________________
೪೬ ಪೈಗಂಬರ ಮಹಮ್ಮದನು ಸಂತೋಷಿಸಿದರು. ಅವರಲ್ಲೊಬ್ಬನು, 'ಗುರುವೇ! ನಮ್ಮ ತಾಯಿಯು ಮೃತಳಾಗಿದ್ದಾಳೆ ; ಅವಳ ಅಂತರಾತ್ಮ ತೃಪ್ತಿಗಾಗಿ ನಾನು ಯಾವ ದಾನವನ್ನು ಮಾಡುವುದು ಅತ್ಯುತ್ತಮವಾದುದು ? ಎಂದು ಕೇಳಿದನು. ಆಗ ಬೇಸಗೆಯ ಕಾಲ; ಮರಳು ಕಾಡುಗಳಿಂದ ತುಂಬಿದ್ದ ಅರಬೀಸ್ಥಾನದಲ್ಲಿ ಆಗ ಬಿಸಿಲಿನ ಬೇಗೆ ; ಆದುದರಿಂದ ಜನರಿಗೆ ನೀರೇ ಅಮೃತವೆಂದು ತೋರುವಷ್ಟು ಅಂತರ್ದಾಹವಿದ್ದಿತು; ಮಹಮ್ಮದನು ಈ ಸ್ಥಿತಿಯನ್ನು ಕಂಡು, “ ನೀರಿನ ದಾನವನ್ನು ಮಾಡಯ್ಯಾ ! ಅದೇ ಸರ್ವೋತ್ತಮವಾದುದು. ದಾಹ ಪೀಡಿತರಾದವರಿಗೆ ಯಥೇಷ್ಟವಾಗಿ ನೀರು ದೊರೆಯುವಂತೆ ಆಕೆಯ ಹೆಸರಿನಲ್ಲಿ ಒಂದು ಬಾವಿಯನ್ನು ತೊಡಿಸಯ್ಯಾ! ಎಂದು ಆತನಿಗೆ ಉತ್ತರ ಹೇಳಿದನು. ಸಾಧುಗಳ ಉಪದೇಶವು ಅನೇಕ ಸಂದರ್ಭಗಳಲ್ಲಿ ಪುರಾಣ ವೈರಾಗ್ಯವೆನಿಸುವ ಕ್ಷಣಿಕ ವಾದ ಧರ್ಮಾಸಕ್ತಿಯನ್ನು ಹುಟ್ಟಿಸದೆ, ಅಚಲವಾದ ಶಂಕುಸ್ಥಾಪನೆ ಯನ್ನು ಮಾಡಿ ಧರ್ಮ ಸೌಧವನ್ನು ಕಟ್ಟಿಸಲು ಸಹಕಾರಿಯಾಗುತ್ತದೆ. ಆದುದರಿಂದಲೇ, ಗುರುವಿನ ಉಪದೇಶವನ್ನು ಕೇಳಿದ ಆ ಶಿಷ್ಯನು ತಮ್ಮ ತಾಯಿಯ ಹೆಸರಿನಲ್ಲಿ ಒಂದು ಬಾವಿಯನ್ನು ತೊಡಿಸಿ, ಅದರಿಂದ ದೊರೆತ ಧರ್ಮವು ತಮ್ಮ ತಾಯಿಗೆ ಸೇರಲೆಂದು ಭಗವಂತನನ್ನು ಪ್ರಾರ್ಥಿಸಿದನು. ಸದುಪದೇಶವನ್ನು ಮಾಡುವ ಗುರುವೂ, ಅದನ್ನು ಆಚರಣೆಗೆ ತರುವ ಶಿಷ್ಯನೂ ಇಬ್ಬರೂ ಧನ್ಯರು. ನಾಲಗೆಯಿಂದಾಗುವ ಶ್ರೇಷ್ಠವಾದ ಮತ್ತೊಂದು ಪರೋಪ ಕಾರವೂ ಉಂಟು : ಇತರರನ್ನು ನೋಯಿಸದೆ ಸವಿ ನುಡಿಗಳನ್ನಾಡಿ ಅವರನ್ನು ಸಂತೋಷ ಪಡಿಸುವುದು ; ಇದರಷ್ಟು ಶ್ರೇಷ್ಠವಾದುದು ಮತ್ತಾವುದೂ ಇಲ್ಲ. ಆದರೆ, ಇದರ ವಿಷಯದಲ್ಲಿ ಜನರಿಗಿರುವಷ್ಟು ಅಲಕ್ಷ್ಯ ಭಾವವೂ ಮತ್ತಾವುದರಲ್ಲಿಯೂ ಇಲ್ಲ. ಅದರಲ್ಲಿಯ ಮುಖ್ಯ ವಾಗಿ, ಅಧಿಕಾರ ಮದದಿಂದಲೂ ಧನ ಮದದಿಂದಲೂ ಬೀಗಿರುವ ದುರಹಂಕಾರಿಗಳಂತು ಇದಕ್ಕೆ ಲೇಶವೂ ಗಮನಕೊಡುವುದಿಲ್ಲ. ಸವಿ ನುಡಿ ಗಳ ಶ್ರೇಷ್ಟತೆಯನ್ನು ಮಹಮ್ಮದನು ಚೆನ್ನಾಗಿ ಅರಿತಿದ್ದನು. ಒಮ್ಮೆ ಮದೀನಾ ನಗರಕ್ಕೆ ಬಂದಿದ್ದ ಬಸ್ರಾ ನಗರದವನೊಬ್ಬನು, ಮಸೀದಿಗೆ