷ್ಟಿಯಿಂ ದಿರಲಿಲ್ಲ; ಪರೋಪಕಾರದ ನಾನಾ ರೂಪಗಳೂ ಅವನಿಗೆ ಗೊತ್ತಿದ್ದುವು. ಈ ವಿಷಯವಾಗಿ ಅವನು ಆ ಮಸೀದಿಯಲ್ಲಿ ಬೋಧಿಸಿದ ಬಗೆಯನ್ನು ಚಿಂತಿಸೋಣ: ಪ್ರತಿಯೊಂದು ಒಳ್ಳೆಯ ಕೆಲಸವೂ ಪರೋಪಕಾರವೇ ಸರಿ, ನಿಮ್ಮ ದೇಶ ಬಾಂಧವರನ್ನಾದರಿಸಿ ಮುಗುಳ್ಳಗೆಯನ್ನು ಸೂಸಿ ದರೆ ಅದು ಪರೋಪಕಾರ, ಒಳ್ಳೆಯ ಕೆಲಸಗಳನ್ನು ಮಾಡುವಂತೆ ನಿಮ್ಮ ದೇಶ ಬಾಂಧವರೆದುರಿಗೆ ಸ್ಫೂರ್ತಿ ದಾಯಕವಾದ ಭಾಷಣ ಮಾಡಿದರೆ ಅಂತಹ ಭಾಷಣವು ಸತ್ಪಾತ್ರ ದಾನದಷ್ಟು ಮಹತ್ವ ದ್ದಾಗುವುದು. ದಾರಿ ತಪ್ಪಿದ ಪ್ರಯಾಣಿಕನಿಗೆ ದಾರಿ ತೋರಿಸುವುದೂ, ಕುರುಡನಿಗೆ ಬೇಕಾದ ಸಹಾಯ ಮಾಡುವುದೂ ಪರೋಪಕಾರವೇ, ಜನರು ತಿರು ಗಾಡುವ ದಾರಿಯಲ್ಲಿ ಕಲ್ಲು ಮುಳ್ಳುಗಳಿದ್ದರೆ ಅವನ್ನು ತೆಗೆದು ಹಾಕಿ ದವನೂ ಪರೋಪಕಾರಿಯೇ, ಬಾಯಾರಿಕೆಯಿಂದ ತೊಂದರೆ ಪಡುತ್ತಿರು ವವನಿಗೆ ನೀರನ್ನು ಕೊಟ್ಟರೆ ಅದೂ ಪರೋಪಕಾರವೆನಿಸುವುದು. ಮನುಷ್ಯನು ಐಹಿಕ ಜೀವನದಲ್ಲಿ ನಡೆಸುವ ಪರೋಪಕಾರವೇ ಅವನಿಗೆ ಪರಲೋಕದ ಪಾಥೇಯವಾಗಿರುವುದು ; ಅದೇ ಅವನಿಗೆ ಪರಲೋಕ ದಲ್ಲಿ ಸುಖವನ್ನುಂಟುಮಾಡುವ ನಿಜವಾದ ಸಂಪತ್ತು, ಮನುಷ್ಯನು ಸತ್ತರೆ, ಅವನು ಎಷ್ಟು ಸ್ವತ್ತನ್ನು ಗಳಿಸಿ ತನ್ನವರಿಗಾಗಿ ಬಿಟ್ಟಿದ್ದಾನೆಂದು ಜನರು ಸಾಮಾನ್ಯವಾಗಿ ಕೇಳುವರು. ಆದರೆ, ದೇವ ದೂತರು ಸತ್ಯನ ನನ್ನು ಕೇಳುವ ಪ್ರಶ್ನೆಯು ಇದಲ್ಲ. - ನೀನು ಪರಲೋಕಕ್ಕೆ ಹೊರಡು ವುದಕ್ಕೆ ಮೊದಲು ಯಾವ ಯಾವ ಪುಣ್ಯ ಕಾರ್ಯಗಳ ಫಲವನ್ನು ಅಲ್ಲಿಗೆ ಕಳುಹಿಸಿರುವೆ ?' ಎಂಬುದೇ ಅವರ ಪ್ರಶ್ನೆ, ಮಹಮ್ಮದನ ಈ ಬೋಧನೆಯನ್ನು ಕೇಳಿ, ಸರಳ ಹೃದಯನಾದ ಅವನ ವಾಕ್ಯ ತರಂಗಗಳಿಂದ ಉತ್ಸಾಹಿತರಾಗಿ, ಅಲ್ಲಿ ನೆರೆದಿದ್ದವರೆಲ್ಲರೂ