ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಕೊಂಡು ನನ್ನ ಮುಖದ ಚರ್ಮವೂ ಸುಲಿದುಹೋಗುವಂತೆ ಮಾಡು ” ಎಂದನಂತೆ. ಅದನ್ನು ಕಂಡು ಎಲ್ಲರೂ ವಿಸ್ಮಿತರಾದರಂತೆ. ಬಿಸಿಲು ವಿಪರೀತವಾಗಿ ಕಾಯುತ್ತ ದಗೆಯ ಸೀಮೆಯಾಗಿರುವ ಅರಬ್ಬಿ ದೇಶದಲ್ಲಿ ಮಹಮ್ಮದನು ತನ್ನ ಅನುಯಾಯಿಗಳೊಡನೆ ಸಂಚಾರ ಹೊರಟಾಗ, ದಣಿವನ್ನು ಹೋಗಲಾಡಿಸಿ ವಿಶ್ರಮಿಸಿಕೊಳ್ಳಲು ನೆಳಲಿನಿಂದ ಕೂಡಿದ ಶೀತಲ ಪ್ರದೇಶವನ್ನು ಇತರರು ಅವನಿಗೆ ಬಿಟ್ಟು ಕೊಡಲು ಯತ್ನಿಸಿದರೆ ಅವನು, “ ಹಾಗೆ ಮಾಡಬೇಡಿರಿ, ಎಲ್ಲರೂ ಒಂದೇ, ಯಾರು ಮೊಟ್ಟಮೊದಲು ಇಲ್ಲಿಗೆ ಬಂದಿರೋ ಅವರೇ ಆ ಸ್ಥಳ ದಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು ಅರ್ಹರು ; ನನ್ನದೇನು ಹೆಚ್ಚು? ಎಂದು ಹೇಳುತ್ತಿದ್ದನಂತೆ. ಅನೇಕರನ್ನು ವಶವರ್ತಿಗಳನ್ನಾಗಿ ಮಾಡಿಕೊಂಡು ಪ್ರಮುಖ ನಾಗಿರತಕ್ಕವನಲ್ಲಿ ಸ್ವಾರ್ಥ ತ್ಯಾಗ ಬುದ್ಧಿಯು ಅತ್ಯವಶ್ಯವಾಗಿರಬೇಕು. ಮಹಮ್ಮದನಲ್ಲಿ ಈ ಗುಣವೂ ನೆಲೆಗೊಂಡಿದ್ದಿತು. ( ಆಸ್ತಿಕ ಸ್ವಭಾವ ವಳ್ಳವರು ಬಡವರಿಗೂ ಅನಾಥರಿಗೂ ಸೆರೆ ಸಿಕ್ಕಿದವರಿಗೂ ಆಹಾರ ವನ್ನೊದಗಿಸಿ ಸಂತೋಷ ಪಡುತ್ತಾರೆ ?' ಎಂಬುದು ಖುರಾನಿನ ಉಪ ದೇಶ ವಾಕ್ಯ, ಸ್ವಾರ್ಥ ಸಾಧನೆಯ ಲವಲೇಶವನ್ನೂ ಇಟ್ಟುಕೊಳ್ಳದೆ ಪರೋಪಕಾರ ಮಾಡುವುದೇ ಮಹಮ್ಮದನಲ್ಲಿ ಪ್ರಕೃತಿ ಸಿದ್ಧವಾಗಿ ನೆಲಸಿದ್ದ ಸದ್ದುಣ: ಒಮ್ಮೆ, ಒಬ್ಬ ಗೃಹಸ್ಮಳು ಮಹಮ್ಮದನಿಗೆ ಒಂದು ದುಪ್ಪಟಿಯನ್ನು ತಂದು ಕೊಟ್ಟ ಳ೦ತೆ , ಹೊದಿಕೆಯಿಲ್ಲದೆ ಬಹಳ ತೊಂದರೆಯಾಗಿದ್ದುದರಿಂದ ಅವನು ಅದನ್ನು ಸಂತೋಷವಾಗಿ ಸ್ವೀಕರಿ ಸಿದನಂತೆ. ಆಗ ಸಮೀಪದಲ್ಲಿದ್ದವನೊಬ್ಬನು, " ಆಹಾ ! ಎಷ್ಟು ಸೊಗ ಸಾದ ದುಪ್ಪಟಿ ! ಎಂದನಂತೆ. ಮಹಮ್ಮದನು ಒಡನೆಯೇ, “ ತೆಗೆದು ಕೋಳ್ಳಯ್ಯಾ ! ಇದನ್ನು ನೀನೇ ಹೊದೆದುಕೊ” ಎಂದು ಹೇಳಿ ಅದನ್ನು ಅವನಿಗೆ ಕೊಟ್ಟು ಹೊರಟುಹೋದನಂತೆ. ಇತರರು ಅದನ್ನು ಕಂಡು, ದುಪ್ಪಟೆಯನ್ನು ತೆಗೆದುಕೊಂಡ ಮನುಷ್ಯನನ್ನು ಗದರಿಸಿ, “ ಮಹ ಮ್ಮದನಿಗೆ ದುಪ್ಪಟಿಯಿಲ್ಲದೆ ಬಹಳ ತೊಂದರೆಯಾಗಿದ್ದಿತು. ನೀನು ಅದನ್ನು ಕಸಿದುಕೊಂಡೆ, ಕೇಳಿದುದನ್ನು ಕೊಡದೆ, ಇಲ್ಲವೆಂದು ಹೇಳುವ